ಸ್ಯಾಂಡಲ್ವುಡ್‌ನಲ್ಲಿ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ (Darshan-Dhanveerah) ನಡುವಿನ ಜಗಳ ಈಗ ಹೊಸ ತಿರುವು ಪಡೆದುಕೊಂಡಿದೆ. ಜೈಲಿನಲ್ಲಿರುವ ನಟ ದರ್ಶನ್ ಅವರು ತಮ್ಮ ಆಪ್ತ ಗೆಳೆಯ ಧನ್ವೀರ್ ವಿರುದ್ಧವೇ ನೇರವಾಗಿ ಕಾನೂನು ಸಮರ ಆರಂಭಿಸಿದ್ದಾರೆ. ಈ ಬೆಳವಣಿಗೆಯಿಂದ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿದೆ.
ಇತ್ತೀಚೆಗೆ ನಟ ಜೈದ್ ಖಾನ್ ಹಾಗೂ ವಿಜಯಲಕ್ಷ್ಮೀ ಅವರು ಬಳ್ಳಾರಿ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಬೆನ್ನಲ್ಲೇ ದರ್ಶನ್ ಅವರು ತಮ್ಮ ವಕೀಲರ ಮೂಲಕ ಕೋರ್ಟ್‌ನಲ್ಲಿ ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದರಿಂದ ನಟ ಧನ್ವೀರ್‌ಗೆ ದೊಡ್ಡ ಶಾಕ್ ಎದುರಾಗಿದೆ.
ನನ್ನ ಹೆಸರನ್ನು ಬಳಸಿಕೊಂಡು ಧನ್ವೀರ್ ನನಗೆ ಮೋಸ ಮಾಡಿದ್ದಾರೆ ಎಂದು ದರ್ಶನ್ ದೂರಿದ್ದಾರೆ. ಅಲ್ಲದೆ, ನನ್ನ ಪತ್ನಿ ವಿಜಯಲಕ್ಷ್ಮೀ ಅವರ ಬಗ್ಗೆ ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅವರ ಮಾನಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಧನ್ವೀರ್‌ಗೆ ಬ್ರೇಕ್ ಹಾಕಲು ದರ್ಶನ್ ಲೀಗಲ್ ಅಸ್ತ್ರ
ತಮ್ಮ ಕುಟುಂಬದ ಬಗ್ಗೆ ಧನ್ವೀರ್ ಇನ್ನು ಮುಂದೆ ಎಲ್ಲೆಂದರಲ್ಲಿ ಮಾತನಾಡಬಾರದು ಎಂದು ದರ್ಶನ್ ತಡೆಹಿಡಿಯಲು ಮುಂದಾಗಿದ್ದಾರೆ. ಮಾಧ್ಯಮಗಳ ಮುಂದೆ ಧನ್ವೀರ್ ತಮ್ಮ ಬಾಯಿಗೆ ಬಂದಂತೆ ಮಾತನಾಡುವುದಕ್ಕೆ ಬ್ರೇಕ್ ಹಾಕಲು ದರ್ಶನ್ ಕಾನೂನು ಅಸ್ತ್ರ ಪ್ರಯೋಗಿಸಿದ್ದಾರೆ.
ಜೈಲಿನಲ್ಲಿದ್ದರೂ ತಮ್ಮ ಹೆಂಡತಿ ಮತ್ತು ಮಗುವಿನ ರಕ್ಷಣೆಗೆ ದರ್ಶನ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ಧನ್ವೀರ್ ಮಾತಿಗೆ ಕಾನೂನಿನ ಮೂಲಕವೇ ತಕ್ಕ ಉತ್ತರ ಕೊಡಲು ಮುಂದಾಗಿರುವ ದರ್ಶನ್, ಧನ್ವೀರ್ ವಿರುದ್ಧ ತಡೆಯಾಜ್ಞೆ (Injunction Order) ನೀಡುವಂತೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಓದಿ: Darshan Case: ಸಾಕ್ಷಿ ಉಲ್ಟಾ; ಇಂದು SPP ಕ್ರಾಸ್ ಎಕ್ಸಾಮಿನೇಷನ್
Darshan-Dhanveerah: ದರ್ಶನ್ ಮಾಸ್ಟರ್ ಪ್ಲ್ಯಾನ್, ಮುಂದೇನಾಗುತ್ತೆ?
ಒಂದು ಕಾಲದಲ್ಲಿ ಜೊತೆಯಾಗಿ ಓಡಾಡುತ್ತಿದ್ದ ದರ್ಶನ್ ಮತ್ತು ಧನ್ವೀರ್ ನಡುವೆ ಈಗ ಕಾನೂನು ಹೋರಾಟ ಶುರುವಾಗಿದೆ. ಧನ್ವೀರ್ ಹರಡುತ್ತಿರುವ ಸುಳ್ಳು ವದಂತಿಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ದರ್ಶನ್ ಈ ಪ್ಲ್ಯಾನ್ ಮಾಡಿದ್ದಾರೆ.
ಜೈಲಿನಲ್ಲಿದ್ದರೂ ತಮ್ಮ ಕುಟುಂಬದ ವಿಚಾರದಲ್ಲಿ ದರ್ಶನ್ ಫುಲ್ ಅಲರ್ಟ್ ಆಗಿದ್ದಾರೆ. ಧನ್ವೀರ್‌ಗೆ ಕಾನೂನಿನ ಮೂಲಕವೇ ಪಾಠ ಕಲಿಸಲು ಡಿ ಬಾಸ್ ಸಜ್ಜಾಗಿದ್ದಾರೆ. ಈ ದೋಸ್ತೃ ಜಗಳ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕು.




