Photo Credits: @vinaygowdaactor, @iamsangeethasringeri (Instagram)
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಇವರದ್ದೇ ಹವಾ ಜೋರಾಗಿದೆ.
ಈ ಬಗ್ಗೆ ವಿನಯ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. “ಮುಂದೇನು?” ಎನ್ನುವ ಬಿಗ್ ಕ್ಶ್ಚನ್ ಅನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ.
‘ಬಿಗ್ ಬಾಸ್ ಸೀಸನ್-10’ರ ಮೂಲಕ ಬಿಗ್ ಮನೆಗೆ ಹೊಸ ಕಳೆ ತಂದವರು ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ. ಇವರಿಬ್ಬರ ನಡುವಿನ ಜಗಳಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದವು.
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಟ್ರೋಲ್ಸ್
‘ಬಿಗ್ ಬಾಸ್ ಕನ್ನಡ ಸೀಸನ್-13’ರ ಜ್ಯೂರಿಯಾಗಿ ವಿನಯ್ ಹಾಗೂ ಸಂಗೀತಾ ಕಣಕ್ಕಿಳಿದಿದ್ದಾರೆ. ಆದರೆ ಇವರ ಕೆಲವು ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿವೆ.
ವಿನಯ್ ಅವರ ‘ಒಂದು ಸರ್ಕಲ್‌ಗೆ ಎಷ್ಟು ಸೈಡ್’ ಎನ್ನುವ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಇದರ ಮೇಲೆ ಸಾಕಷ್ಟು ರೀಲ್ಸ್‌ಗಳು ಸೃಷ್ಟಿಯಾಗಿದ್ದು, ಬೇರೆ ಭಾಷೆಯಲ್ಲೂ ಇದು ಚರ್ಚೆಯಾಗಿದೆ.
ವಿನಯ್ ಗೌಡ ಪೋಸ್ಟ್‌ನಲ್ಲಿ ಏನಿದೆ?
“‘ಹರ ಹರ ಮಹಾದೇವ’ ಧಾರಾವಾಹಿಯಿಂದ ನಮ್ಮ ಜರ್ನಿ ಆರಂಭವಾಯಿತು. ‘ಬಿಗ್ ಬಾಸ್ ಸೀಸನ್ 10’ರಲ್ಲಿ ಸ್ಪರ್ಧಿಗಳಾಗಿ ಯಶಸ್ಸು ಕಂಡೆವು. ಈಗ ‘ಅಗ್ನಿಪರೀಕ್ಷೆ’ಯಲ್ಲಿ ತೀರ್ಪುಗಾರರಾಗಿ ತಮಿಳು, ತೆಲುಗು ಮತ್ತು ಮಲಯಾಳಂ ಇಂಡಸ್ಟ್ರಿಯಲ್ಲೂ ಸಂಚಲನ ಮೂಡಿಸುತ್ತಿದ್ದೇವೆ” ಎಂದು ವಿನಯ್ ಬರೆದುಕೊಂಡಿದ್ದಾರೆ.
ಪ್ರತಿಯೊಂದು ಹಂತದಲ್ಲೂ ನಮ್ಮ ಪ್ರಭಾವ ಮುಂದುವರಿದಿದೆ ಎಂದಿದ್ದಾರೆ. ಹಾಗಾದರೆ ಮುಂದೆ ನಮ್ಮಿಬ್ಬರ ಜೋಡಿ ಯಾವ ಪ್ರಾಜೆಕ್ಟ್ ಮೂಲಕ ಬರಲಿದೆ ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.

Photo Credits: @vinaygowdaactor, @iamsangeethasringeri (Instagram)
ಸೆಪ್ಟಂಬರ್ 6 ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್-13’ ಶುರು
‘ಬಿಗ್ ಬಾಸ್ ಕನ್ನಡ ಸೀಸನ್-13’ ಸೆಪ್ಟಂಬರ್ 6 ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಕಿಚ್ಚ ಸುದೀಪ್ ಅವರನ್ನ ವೇದಿಕೆ ಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಈ ಜ್ಯೂರಿಗಳ ಬಗ್ಗೆ ಮತ್ತು ಇವರ ತೀರ್ಪುಗಳ ಬಗ್ಗೆ ಕಿಚ್ಚ ಸುದೀಪ್ ಏನು ಹೇಳಲಿದ್ದಾರೆ? ಎಂಬುದೇ ಸದ್ಯದ ಅತಿ ದೊಡ್ಡ ಕುತೂಹಲದ ಘಟ್ಟವಾಗಿದೆ.




