☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: ಅಧಿಕಾರ ಪಡೆಯುವ ಪ್ರಯತ್ನ; ಇಂದು ನಿಮ್ಮ ರಾಶಿ ಭವಿಷ್ಯ

Daily Horoscope: October 17 Zodiac Predictions And Astrological Updates

Daily Horoscope: ಅಕ್ಟೋಬರ್ 17ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರು ಆಡಳಿತ ಹಾಗೂ ಅಧಿಕಾರ ಪಡೆದುಕೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಲಿದ್ದಾರೆ. ಇಂದಿನ ದಿನದಲ್ಲಿ ಹೋರಾಟಕ್ಕೆ ಧೈರ್ಯ, ಸಮಾಜಸೇವೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಶನಿವಾರದ ದಿನ ಇದಾಗಿದೆ. ಇಂದು ಶತ್ರುಕಾಟ, ಅವಹೇಳನ ಹಾಗೂ ಅಸತ್ಯದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗರೂಕರಾಗಿರಬೇಕು.

ಶರನ್ನವರಾತ್ರದ ಏಳನೆಯ ದಿನವಾದ ಇಂದು ಜಗನ್ಮಾತೆಯ ಸ್ವರೂಪಳಾದ ಕಾಲರಾತ್ರಿ ದೇವಿಯ ಆರಾಧನೆಯು ಪ್ರತಿಯೊಬ್ಬರಿಗೂ ಮಂಗಲ ತರಲಿ. ತಾಯಿಯು ಸಕಲರ ಸಂಕಟಗಳನ್ನು ಸಂಹರಿಸಿ, ಎಲ್ಲರ ಬಾಳಿನಲ್ಲಿ ಶಕ್ತಿ ಹಾಗೂ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಮೇಷ ರಾಶಿ

ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ಉನ್ನತ ಸ್ಥಾನದ ಪ್ರಾಪ್ತಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಶತ್ರುಗಳ ತೊಂದರೆ ತಡೆಯಲು ಕಾನೂನಿನ ನೆರವು ಪಡೆಯುವಿರಿ.

ವೃಷಭ ರಾಶಿ

ಯಾರ ಮಾತನ್ನೂ ಕಣ್ಣಮುಚ್ಚಿ ನಂಬದೆ ಪೂರ್ವಯೋಜನೆ ರೂಪಿಸಿ. ಸಾಮರ್ಥ್ಯದ ಮೇಲೆ ಪೂರ್ಣ ವಿಶ್ವಾಸವಿರಲಿ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿ ಕೆಲಸದಲ್ಲಿ ಮಗ್ನರಾಗುವಿರಿ.

ಮಿಥುನ ರಾಶಿ

ಅಧಿಕ ಶ್ರಮದಿಂದ ನಿರೀಕ್ಷಿತ ಯಶಸ್ಸು ಸಿಗಲಿದೆ. ಸಜ್ಜನರ ಭೇಟಿಯಾಗುವ ಯೋಗವಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಹೊಸ ಸಂಬಂಧಗಳ ಮೇಲೆ ಆಸಕ್ತಿ ಹೆಚ್ಚಾಗಲಿದೆ.

ಕರ್ಕಾಟಕ ರಾಶಿ

ವೃತ್ತಿ ಕ್ಷೇತ್ರದಲ್ಲಿ ಸಂತೋಷದಿಂದ ಇರುವಿರಿ. ನಿಮ್ಮ ಮಾತುಗಳು ಸರಳ ಹಾಗೂ ಸ್ಪಷ್ಟವಾಗಿರಲಿ. ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕುವುದು ಬೇಡ. ವಸ್ತುಗಳ ಬಗ್ಗೆ ಎಚ್ಚರವಿರಲಿ.

ಸಿಂಹ ರಾಶಿ

ಕಾರ್ಯ ಸಫಲತೆಗೆ ಹೆಚ್ಚಿನ ಶ್ರಮ ಅಗತ್ಯ. ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಿ. ಹಿರಿಯರಿಗೆ ಯೋಗ್ಯವಾದ ಗೌರವ ನೀಡುವುದು ಉತ್ತಮ.

ಕನ್ಯಾ ರಾಶಿ

ಒರಟು ವರ್ತನೆಯಿಂದ ಇತರರಿಗೆ ಬೇಸರವಾಗಬಹುದು. ಸಮಯಕ್ಕೆ ಸರಿಯಾಗಿ ಭೋಜನ ಮಾಡದಿರುವುದು ಆರೋಗ್ಯ ಕೆಡಿಸಬಹುದು. ಭೂ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ತುಲಾ ರಾಶಿ

ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲಾಗುವ ಸಾಧ್ಯತೆಯಿದೆ. ಸೂಕ್ತ ಮಾರ್ಗ ದರ್ಶನ ಪಡೆದು ಮುನ್ನಡೆಯಿರಿ. ಸಮಾಜದಲ್ಲಿ ಸಭ್ಯತೆಯಿಂದ ವರ್ತಿಸುವುದು ಉತ್ತಮ.

ವೃಶ್ಚಿಕ ರಾಶಿ

ಕಚೇರಿಯ ಕೆಲಸ ಮುಗಿಸಿ ಉತ್ಸಾಹದಿಂದ ಇರುವಿರಿ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಕೋಪ ತಾತ್ಕಾಲಿಕವಾಗಿದ್ದರೂ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸೂಕ್ತ.

ಧನು ರಾಶಿ

ಅತಿಯಾದ ಆತ್ಮವಿಶ್ವಾಸದಿಂದ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ರಹಸ್ಯ ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಸಂಬಂಧಗಳಲ್ಲಿ ಬಿರುಕು ಬಾರದಂತೆ ಮಾತು ಹಿತವಾಗಿರಲಿ.

ಮಕರ ರಾಶಿ

ಪ್ರಯಾಣದ ಆಯಾಸದಿಂದ ವಿಶ್ರಾಂತಿ ಪಡೆಯುವಿರಿ. ನಿರಂತರ ಪರಿಶ್ರಮದಿಂದ ಕಾರ್ಯಗಳು ಸಫಲವಾಗಲಿವೆ. ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆಯಿದೆ.

ಕುಂಭ ರಾಶಿ

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಕಷ್ಟವಾದೀತು. ಶತ್ರುಗಳ ವಿರುದ್ಧ ವಿಜಯ ಸಾಧಿಸುವಿರಿ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗಾವಕಾಶಗಳು ಸಿಗಲಿವೆ.

ಮೀನ ರಾಶಿ (Daily Horoscope)

ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇರಲಿದೆ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಗಳಿಸಿದ ಹಣ ತಕ್ಷಣ ಖಾಲಿಯಾಗುವ ಸಾಧ್ಯತೆಯಿದ್ದು, ಆರ್ಥಿಕ ಜಾಗ್ರತೆ ವಹಿಸಿ.