‘TOXIC’ RELEASE: ಮಗ ಯಶ್‌ಗೆ ಭಾವನಾತ್ಮಕವಾಗಿ ಶುಭ ಹಾರೈಸಿದ ತಾಯಿ ಪುಷ್ಪಮ್ಮ

ಮಗ ಯಶ್ಗೆ ಭಾವನಾತ್ಮಕವಾಗಿ ಶುಭ ಹಾರೈಸಿದ ತಾಯಿ ಪುಷ್ಪಮ್ಮ

Photo Credits: @pushpa.akofficial (Instagram)

                           @filmystan.official (Instagram)

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೊನೆಗೂ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮಗನಿಗೆ ವಿಶ್ ಮಾಡಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನಿಗೆ ಮನಸಾರೆ ಶುಭ ಹಾರೈಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮಗನ ಜೊತೆಗಿನ ಸುಂದರ ಫೋಟೋ ಒಂದನ್ನು ಶೇರ್ ಮಾಡುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಈಗ ಯಶ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಾಯಿಯ ಪ್ರೀತಿಯ ಈ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಮಗನ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಾಯಿ

ತಮ್ಮ ಪೋಸ್ಟ್‌ನಲ್ಲಿ ಮಗನಿಗೆ ಶುಭ ಕೋರಿರುವ ಪುಷ್ಪಮ್ಮ ಕನ್ನಡದಲ್ಲೇ ಸುಂದರ ಸಾಲುಗಳನ್ನು ಬರೆದಿದ್ದಾರೆ. “ನಿನ್ನ ಬಹುನಿರೀಕ್ಷಿತ #Toxic ಸಿನಿಮಾಗೆ ನನ್ನ ಹೃದಯಪೂರ್ವಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

“ನಿನ್ನ ಪರಿಶ್ರಮ, ಕನಸು ಮತ್ತು ಸಮರ್ಪಣೆ ಸದಾ ನಿನ್ನನ್ನು ಯಶಸ್ಸಿನ ಶಿಖರಕ್ಕೇರಿಸಲಿ” ಎಂದು ಹಾರೈಸಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಸಾಲು ಸಾಲು ಹಾರ್ಟ್ ಹಾಗೂ ಫೈರ್ ಇಮೋಜಿಗಳ ಕಾಮೆಂಟ್ಸ್ ಹರಿದುಬರುತ್ತಿವೆ.

ಆದರೆ ಪುಷ್ಪಾ ಅರುಣ್ ಕುಮಾರ್ ಅವರು ಈಗಾಗಲೇ ಸಿನಿಮಾ ನೋಡಿದ್ದಾರೋ ಅಥವಾ ಇಲ್ಲವೋ ಎನ್ನುವುದು ಇನ್ನು ತಿಳಿದುಬಂದಿಲ್ಲ.

Photo Credits: @pushpa.akofficial (Instagram)

‘ಟಾಕ್ಸಿಕ್’ ಸಿನಿಮಾಗೆ ಹರಿದುಬಂತು ಪಬ್ಲಿಕ್ ರಿವ್ಯೂ

‘ಟಾಕ್ಸಿಕ್’ ಚಿತ್ರವನ್ನು ನೋಡಿದ ಪ್ರೇಕ್ಷಕರಿಂದ ಸಕಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವರು ಇದು ಕನ್ನಡಿಗನ ಹಾಲಿವುಡ್ ಮಟ್ಟದ ಪ್ರಯತ್ನ ಎಂದು ಕೊಂಡಾಡುತ್ತಿದ್ದಾರೆ.

ಒಟ್ಟಾರೆಯಾಗಿ ಮೊದಲ ದಿನವೇ ಚಿತ್ರಕ್ಕೆ ಅತ್ಯುತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾ ಬರೋಬ್ಬರಿ 3 ಗಂಟೆ 14 ನಿಮಿಷಗಳ ಸುದೀರ್ಘಾವಧಿಯನ್ನು ಹೊಂದಿದೆ.

ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದು, ಯಶ್ ಹಾಗೂ ಗೀತು ಮೋಹನ್‌ದಾಸ್ ಜೊತೆಯಾಗಿಯೇ ಕಥೆ ಬರೆದಿರುವುದು ಮತ್ತೊಂದು ವಿಶೇಷ.