ವಜ್ರ ಬಚ್ಚಿಟ್ಟು ಎಲ್ಲರನ್ನೂ ದಾರಿ ತಪ್ಪಿಸಿದ ಗಗನ್: ವೈರಲ್ ಆಯ್ತು ಪ್ರೋಮೋ

ಬಿಗ್‌ಬಾಸ್ ಕನ್ನಡ 13ರಲ್ಲಿ ಸೀಕ್ರೆಟ್ ಡೈಮಂಡ್ ಟಾಸ್ಕ್ ರಂಗೇರಿದ್ದು, ನಟ ಗಗನ್ ಚಿನ್ನಪ್ಪ ವಜ್ರವನ್ನು ರಹಸ್ಯವಾಗಿ ಬಚ್ಚಿಟ್ಟು ಮಾಸ್ ಗೇಮ್ ಆಡಿದ್ದಾರೆ. ತಮ್ಮ ಜಾಣ್ಮೆ ಹಾಗೂ ನಟನೆಯಿಂದ ಇತರ ಸ್ಪರ್ಧಿಗಳನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿರುವ ಗಗನ್, ಮೊದಲ ದಿನದ ಆಟದಲ್ಲೇ ಸಖತ್ ಮಿಂಚಿದ್ದಾರೆ.