☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

ಸನ್ನಿ ಡಿಯೋಲ್ ಜೊತೆ ನಟಿಸಿದ್ದ ಬಾಲಿವುಡ್‌ ನಟ ಕನ್ನಡಕ್ಕೆ ಎಂಟ್ರಿ; ಯಾರಿದು ಪ್ರಶಾಂತ್ ಬಜಾಜ್?

Another Bollywood actor Prashant Bajaj Entered Kannada film industry with Draupadi

ಮುಖ್ಯಾಂಶಗಳು

  • ಮತ್ತೊಬ್ಬ ಬಾಲಿವುಡ್ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ
  • ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಖಳನಟ ಆಗಮನ
  • ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪ್ರಶಾಂತ್ ಬಜಾಜ್ ಬ್ಯುಸಿ

ಮುಂಬೈ: ಇತ್ತೀಚೆಗಂತೂ ನಟ-ನಟಿಯರಿಗೆ ಬೇರೆ ಬೇರೆ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿವೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಶುರುವಾದ ಮೇಲಂತೂ ಒಂದೇ ಸಮಯಕ್ಕೆ ಮೂರು-ನಾಲ್ಕು ಭಾಷೆಗಳಲ್ಲಿ ನಟಿಸುವುದಕ್ಕೆ ಶುರುವಿಟ್ಕೊಂಡಿದ್ದಾರೆ. ಅಷ್ಟೇ ಕನ್ನಡದಲ್ಲೂ ಬೇರೆ ಭಾಷೆಯ ನಟರನ್ನು ನೋಡುವುದಕ್ಕೆ ಸಿಗುತ್ತಿದೆ. ಇಂತಹ ನಟರಲ್ಲಿ ಹೊಸದಾಗಿ ಸೇರ್ಪಡೆಯಾಗಿರೋರು ಪ್ರಶಾಂತ್ ಬಜಾಜ್ (Prashant Bajaj).

ಈಗಾಗಲೇ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿರುವ ಪ್ರಶಾಂತ್ ಬಜಾಜ್ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅತೀ ಕಡಿಮೆ ಸಮಯದಲ್ಲಿಯೇ ದಕ್ಷಿಣ ಭಾರತದ ಚಿತ್ರರಂಗದ ಗಮನ ಕೂಡ ಸೆಳೆದಿದ್ದಾರೆ.

ಕೈ ಹಿಡಿತು ‘ಜಾಟ್’ ಸಿನಿಮಾ

ಅಂದ ಹಾಗೆ, ಪ್ರಶಾಂತ್ ಬಜಾಜ್ ಮಹಾರಾಷ್ಟ್ರ ಮೂಲದವರು. ನಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.ಅದರಲ್ಲೂ ಖಳನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಂತಹ ಪಾತ್ರಗಳಿಗೆ ಬೇಕಿರೋ ಗಂಭೀರ ಲುಕ್, ಕಟ್ಟುಮಸ್ತಾದ ದೇಹ, ಬಾಡಿ ಲ್ಯಾಂಗ್ವೇಜ್ ಅನ್ನು ಮೈಗೂಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Salman Khan: 60 ರ ವಯಸ್ಸಿನಲ್ಲಿ ಸಲ್ಮಾನ್‌ ಖಾನ್‌ ರೀತಿ ಬಾಡಿ ಹೊಂದುವುದು ಹೇಗೆ?

ಬಾಲಿವುಡ್ ದಿಗ್ಗಜ ಸನ್ನಿ ಡಿಯೋಲ್ ನಟಿಸಿರೋ ‘ಜಾಟ್’ ಸಿನಿಮಾ ಇವರ ಸಿನಿಕರಿಯರ್‌ಗೆ ಕಿಕ್ ಕೊಟ್ಟಿತ್ತು. ಇದರಲ್ಲಿ ನಟಿಸಿದ್ದ ಸ್ಯಾಂಡಿ ಕರಿಕಾಲನ್ ಪಾತ್ರ ಹೊಸ ಇಮೇಜ್ ಕೊಟ್ಟಿದೆ. ಈ ಚಿತ್ರದ ಬಳಿಕ ಪ್ರಶಾಂತ್ ಬಜಾಜ್‌ಗೆ ಖಳನಾಯಕನ ಪಾತ್ರದಲ್ಲಿ ಬೇರೆ ಬೇರೆ ಚಿತ್ರರಂಗಗಳಿಂದ ಅವಕಾಶಗಳು ಹರಿದು ಬರುತ್ತಿವೆ.

Another Bollywood actor Prashant Bajaj Entered Kannada film industry with Draupadi
Image: Prashant Bajaj/ Instagram

ಕನ್ನಡ ಸಿನಿಮಾ ‘ದ್ರೌಪದಿ’ಯಲ್ಲಿ ಖಳನಾಯಕ

ದಕ್ಷಿಣ ಭಾರತೀಯ ಚಿತ್ರರಂಗ ಪ್ರಶಾಂತ್ ಬಜಾಜ್ ಮೇಲೆ ಕಣ್ಣು ಇಟ್ಟಿದೆ. ಅದರಲ್ಲಿ ಕನ್ನಡ ಚಿತ್ರರಂಗ ಕೂಡ ಒಂದು. ಇತ್ತೀಚೆಗೆ ಸೆಟ್ಟೇರಿರೋ ‘ದ್ರೌಪದಿ’ ಕನ್ನಡ ಸಿನಿಮಾದಲ್ಲಿ ಅವರು ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ವೆಂಕಟ್ ಗೌಡ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಪ್ರಶಾಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಬೇಕಾದಂತೆ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಇದ್ದಕ್ಕಾಗಿ ಈಗಾಗಲೇ ವಿಶೇಷ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಪ್ಯಾಲಿಯೊ ಡಯಟ್ ಮೂಲಕ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಹಾಗಂತ ‘ದ್ರೌಪದಿ’ ಅಷ್ಟೇ ಅಲ್ಲ ಇದರೊಂದಿಗೆ ಇನ್ನೂ ಇನ್ನೆರಡು ಬಿಗ್ ಬಜೆಟ್ ಸಿನಿಮಾಗಳಿಗೂ ಮಾತುಕತೆ ನಡೀತಿದೆ. ಒಂದು ಚಿತ್ರದಲ್ಲಿ ಪೂರ್ಣ ಪ್ರಮಾಣದ ಖಳನಾಯಕನಾಗಿದ್ದರೆ, ಮತ್ತೊಂದರಲ್ಲಿ ರಾಜಕೀಯ ಮುಖಂಡನ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪ್ರಶಾಂತ್ ಬಜಾಜ್

ಕನ್ನಡ ಅಷ್ಟೇ ಅಲ್ಲ ತೆಲುಗು,ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಸಾಯಿ ಧರಂ ತೇಜ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸುತ್ತಿರುವ ಸಿನಿಮಾದಲ್ಲಿ ವಿಲನ್ ಲುಕ್‌ನಲ್ಲಿ ಕಾಣಿಸಲಿದ್ದಾರೆ. ಹಾಗೇ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದು, ದುಲ್ಖರ್ ಸಲ್ಮಾನ್ ಸಿನಿಮಾದಲ್ಲೂ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತಮಿಳಿನಲ್ಲಿ ವಿಜಯ್ ಸೇತುಪತಿ ಸಿನಿಮಾ ‘ಟ್ರೈನ್’ ತಂಡದೊಂದಿಗೆ ಕೈಜೋಡಿಸಿದ್ದಾರೆ.

‘ದ್ರೌಪದಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಈ ನಟ ಮುಂದಿನ ದಿನಗಳಲ್ಲಿ ಖಳನಾಯಕನಾಗಿ ಯಾವ ಮಟ್ಟಿಗೆ ಪ್ರಭಾವ ಬೀರಬಹುದು? ದಕ್ಷಿಣ ಭಾರತದಲ್ಲಿ ಖಳನಾಯಕನಾಗಿ ಗಿಟ್ಟಿಯಾಗಿ ನೆಲೆಯೂರುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.