☔ Weather
Bengaluru: 🌧️ 27°C | AQI 59
Mysore: 🌤️ 30°C | AQI 63
Mangalore: ☁️ 34°C | AQI 74
Bengaluru: 🌧️ 27°C | AQI 59

Big Boss Live

ದಕ್ಷಿಣದಾದ್ಯಂತ ಬಿಗ್ ಹಂಗಾಮಾ

ನಾಲ್ಕೂ ಭಾಷೆಗಳಲ್ಲೂ ಏಕಕಾಲಕ್ಕೆ ಶೋ ರನ್ ಆಗುತ್ತಿದ್ದು, ಇಡೀ ದಕ್ಷಿಣ ಭಾರತದ ಕಿರುತೆರೆ ಪ್ರೇಕ್ಷಕರು ಒಟ್ಟಿಗೆ ಬಿಗ್ ಬಾಸ್ ಫೀವರ್‌ನಲ್ಲಿ ಮುಳುಗೇಳುತ್ತಿದ್ದಾರೆ.

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಹೀಗೆ

ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ನಾಲ್ಕೂ ಭಾಷೆಗಳ ‘ಬಿಗ್ ಬಾಸ್’ ಒಂದೇ ಸಮಯಕ್ಕೆ ಗ್ರ್ಯಾಂಡ್ ಆಗಿ ಶುರುವಾಗಿರುವುದು ಸೌತ್ ಇಂಡಿಯನ್ ಟಿವಿ ಹಿಸ್ಟರಿಯಲ್ಲೇ ದೊಡ್ಡ ದಾಖಲೆ.

ಶುರುವಾಯ್ತು ದೊಡ್ಮನೆ ಹಂಗಾಮಾ

ಟ್ವಿಸ್ಟ್ ಅಂಡ್ ಟರ್ನ್‌ಗಳಿಂದ ಕೂಡಿದ ಈ ಬಾರಿಯ ಹೊಸ ಥೀಮ್ ವೀಕ್ಷಕರಿಗೆ ರಸದೌತಣ ನೀಡಲಿದ್ದು, ಬಿಗ್ ಹೌಸ್ ಬಾಗಿಲು ತೆರೆಯಲು ಕೇವಲ ಕೆಲವೇ ಕ್ಷಣಗಳು ಬಾಕಿ ಇವೆ

ಕಿಚ್ಚನ ಸಮ್ಮುಖದಲ್ಲೇ ಸಖತ್ ಕಾಮಿಡಿ

“ಆಫ್ ಸ್ಕ್ರೀನ್ ಹಾಗೂ ಆನ್ ಸ್ಕ್ರೀನ್ ಹೆಂಡತಿಯರು ದೊಡ್ಮನೆಯಲ್ಲಿ ಕಿತ್ತಾಡಿದರೆ ಹೇಗೆ?” ಎಂದು ಸುದರ್ಶನ್ ಕೇಳ್ತಿದ್ದಂತೆ ಕಿಚ್ಚ ಸುದೀಪ್ ಸಖತ್ ಮಜಾ ತಗೊಂಡು, ಇವರ ಜುಗಲ್ಬಂದಿಗೆ ಬಿಗ್ ಬಾಸ್ ಮೆಚ್ಚುಗೆ ಸೂಚಿಸಿದ್ದಾರೆ.

ವೇದಿಕೆ ಮೇಲೆ ಶಾಕ್ ಮೇಲೆ ಶಾಕ್

ಸ್ಟೇಜ್ ಮೇಲೆ ಕಾವ್ಯ ಗೌಡ ತಮಗಿಂತ ಸಂಪೂರ್ಣ ಭಿನ್ನವಾದ ಸಂಗೀತಾ ಭಟ್ ಅವರನ್ನು ನೋಡಿ ಶಾಕ್ ಆದರೆ, ಪತಿಯನ್ನು ಬಿಟ್ಟುಕೊಡಲು ಬಂದಿದ್ದ ಸುದರ್ಶನ್ ಅವರನ್ನು ನೋಡಿ ಮತ್ತಷ್ಟು ಅಚ್ಚರಿಗೊಂಡರು.

ರಿಯಲ್ ಹಾಗೂ ರೀಲ್ ಹೆಂಡತಿಯರ ಗ್ರಾಂಡ್ ಎಂಟ್ರಿ

ಕಲಾವಿದ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ವೈಫ್ ಸಂಗೀತಾ ಭಟ್ ಹಾಗೂ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನ ರೀಲ್ ವೈಫ್ (ಶ್ರೇಷ್ಠ) ಕಾವ್ಯ ಗೌಡ ಒಂದೇ ವೇದಿಕೆಯಲ್ಲಿ 6 ಮತ್ತು 7ನೇ ಸ್ಪರ್ಧಿಗಳಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.

ಪೈಲಟ್ ಲುಕ್‌ನಲ್ಲಿ ಕಿಚ್ಚ

ಈ ಬಾರಿ ‘ಏರ್‌ಲೈನ್ಸ್’ ಥೀಮ್ ಇದ್ದು, ಸುದೀಪ್ ಪೈಲಟ್ ಡ್ರೆಸ್‌ನಲ್ಲಿ ಕ್ಯಾಪ್ಟನ್ ಆಗಿ ಕಂಗೊಳಿಸಿದ್ದಾರೆ. ಪ್ರತಿಬಾರಿಯಂತೆ ತಮ್ಮ ಪ್ರತ್ಯೇಕ ಸೆಟ್ ಗೋಡೆಗೆ ಸಿಗ್ನೇಚರ್ ಮಾಡಿ ಶೋ ಆರಂಭಿಸಿದ್ದಾರೆ.

ಕ್ಯಾಮೆರಾ ಕಣ್ಣಲ್ಲಿ ಸೀಕ್ರೆಟ್ ಮೂಮೆಂಟ್

ಸೆಪ್ಟೆಂಬರ್ 4 ರಿಂದಲೇ ಶೂಟಿಂಗ್ ಆರಂಭವಾಗಿದ್ದು, ಸುದೀಪ್ ಸಹಿ ಮಾಡಿರೋ ಈ ಸೀಕ್ರೆಟ್ ವೀಡಿಯೋವನ್ನು ಪಿಆರ್‌ಒ ಹರೀಶ್ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಿದೆ.

ದೊಡ್ಮನೆಯ ಅಚ್ಚರಿಯ ಸೆಂಟಿಮೆಂಟ್

ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಗೋಡೆ ಮೇಲೆ ಸಹಿ ಮಾಡೋದು ಕಳೆದ 12 ಸೀಸನ್‌ಗಳಿಂದ ಬಂದಿರೋ ಸಂಪ್ರದಾಯ. ಈ 13ನೇ ಸೀಸನ್‌ನಲ್ಲೂ ತಮಗಾಗಿ ರೆಡಿಯಾದ ಮನೆ ಗೋಡೆ ಮೇಲೆ ಸಹಿ

ವಿಜಯ್‌ ಸೇತುಪತಿ-ಸುದೀಪ್‌ ಜುಗಲ್‌ ಬಂಧಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 13 ಇಂದು (ಸೆಪ್ಟೆಂಬರ್‌ 06) ಶುರು ಆಗುತ್ತಿದೆ. ವಿಶೇಷವೆಂದರೆ ವಿಜಯ್‌ ಸೇತುಪತಿ ಹಾಗೂ ಸುದೀಪ್‌ ಅವರು ಇಂದು ಚರ್ಚೆ ಮಾಡಲಿದ್ದಾರೆ. ವಿಶೇಷವೆಂದರೆ ವಿಜಯ್‌ ಸೇತುಪತಿ ಕನ್ನಡದಲ್ಲೇ ಸುದೀಪ್‌ ಜೊತೆ ಮಾತನಾಡಿದ್ದಾರೆ

ಸೆಲೆಬ್ರಿಟಿಗಳು ಭಾಗಿ

ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಈ ಬಾರಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಲಿದ್ದು, ಕೆಲವು ಸಿನಿಮಾ ಸೆಲೆಬ್ರಿಟಿಗಳು ಇವರುಗಳ ಜೊತೆಗೆ ಇರಲಿದ್ದಾರೆ.

ಶುರುವಾಗಿದೆ ಬಿಗ್‌ಬಾಸ್‌ ಶೂಟಿಂಗ್

ಬಿಗ್‌ಬಾಸ್‌ ಕನ್ನಡ ಸೀಸನ್‌ ೧೩ರ ಶೂಟಿಂಗ್‌ ಈಗಾಗಲೇ ಶುರುವಾಗಿದೆ. ಹಲವು ಕಲಾವಿದರು ಮನೊರಂಜನಾ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಕಾರ್ಯಕ್ರಮ ನಾಳೆ (ಭಾನುವಾರ) ಪ್ರಸಾರ ಆಗಲಿದೆ.