
ಹಾಸನ: ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಕೊಟ್ಟಿರೋ ಸಿನಿಮಾ ‘ಪ್ರೇಮದ ಊರಲಿ’ (Premada Oorali) ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಷ್ಟೇ ಅಲ್ಲದೇ, ತಾಲೂಕು ಕೇಂದ್ರಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಜ್ಯದ ಮೂಲೆಮೂಲೆಯಲ್ಲಿಯೂ ತೆರೆಕಂಡ ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್ ಬೀಳುತ್ತಿವೆ.
ಹಾಸನ ಜಿಲ್ಲೆಯ ಅರಸೀಕೆರೆಯ ರತ್ನ ಚಿತ್ರಮಂದಿರದಲ್ಲೂ ‘ಪ್ರೇಮದ ಊರಲಿ’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನರು ಕಿಕ್ಕಿರಿದು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಹೀಗಾಗಿ ತಾಲೂಕು ಮಟ್ಟದಲ್ಲಿಯೂ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಬಿ ಸೆಂಟರ್‌ಗಳಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರೋದು ಸೋಲಿನಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಹೊರ ಹುರುಪು ಸಿಕ್ಕಂತಾಗಿದೆ.

ಅರಸೀಕರೆ ರತ್ನ ಚಿತ್ರಮಂದಿರದ ಕ್ಯಾಂಟೀನ್ ಮಾಲೀಕರಾದ ರಘು ಈ ಸಿನಿಮಾದ ಯಶಸ್ಸಿನ ಮತ್ತೊಂದು ಮುಖವನ್ನು ತೆರೆದಿಡುತ್ತಾರೆ. “ಹಲವು ವರ್ಷಗಳಿಂದ ಕಾಯುತ್ತಿದ್ದ ಆ ಕಾಲ ಈಗ ಬಂದಿದೆ” ಎಂದು ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೌಸ್‌ಫುಲ್ ಪ್ರದರ್ಶನಗಳು ನಡೆಯುತ್ತಿವೆ. ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಿಸಲು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುತ್ತಿರೋದರಿಂದ ಅವರ ಬ್ಯುಸಿನೆಸ್ ಕೂಡ ಉತ್ತಮಗೊಂಡಿದೆ. ಹೀಗಾಗಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Premada Oorali: ಮುಚ್ಚಿದ್ದ 50 ಥಿಯೇಟರ್ ಓಪನ್ ಮಾಡಿದ ‘ಪ್ರೇಮದ ಊರಲಿ’ ಸಿನಿಮಾ ಅಬ್ಬರ
ರಘು ಹೇಳುವ ಪ್ರಕಾರ, “ಈ ಸಿನಿಮಾಗೆ ಶುಕ್ರವಾರ ಹೌಸ್‌ಫುಲ್ ಬೋರ್ಡ್ ಹಾಕಲಾಗಿದ್ದು, ಇಂದಿನವರೆಗೂ ಅದನ್ನು ತೆಗೆಯುವ ಪರಿಸ್ಥಿತಿ ಬಂದಿಲ್ಲ. ಇದು ಸಿನಿಮಾದ ಮೇಲಿರುವ ಪ್ರೇಕ್ಷಕರ ಪ್ರೀತಿಯನ್ನು ತೋರಿಸುತ್ತದೆ. ಇದು ಕೇವಲ ಒಂದು ಚಿತ್ರಮಂದಿರದ ಯಶಸ್ಸಲ್ಲ. ತಾಲೂಕು ಮಟ್ಟದಲ್ಲಿಯೂ ಕನ್ನಡ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕ ವರ್ಗವಿದೆ ಎಂಬುದನ್ನು ಸಾಬೀತುಪಡಿಸುವ ಬೆಳವಣಿಗೆ” ಅನ್ನೋದು ಥಿಯೇಟರ್‌ನ ಕ್ಯಾಂಟೀನ್ ಮಾಲೀಕರ ಅಭಿಪ್ರಾಯ.
ಸಿನಿಮಾ ಗೆದ್ದರೆ ಸಾವಿರಾರು ಕುಟುಂಬಗಳಿಗೆ ಬದುಕು
ಒಂದು ಸಿನಿಮಾ ಯಶಸ್ವಿಯಾದರೆ ಅದರ ಲಾಭ ಕೇವಲ ನಿರ್ಮಾಪಕ, ನಿರ್ದೇಶಕ, ಇಲ್ಲವೇ ನಟರಿಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರಮಂದಿರಗಳ ಮಾಲೀಕರು, ಉದ್ಯೋಗಿಗಳು, ಕ್ಯಾಂಟೀನ್ ಸಿಬ್ಬಂದಿ, ಟಿಕೆಟ್ ಕೌಂಟರ್ ಕೆಲಸಗಾರರು, ಸ್ವಚ್ಛತಾ ಸಿಬ್ಬಂದಿ, ಪೋಸ್ಟರ್ ವಿನ್ಯಾಸಕರು, ಪ್ರಚಾರ ತಂಡಗಳು ಹಾಗೂ ಸಿನಿಮಾ ವಿತರಕರು ಹೀಗೆ ಉದ್ಯೋಗದ ಜೊತೆಗೆ ಆದಾಯದ ಅವಕಾಶಗಳು ಹೆಚ್ಚಾಗುತ್ತವೆ.
100 ದಿನಗಳ ಪ್ರದರ್ಶನದ ನಿರೀಕ್ಷೆ
‘ಪ್ರೇಮದ ಊರಲಿ’ ಪ್ರದರ್ಶನಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಕಂಡು, ಈ ಸಿನಿಮಾ 100 ದಿನಗಳವರೆಗೆ ಪ್ರದರ್ಶನ ಕಾಣಬಹುದು ಎಂಬ ಆಶಾವಾದವನ್ನು ರಘು ವ್ಯಕ್ತಪಡಿಸುತ್ತಾರೆ. ಅವರ ಈ ಮಾತು ಸಿನಿಮಾ ಪ್ರೇಮಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುವಂತಿದೆ. ಕನ್ನಡ ಚಿತ್ರರಂಗಕ್ಕೆ ಬೇಕಾಗಿರುವುದು ಕೇವಲ ದೊಡ್ಡ ಬಜೆಟ್ ಸಿನಿಮಾಗಳಲ್ಲ, ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಕಥೆಗಳು. ಕುಟುಂಬ ಸಮೇತ ನೋಡಬಹುದಾದ ಸಿನಿಮಾಗಳು ಮತ್ತು ಚಿತ್ರಮಂದಿರಗಳಲ್ಲಿ ಜನರನ್ನು ಉಳಿಸಿಕೊಳ್ಳುವ ಗುಣಮಟ್ಟದ ಸಿನಿಮಾಗಳು. ಅಂತಹ ಸಿನಿಮಾಗಳಿಗೆ ಪ್ರೇಕ್ಷಕರು ಕೈಹಿಡಿದಾಗ ಕನ್ನಡ ಚಿತ್ರರಂಗದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ.




