Salman Khan: 60 ರ ವಯಸ್ಸಿನಲ್ಲಿ ಸಲ್ಮಾನ್‌ ಖಾನ್‌ ರೀತಿ ಬಾಡಿ ಹೊಂದುವುದು ಹೇಗೆ?

Salman Khan

ಸಲ್ಮಾನ್‌ ಖಾನ್‌ (Salman Khan) ವಯಸ್ಸು ಈಗ ಬರೋಬ್ಬರಿ 60, ಎರಡು ದಿನ ಹಿಂದಷ್ಟೆ ಅವರು ಬಿಗ್‌ಬಾಸ್‌ ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವಾಗ ಸೆಲೆಬ್ರಿಟಿಗಳನ್ನು ಟ್ರೋಲ್‌ ಮಾಡುವ ಟ್ರೋಲಿಗರ ಮೇಲೆ ಸಿಟ್ಟಾಗಿ ವೇದಿಕೆ ಮೇಲೆಯೇ ಶರ್ಟ್‌ ಬಿಚ್ಚಿ ನಿಂತು ಬಿಟ್ಟರು. ಅವರ ಬಾಡಿ ನೋಡಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಶಾಕ್.‌ 60 ವರ್ಷ ವಯಸ್ಸಿನ ಸಲ್ಮಾನ್‌ ಖಾನ್‌ ಫಿಟ್‌ ಆದ ಬಾಡಿ ನೋಡಿ 30 ರ ವಯಸ್ಸಿನವರು ನಾಚಿಕೊಳ್ಳಬೇಕು ಹಾಗಿದೆ ಸಲ್ಮಾನ್‌ ಬಾಡಿ. ಸಲ್ಮಾನ್‌ ಖಾನ್‌ ವೈಯಕ್ತಿಕ ಬದುಕು, ವಿವಾದ ಇನ್ನಿತರೆಗಳ ಬಗ್ಗೆ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಈ ವಯಸ್ಸಿನಲ್ಲಿ ಆ ವ್ಯಕ್ತಿ ಮೇಂಟೇನ್‌ ಮಾಡಿರುವ ಫಿಟ್‌ನೆಸ್‌ ಬಗ್ಗೆ ದೂಸರಾ ಮಾತಾಡುವಂತಿಲ್ಲ. ಬರೀ ಹಣವೊಂದಿದ್ದರಷ್ಟೆ ಆ ರೀತಿಯ ಬಾಡಿ ಮೇಂಟೇನ್‌ ಮಾಡಲು ಸಾಧ್ಯವಿಲ್ಲ ಅದಕ್ಕೆ ಅಪಾರವಾದ ಶಿಸ್ತು ಖಂಡಿತ ಬೇಕಿರುತ್ತದೆ. ಅಂದಹಾಗೆ 60 ವಯಸ್ಸಿನಲ್ಲಿ ಸಲ್ಮಾನ್‌ ಖಾನ್‌ ರೀತಿ ಬಾಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ…

ಸಲ್ಮಾನ್‌ ಖಾನ್‌ ರೀತಿ ಅಂಗಸೌಷ್ಟವ ಪಡೆಯುವುದು ಸುಲಭದ ಮಾತಲ್ಲ. ಅದರಲ್ಲೂ ವಯಸ್ಸಾದ ಮೇಲೂ ಆ ರೀತಿಯ ಬಾಡಿ ಮೇಂಟೇನ್‌ ಮಾಡಲು ಸಾಮಾನ್ಯ ವ್ಯಾಯಾಮಗಳಿಂದ ಆಗದು, ಅದಕ್ಕೆ ನಮ್ಮನ್ನು ನಾವು ವ್ಯಾಯಾಮಕ್ಕೆ, ಡಯಟ್‌ಗೆ ಒಪ್ಪಿಸಿಕೊಳ್ಳಬೇಕಾಗುತ್ತದೆ. ಒಂದು ದಿನವೂ ತಪ್ಪದೇ ವ್ಯಾಯಾಮಕ್ಕೆ ಕನಿಷ್ಟ ಎರಡು ಗಂಟೆಯಾದರೂ ಮೀಸಲಿಡಬೇಕಾಗುತ್ತದೆ. ಅದರ ಜೊತೆಗೆ ಶಿಸ್ತಿನ ಡಯಟ್‌ ಬಲು ಕಡ್ಡಾಯ.

ಈಗ ಸಲ್ಮಾನ್‌ ಖಾನ್‌ ಅವರ ವರ್ಕೌಟ್‌ ಶೆಡ್ಯೂಲ್‌ ಅನ್ನೇ ನೋಡುವುದಾದರೆ ದಶಕಗಳಿಂದಲೂ ಅವರು ಜಿಮ್‌ ಮಾಡುತ್ತಾ ಬಂದಿದ್ದಾರೆ. ಆ ಶಿಸ್ತೇ ಅವರನ್ನು ಈ ವಯಸ್ಸಿನಲ್ಲೂ ಫಿಟ್‌ ಆಗಿ ಇರಿಸಿದೆ. ಈಗಲೂ ಸಹ ಸಲ್ಮಾನ್‌ ಖಾನ್‌ ಪ್ರತಿ ದಿನ ಎರಡು ಗಂಟೆ ಜಿಮ್‌ನಲ್ಲಿ ಕಾಲ ಕಳೆಯುತ್ತಾರೆ. ಅವರ ವರ್ಕೌಟ್‌ನಲ್ಲಿ ಮುಖ್ಯವಾಗಿ ವೇಟ್‌ ಲಿಫ್ಟಿಂಗ್‌ ಮತ್ತು ಇತರೆ ರೆಸಿಸ್ಟೆನ್ಸ್‌ ವ್ಯಾಯಾಮಗಳು ಇದ್ದೇ ಇರುತ್ತವೆ. ಜೊತೆಗೆ ಕಾರ್ಡಿಯೋ ಸಹ ಅಂದರೆ ಓಟ ಅಥವಾ ವಾಕಿಂಗ್‌ ಅದನ್ನೂ ಸಹ ಅವರು ತಪ್ಪದೇ ಮಾಡುತ್ತಾರೆ. ಅಂದಹಾಗೆ ಸಲ್ಮಾನ್‌ ಖಾನ್‌ಗೆ ವರ್ಕೌಟ್‌ ವಿಷಯದಲ್ಲಿ ಚೀಟ್‌ ಡೇ ಇರುವುದೇ ಇಲ್ಲವಂತೆ. ಅಂದರೆ ಯಾವುದೇ ಕಾರಣಕ್ಕೂ ಅವರು ಜಿಮ್‌ ತಪ್ಪಿಸುವುದಿಲ್ಲ.

ಇನ್ನು ಡಯಟ್‌ ವಿಷಯದಲ್ಲಿ ಸಹ ಸಲ್ಮಾನ್‌ ಖಾನ್‌ ಬಲು ಶಿಸ್ತು. ಅವರ ಪ್ರತಿ ಮೀಲ್‌ನಲ್ಲೂ ಭರಪೂರ ಪ್ರೋಟೀನ್‌ ಮತ್ತು ಫೈಬರ್‌ ಇರುವಂತೆ ನೋಡಿಕೊಳ್ಳುತ್ತಾರೆ. ಮಾಂಸಾಹಾರಿ ಆಗಿರುವ ಕಾರಣ ಅವರ ಮೀಲ್‌ನಲ್ಲಿ ಚಿಕನ್‌ ಅಥವಾ ಲ್ಯಾಂಬ್‌ ಇದ್ದೇ ಇರುತ್ತದೆ. ಹಿಂದೊಮ್ಮೆ ಅವರೇ ಹೇಳಿದ್ದಂತೆ ಅವರು ಬೀಫ್‌ ಸೇವಿಸುವುದಿಲ್ಲವಂತೆ. ಸಿಹಿ ಮತ್ತು ಕರಿದ ಪದಾರ್ಥಗಳನ್ನು ಸಂಪೂರ್ಣವಾಗಿ ಅವಾಯ್ಡ್‌ ಮಾಡುತ್ತಾರೆ. ಇವುಗಳ ಜೊತೆಗೆ ನಿಗದಿತವಾಗಿ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಸೇವನೆಯನ್ನೂ ಮಾಡುತ್ತಾರೆ.

ಒಟ್ಟಾರೆ ಸಲ್ಮಾನ್‌ ಖಾನ್‌ ತಮ್ಮ 60 ನೇ ವಯಸ್ಸಿನಲ್ಲಿ ಈಗಲೂ ಫಿಟ್‌ ಆಗಿದ್ದಾರೆ. ಅವರಿಗಿಂತ ಅರ್ಧ ವಯಸ್ಸಿನ ಹಲವರಿಗಿಂತಲೂ ಫಿಟ್‌ ಆಗಿ ಕಾಣುತ್ತಾರೆ. ಸಲ್ಮಾನ್‌ ಖಾನ್‌ ಅವರಲ್ಲಿ ಅನುಸರಿಸಲು ಯೋಗ್ಯವಾದ ಗುಣವೆಂದರೆ ಅದು ಅವರಿಗೆ ಫಿಟ್‌ನೆಸ್‌ ಬಗ್ಗೆ ಇರುವ ಕಾಳಜಿ. ನೀವೂ ಸಹ ಶಿಸ್ತು ರೂಢಿಸಿಕೊಳ್ಳಿ ಸಲ್ಮಾನ್‌ ಖಾನ್‌ ರೀತಿ ಫಿಟ್‌ ಆಗಿ.