ಆಸಿಯಾ ಸೇಫ್

ಮೊದಲ ವಾರ ನಾಮಿನೇಟ್ ಆಗಿ ಫ್ಲೈಟ್‌ನಲ್ಲೇ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಒಬ್ಬರು ಸೇಫ್ ಆಗಿದ್ದಾರೆ. ‘ಶ್ರಾವಣಿ-ಸುಬ್ರಹ್ಮಣ್ಯ’ ಧಾರಾವಾಹಿಯ ನಟಿ ಆಸಿಯಾ ಸೇಫ್ ಆಗಿದ್ದಾರೆ. ಈ ವಾರ ಸೇಫ್ ಆಗುತ್ತಿರುವ ಸ್ಪರ್ಧಿಗಳನ್ನು ತಿಳಿಯುವುದಕ್ಕೆ ಸೂಟ್‌ಕೇಸ್ ಅನ್‌ಲಾಕ್ ಮಾಡುವ ಟಾಸ್ಕ್ ಇಟ್ಟಿದ್ದರು. ಅದರಲ್ಲಿ ಓಂ ಪ್ರಕಾಶ್ ರಾವ್, ಧನುಷ್, ಸೇರಿದಂತೆ ಹಲವರಿಗೆ ಅನ್‌ಲಾಕ್ ಮಾಡಲು ಆಗಿಲ್ಲ. ಆದರೆ, ಆಸಿಯಾ ಸೂಟ್‌ಕೇಟ್ ಲಾಕ್ ಓಪನ್ ಆಯ್ತು. ಹೀಗಾಗಿ ಆಸಿಯಾ ಸೇಫ್ ಆಯ್ತು.