BBK 13: ಸುವರ್ಣ ಪ್ಲಸ್ನಲ್ಲೂ ‘ಬಿಗ್ ಬಾಸ್ ಕನ್ನಡ 13’ ಪ್ರಸಾರ; ಸೀಸನ್ 2 ಬಳಿಕ ಮತ್ತೆ ದೊಡ್ಮನೆ ಆಟ

ಬಿಗ್ ಬಾಸ್ ಕನ್ನಡ 13 ಈ ಬಾರಿ ಕೇವಲ ಕಲರ್ಸ್ ಕನ್ನಡದಲ್ಲಷ್ಟೇ ಅಲ್ಲ, ಸುವರ್ಣ ಪ್ಲಸ್ನಲ್ಲಿಯೂ ಪ್ರಸಾರ ಆಗಲಿದೆ.
ಸಹಪಾಠಿ ಮೇಲೆ ಹಲ್ಲೆ ಆರೋಪ; ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸೇರಿ 5ರ ವಿರುದ್ಧ FIR

ಸಹಪಾಠಿ ಮನೀಶ್ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR ದಾಖಲು.
ಕಾರ್ ಚೇಸ್ ಮಾಡಿದ್ದಕ್ಕೆ ಸಹಪಾಠಿಗಳ ಮೇಲೆ ಹಲ್ಲೆ; ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಆರೋಪ

ದುನಿಯಾ ವಿಜಯ್ ಪುತ್ರ ಸಾಮ್ರಾಟ್ ತನ್ನ ಸಹಪಾಠಿ ಮನೀಶ್ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
Darshan: ವಿವಾದದ ಬಳಿಕ ದರ್ಶನ್ ಭೇಟಿ ಮಾಡಿದ ಜಮೀರ್ ಪುತ್ರ ಝೈದ್ ಖಾನ್; ಮಾಫಿ ಸಾಕ್ಷಿ ಎಫೆಕ್ಟ್ ಹೇಗಿದೆ?

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಝೈದ್ ಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದಾರೆಂಬ ವರದಿ ಮಾಡಲಾಗಿದೆ. ಒಂದು ಕಾಲದಲ್ಲಿ ದರ್ಶನ್‌ಗೆ ಇಬ್ಬರೂ ಆತ್ಮೀಯರಾಗಿದ್ದರು. ಇವರೊಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಇದ್ದರು ಎನ್ನಲಾಗಿದೆ.
ಯುವ ಕವಿ ರಾಘವೇಂದ್ರ ಸಿವಿಯ ‘ದೇವರ ಬಿಕ್ಕಳಿಕೆಗಳು’ ಕವನ ಸಂಕಲನಕ್ಕೆ ಮನಸೋತ ಡಾ.ನಾಗೇಂದ್ರ ಪ್ರಸಾದ್

ಕವಿತೆಗಳು ಕವಿಯ ಕಲ್ಪನೆಯ ಜೊತೆಗೆ ಓದುಗನ ಊಹೆಗೆ ಅನುಗುಣವಾಗಿ ಹರಿವ ನದಿ . ಕವಿತೆ ಬರೆಯುವುದು ಒಂದು ತಪಸ್ಸಾದರೆ ಓದುವುದು ಒಂದು ಸುಖ. ಈ ನಿಟ್ಟಿನಲ್ಲಿ ಅದನ್ನು ಸೃಷ್ಟಿಸಿ ಜನರಿಗೆ ತಲುಪಿಸುವುದು ಸಾಧನೆಯೇ ಸರಿ. ಇದಕ್ಕೆ ಪೂರಕವೆಂಬಂತೆ “ಸಸಿ ಪ್ರಕಾಶನವು” ಈಗಾಗಲೇ 15 ಕ್ಕೂ ಹೆಚ್ಚು ಜನಪ್ರಿಯ ಹಾಗೂ ಯುವ ಬರಹಗಾರರಿಗೆ ವೇದಿಕೆಯೊಂದನ್ನು ಕಲ್ಪಿಸಿ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ. ಇದೀಗ, ಕಿರುತೆರೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ, ಸಿನಿಮಾಗಳಿಗೆ ಗೀತ ರಚನೆಯನ್ನೂ ಮಾಡುತ್ತಿರುವ ರಾಘವೇಂದ್ರ ಸಿವಿ ಅವರ “ದೇವರ ಬಿಕ್ಕಳಿಕೆಗಳು” […]
ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ರಿಷಬ್ ಶೆಟ್ಟಿ; ಅಪರೂಪದ ಸಾಧನೆ ಮಾಡಿದ ‘ಕಾಂತಾರ’ ಸ್ಟಾರ್

ಪೋರ್ಬ್ಸ್ ಇಂಡಿಯಾದ ಶೋಪಸ್ಟಾಪರ್ಸ್ 2026ನ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಟಾನ ಪಡೆದಿದ್ದು ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದಂತಾಗಿದೆ.
Toxic OTT: ಬಿಡುಗಡೆಯಾದ ಎರಡೇ ದಿನಕ್ಕೆ ‘ಟಾಕ್ಸಿಕ್’ ಒಟಿಟಿ ಡೀಲ್; ಮಿಶ್ರ ಪ್ರತಿಕ್ರಿಯೆ ನಡುವೆಯೂ ಭಾರೀ ಮೊತ್ತಕ್ಕೆ ಸೇಲ್?

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ‘ಟಾಕ್ಸಿಕ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಗಸ್ಟ್ 26 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ದಿನವೇ ವರ್ಲ್ಡ್‌ವೈಡ್ ಸುಮಾರು ₹150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ಫಸ್ಟ್ ಡೇ ಫಸ್ಟ್ ಶೋಯಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಸಿನಿಮಾ ನೋಡುವುದನ್ನು ಸಿನಿ ಪ್ರಿಯರು ನಿಲ್ಲಿಸಿರಲಿಲ್ಲ. ಆದರೆ, 2ನೇ ದಿನ ಸಿನಿಮಾದ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ ಕಂಡಿದೆ. ಅದಕ್ಕೆ ವರ್ಕಿಂಗ್ ಡೇ ಕಾರಣ ಅನ್ನೋದು ವಿತರಕರ ವಾದ. ‘ಟಾಕ್ಸಿಕ್’ […]
Toxic Review: ಅಬ್ಬರ, ಅದ್ಧೂರಿತನ ಎಲ್ಲವೂ ಉಳ್ಳ ‘ಟಾಕ್ಸಿಕ್’ನಲ್ಲಿ ಮಿಸ್ ಆಗಿರುವುದೇನು?

ಯಶ್ ನಟನೆ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಿದ್ದು, ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿರುವ ಪ್ಲಸ್ಸೇನು, ಮೈನಸ್ಸೇನು?
‘ಟಾಕ್ಸಿಕ್’ ಹೊಸ ಇತಿಹಾಸ ಕೆತ್ತಲಿ ಎಂದು ಕವನ ಬರೆದು ಹಾರೈಸಿದ ಯೋಗರಾಜ್ ಭಟ್
ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ‘ಟಾಕ್ಸಿಕ್’ ಚಿತ್ರದ ಯಶಸ್ಸಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಯೋಗರಾಜ್ ಭಟ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪುಟ್ಟ ಪದ್ಯದ ರೀತಿಯಲ್ಲಿ ಸಾಲುಗಳನ್ನು ಬರೆದುಕೊಂಡು ತಮ್ಮ ಶುಭಾಶಯ ತಿಳಿಸಿದ್ದಾರೆ. ಅವರ ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. “ನಾಡಿಗೆ ನಮಸ್ತೆ, ಜೈ ಟಾಕ್ಸಿಕ್, ಜೈ ಚಿತ್ರತಂಡ, ಜೈ ಗೀತು ಮೋಹನ್‌ದಾಸ್, ಜೈ ಕೆವಿಎನ್, ಜೈ ಜನತೆ, ಜೈ ಸಿನಿಮಾ […]
ಟಾಕ್ಸಿಕ್ ಗ್ಲೋಬಲ್ ಕಲೆಕ್ಷನ್ ₹150 ಕೋಟಿ
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ‘ಟಾಕ್ಸಿಕ್’ ಮೊದಲ ದಿನದ ಅಧಿಕೃತ ಕಲೆಕ್ಷನ್ ಹೊರಬಿದ್ದಿದೆ. ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಸಿನಿಮಾ ತಂಡ ಈ ಅಂಕಿ-ಅಂಶಗಳನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಹಾಗೇ ಎರಡನೇ ದಿನವೂ ಕೂಡ ಹಿಂದಿ ಬಿಲ್ಟ್‌ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿರುವ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳು ವರದಿ ಮಾಡುತ್ತಿದ್ದಾರೆ.