☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 28°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 28°C | AQI 180
Bengaluru: ☀️ 24°C | AQI 112

VOKKALIGA : ಹೆಚ್.‌ಡಿ.ಕೆ ವಿರುದ್ಧ ಒಕ್ಕಲಿಗ ಸ್ವಾಮೀಜಿ ಗುಡುಗು, ಡಿಕೆಶಿಗೆ ಬಹಿರಂಗ ಬೆಂಬಲ

Image of HD Kumaraswamy with Vokkaliga Swamiji
ರಾಜ್ಯ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಸದ್ಯ ಒಕ್ಕಲಿಗ (Vokkaliga) ಸಮುದಾಯದ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ಬೆಳೆದು ನಿಂತಿದ್ದಾರೆ.

ಮುಖ್ಯಾಂಶಗಳು

  • ಡಿಕೆಶಿ ಗೆ ಆಡಳಿತ ಮಾಡಲು ಬಿಡಿ
  • ಮುಖ್ಯಮಂತ್ರಿಗಳಿಗೆ ತೊಂದರೆ ಕೊಡಬೇಡಿ
  • ಹೆಚ್.ಡಿ.ಕೆ ವಿರುದ್ಧ ಸ್ವಾಮೀಜಿ ಕಿಡಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದ್ಯ ಒಕ್ಕಲಿಗ (Vokkaliga) ಸಮುದಾಯದ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ಬೆಳೆದು ನಿಂತಿದ್ದಾರೆ. ಹಲವು ದಶಕಗಳ ಕಾಲ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಅವರ ಕುಟುಂಬವೇ ಈ ಸಮುದಾಯದ ನಿರ್ವಿವಾದ ನಾಯಕತ್ವವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ನಾಯಕತ್ವದ ಪೈಪೋಟಿ ತೀವ್ರಗೊಂಡಿದೆ. ಈ ಸಂಘರ್ಷ ಇದೀಗ ರಾಜಕೀಯ ವೇದಿಕೆಯನ್ನು ದಾಟಿ ಮಠದ ಅಂಗಳವನ್ನು ಪ್ರವೇಶಿಸಿದೆ.

ಹೆಚ್.ಡಿ.ಕೆ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ

ಕೆಂಪೇಗೌಡರ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವಾಗ ಅವರಿಗೆ ತೊಂದರೆ ನೀಡಲಾಗುತ್ತಿದೆ. ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ವರ್ತಿಸಲಾಗುತ್ತಿದೆ. ಒಂದೇ ಸಮುದಾಯದವರಾಗಿದ್ದರೂ ಅವರನ್ನು ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ತಪ್ಪು ಕಂಡುಬಂದರೆ ಟೀಕಿಸಿ ಸಲಹೆ ಸೂಚನೆ ನೀಡಬೇಕು. ದೂರದೃಷ್ಟಿಯಿಂದ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲಸ ಮಾಡಲು ಸುಗಮವಾದ ದಾರಿಯನ್ನು ಮಾಡಿಕೊಡಬೇಕು. ಹೊಸ ಹೊಸ ಯೋಜನೆಗಳಿಗೆ ಸೂಕ್ತ ಸಲಹೆಗಳನ್ನು ನೀಡಬೇಕು. ಆಗ ಬೆಂಗಳೂರನ್ನು ಬೆಳೆಸುವುದು ಈ ಮುಖ್ಯಮಂತ್ರಿಯ ಕೈಯಲ್ಲಿಯೂ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಮತಾಂತರ, ಗೋಹತ್ಯೆ ಕಾಯ್ದೆ ಹಿಂಪಡೆದರೆ ಹುಷಾರ್ : ಮುತಾಲಿಕ್ ಗುಡುಗು

ಈ ಬೆಳವಣಿಗೆ ಕೇವಲ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಮುನಿಸಾಗಿ ಉಳಿದಿಲ್ಲ. ಒಕ್ಕಲಿಗ ಸಮುದಾಯದ ನಾಯಕತ್ವ ಯಾರ ಕೈಯಲ್ಲಿ ಇರಬೇಕು ಎಂಬ ದೀರ್ಘಕಾಲದ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ದೇವೇಗೌಡರ ಕುಟುಂಬದ ಹಿಡಿತ ಸಡಿಲವಾಗುತ್ತಿದ್ದಂತೆ ಶಿವಕುಮಾರ್ ಅವರನ್ನು ಸಮುದಾಯದ ಹೊಸ ಕೇಂದ್ರಬಿಂದುವಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಸಂದೇಶ ಸ್ವಾಮೀಜಿ ಹೇಳಿಕೆಯಿಂದ ರವಾನೆಯಾಗಿದೆ. ಮಠಗಳು ಸಾಮಾನ್ಯವಾಗಿ ನೇರ ರಾಜಕೀಯ ಹೇಳಿಕೆಗಳಿಂದ ದೂರ ಉಳಿಯುತ್ತವೆ. ಆದರೆ ಈ ಬಾರಿ ಸ್ವಾಮೀಜಿ ಬಹಿರಂಗವಾಗಿ ಒಂದು ಬದಿಗೆ ನಿಂತಿರುವುದು ಸಂಘರ್ಷಕ್ಕೆ ಧಾರ್ಮಿಕ ಮತ್ತು ಸಾಮಾಜಿಕ ಆಯಾಮವನ್ನು ನೀಡಿದೆ. ಇದು ಕುಮಾರಸ್ವಾಮಿ ಅವರಿಗೆ ಒತ್ತಡವನ್ನು ಹೆಚ್ಚಿಸಿದರೆ, ಶಿವಕುಮಾರ್ ಅವರಿಗೆ ಸಮುದಾಯದೊಳಗೆ ನೈತಿಕ ಬಲವನ್ನು ತಂದುಕೊಡಬಹುದು. ಮುಂದಿನ ದಿನಗಳಲ್ಲಿ ಈ ಹೇಳಿಕೆ ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸುವ ಸಾಧ್ಯತೆ ಇದೆ.