PRADEEP ESHWAR : ಕಳ್ಳರ ಸಂಘಕ್ಕೆ ರೆಡ್ಡಿ ಅಧ್ಯಕ್ಷ & ರಾಮುಲು ಉಪಾಧ್ಯಕ್ಷ : ಬಿಜೆಪಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ

ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಳ್ಳಾರಿ ಭಾಗದ ಬಿಜೆಪಿ ನಾಯಕರಾದ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ವಿರುದ್ಧ ಅತ್ಯಂತ ಕಟುವಾಗಿ ಹರಿಹಾಯ್ದಿದ್ದಾರೆ.ಒಂದು ವೇಳೆ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಳ್ಳರ ಸಂಘವೇನಾದರೂ ಇದ್ದರೆ, ಅದಕ್ಕೆ ಅಧ್ಯಕ್ಷರೇ ಜನಾರ್ದನ ರೆಡ್ಡಿ ಮತ್ತು ಉಪಾಧ್ಯಕ್ಷರೇ ಶ್ರೀರಾಮುಲು ಆಗಿರುತ್ತಾರೆ ಎಂದು ವ್ಯಂಗ್ಯವಾಗಿ ಟೀಕಿಸಿದ ಅವರು, ರಾಜ್ಯದ ಸಂಪನ್ಮೂಲವನ್ನು ಇವರಿಬ್ಬರೂ ಸೇರಿ ಲೂಟಿ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ […]
NICE : ನೈಸ್ ಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಬಿಗ್ ರಿಲೀಫ್ – ಎಕರೆಗೆ 15 ಸೈಟ್ ಪರಿಹಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

ನೈಸ್ ರಸ್ತೆ ನಿರ್ಮಾಣಕ್ಕಾಗಿ ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಕಳೆದ 25 ವರ್ಷಗಳಿಂದ ಸೂಕ್ತ ಪರಿಹಾರಕ್ಕಾಗಿ ಹೋರಾಡುತ್ತಿದ್ದ ರೈತರಿಗೆ ಕೊನೆಗೂ ರಾಜ್ಯ ಸರ್ಕಾರದಿಂದ ನೆಮ್ಮದಿಯ ಸುದ್ದಿ ಸಿಕ್ಕಿದೆ. ರಾಜ್ಯ ಸಚಿವ ಸಂಪುಟ ಉಪಸಮಿತಿ ಪ್ರತಿ ಎಕರೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ಗರಿಷ್ಠ 15 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರವಾಗಿ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ರೈತರ ಹಿತ ಕಾಪಾಡುವ ಉದ್ದೇಶದಿಂದ ಈ ಪರಿಹಾರ […]
PM MODI : ಸದ್ಯದಲ್ಲೇ ಮೋದಿ ಸಚಿವ ಸಂಪುಟ ಪುನಾರಚನೆ – ಯಾರಿಗೆಲ್ಲಾ ಗೇಟ್ ಪಾಸ್..?

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಮಹತ್ವದ ಬದಲಾವಣೆಗಳು ಹಾಗೂ ವಿಸ್ತರಣೆ ನಡೆಯಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ. ಮುಂಬರುವ ದಿನಗಳಲ್ಲಿ ಸಂಪುಟವನ್ನು ಪುನಾರಚಿಸುವ ಮೂಲಕ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ತುಂಬಲು ಹಾಗೂ ರಾಜಕೀಯ ಸಮೀಕರಣಗಳನ್ನು ಸರಿಪಡಿಸಲು ಉನ್ನತ ಮಟ್ಟದ ತಯಾರಿಗಳು ನಡೆದಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ವಿವಿಧ ರಾಜ್ಯಗಳ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸುವುದು ಈ ವಿಸ್ತರಣೆಯ ಮುಖ್ಯ ಉದ್ದೇಶವಾಗಿದೆ. ಈ ಸಂಪುಟ ಬದಲಾವಣೆ ವೇಳೆ ಕೆಲವೊಬ್ಬ […]
BY VIJAYENDRA : ಮೂರನೇ ದಿನದ ಪಾದಯಾತ್ರೆ – ಕಾಂಗ್ರೆಸ್ ವಿರುದ್ಧ ಕೇಸರಿ ಗುಡುಗು

ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡು ಅವರ ಅಭಿವೃದ್ಧಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ತಿರುಗಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ರಾಯಚೂರಿನಲ್ಲಿ ಪಾದಯಾತ್ರೆಯ ಮೂರನೇ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕೆ ಇರುವ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದು ಖಂಡನೀಯ ಎಂದರು. ಹಿಂದಿನ ದಿನ ದಲಿತ ಮುಖಂಡರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದ್ದಾಗಿ ತಿಳಿಸಿದ ವಿಜಯೇಂದ್ರ, ರಾಜ್ಯದ ಪ್ರತಿ ಮನೆಯಲ್ಲೂ ಈ ಪಾದಯಾತ್ರೆಯ ಬಗ್ಗೆ ಚರ್ಚೆ […]
CABINET: ರಾಜ್ಯಪಾಲರ ಪತ್ರಕ್ಕೆ ಸಂಪುಟದ ಪ್ರತ್ಯುತ್ತರ ? – ಎಚ್‌ಡಿಕೆ, ಜನಾರ್ದನ ರೆಡ್ಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಬಗ್ಗೆ ಚರ್ಚ..?

ಇಂದು ರಾಜ್ಯ ಸಚಿವ ಸಂಪುಟ ಸಭೆ – ಎಚ್‌ಡಿಕೆ, ಜನಾರ್ದನ ರೆಡ್ಡಿ, ನಾಗೇಂದ್ರ ಪ್ರಾಸಿಕ್ಯೂಷನ್ ಚರ್ಚೆ ಸಾಧ್ಯತೆ ಎಂಬ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸರ್ಕಾರಕ್ಕೆ ಪತ್ರ ಬರೆದಿರುವುದು ಚರ್ಚೆಗೆ ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ […]
INDIA – RUSSIA : ಡಾಲರ್ ತೊರೆದು ರೂಪಾಯಿ ಹಾದಿ ಹಿಡಿದ ಭಾರತ-ರಷ್ಯಾ ಜೊತೆ ಶೇ.96 ರೂಪಾಯಿಯಲ್ಲೇ ವಹಿವಾಟು

ಭಾರತ ಮತ್ತು ರಷ್ಯಾ ನಡುವಿನ ವಹಿವಾಟಿನಲ್ಲಿ ಡಾಲರ್ ಮೇಲಿನ ಅವಲಂಬನೆ ಬಹುತೇಕ ಕೊನೆಗೊಂಡಿದ್ದು, ದ್ವಿಪಕ್ಷೀಯ ವ್ಯಾಪಾರದ ಶೇ 96 ರಷ್ಟು ಪಾವತಿಗಳು ಈಗ ಭಾರತೀಯ ರೂಪಾಯಿ ಮತ್ತು ರಷ್ಯಾದ ರೂಬಲ್ ಮೂಲಕವೇ ನಡೆಯುತ್ತಿದೆ. ಈ ಮಹತ್ವದ ಬೆಳವಣಿಗೆಯ ಬಗ್ಗೆ ರಷ್ಯಾದ ಅತಿದೊಡ್ಡ ಬ್ಯಾಂಕ್ ಸ್ಬೆರ್ ಬ್ಯಾಂಕ್ ನ ಭಾರತದ ಮುಖ್ಯಸ್ಥ ಇವಾನ್ ನೊಸೊವ್ ಮಾಹಿತಿ ನೀಡಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳ ಕಠಿಣ ಆರ್ಥಿಕ ನಿರ್ಬಂಧಗಳ ನಡುವೆಯೂ ಉಭಯ ದೇಶಗಳು ಜಂಟಿಯಾಗಿ ರೂಪಿಸಿಕೊಂಡಿರುವ ಈ ಪರ್ಯಾಯ ಪಾವತಿ ವ್ಯವಸ್ಥೆ ಅತ್ಯಂತ […]
ಬಿಡಿಎ ಸೈಟು ಹಂಚಿಕೆ ಆರಂಭ , ಬೆಲೆ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ?

ಹಲವಾರು ಸಮಸ್ಯೆಗಳ ಬಳಿಕ ಕೊನೆಗೂ ಬಿಡಿಎ ಶಿವರಾಮ ಕಾರಂತ ಬಡಾವಣೆ ಸೈಟು ಹಂಚಿಕೆ ಆರಂಭವಾಗಿದೆ. ಸೈಟುಗಳ ಬೆಲೆ ಎಷ್ಟು? ಎಷ್ಟು ಸೈಟು ಹಂಚಿಕೆ ಆಗುತ್ತಿವೆ? ಅರ್ಜಿ ಸಲ್ಲಿಸುವುದು ಹೇಗೆ? ಮಾಹಿತಿ ಇಲ್ಲಿದೆ…
BASAVARAJ RAYAREDDY : ಇಸ್ಲಾಂ ಬೆಂಬಲಿತ ಹೇಳಿಕೆಗೆ ಮತ್ತೊಂದು ಸಮರ್ಥನೆ – ಸಾವಿಗೂ ಹೆದರಲ್ಲ ಎಂದ ರಾಯರೆಡ್ಡಿ

ಇಸ್ಲಾಂ ಧರ್ಮದ ಪರ ಹೇಳಿಕೆಯಿಂದ ತೀವ್ರ ವಿರೋಧ ಮತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಚಿವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನ ಕಲ್ಲೂರು ಕಾರ್ಯಕ್ರಮದಲ್ಲಿ ವೇದಿಕೆಯಿಂದಲೇ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಅಮರಯ್ಯ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಸಾವು ಸಹಜವಾದ ಪ್ರಕ್ರಿಯೆ, ಅದು ಇಂದು ಬಂದರೂ ಬರಬಹುದು ನಾಳೆ ಬಂದರೂ ಬರಬಹುದು, ಒಂದಲ್ಲ ಒಂದು ದಿನ ಎಲ್ಲರಿಗೂ ಖಚಿತ, ಆದರೆ ತಾವು ಯಾವುದೇ ಕಾರಣಕ್ಕೂ ಸಾವಿಗೆ ಹೆದರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. […]
DK SHIVAKUMAR: ರಾಮನಿಗಿಂತ ಸೀತೆ ತ್ಯಾಗವೇ ದೊಡ್ಡದು : ಸಿಎಂ ಡಿಕೆಶಿ

ಎಫ್ ಕೆ ಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಉಬುಂಟು ಸಂಸ್ಥೆಯ ಒಗ್ಗಟ್ಟಾಗಿ ಬೆಳೆಯೋಣ ಎಂಬ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ ಐದನೇ ಆವೃತ್ತಿ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಮೊದಲ ಸ್ಥಾನವಿದೆ, ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ಪಾತ್ರವೇ ದೊಡ್ಡದು, ಆಕೆಯ ತ್ಯಾಗ ಮತ್ತು ಹೋರಾಟ ಎಲ್ಲರಿಗೂ ಮಾದರಿ. ಮಹಿಳೆಯರು ಸೃಷ್ಟಿಶೀಲರು, ಹಲವು ಅಡೆತಡೆಗಳನ್ನು ದಾಟಿ ಉದ್ಯಮ ಕಟ್ಟಿರುವ ನಿಮ್ಮ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು. ಯುವಶಕ್ತಿ ಮತ್ತು ಮಹಿಳೆಯರ […]
RAHUL GANDHI : ಹಲ್ದ್ವಾನಿ ಶುದ್ಧೀಕರಣ ವಿವಾದ ತೀವ್ರ – ರಾಹುಲ್ ಗಾಂಧಿ ಬುದ್ಧಿ ಶುದ್ಧಿಗೆ ಬಿಜೆಪಿ ಹೋಮ

ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ನಡೆಸಿದ ಬಳಿಕ ನಡೆದಿದೆ ಎನ್ನಲಾದ ಶುದ್ಧೀಕರಣ ವಿವಾದ ರಾಜಕೀಯವಾಗಿ ತೀವ್ರಗೊಂಡಿದ್ದು, ಇದರ ಬೆನ್ನಲ್ಲೇ ಉತ್ತರಾಖಂಡ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾ ಡೆಹ್ರಾಡೂನ್‌ನ ದೇವಾಲಯವೊಂದರಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಬುದ್ಧಿ ಶುದ್ಧಿಗಾಗಿ ಯಾಗ ನಡೆಸಿದೆ. ಹಲ್ದ್ವಾನಿಯಲ್ಲಿ ವಾಲ್ಮೀಕಿ ಸಮುದಾಯದ ಅಮಿತ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ರಾಹುಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತಾವು ಮತ್ತು ಸಮುದಾಯದವರು ಆಗಸ್ಟ್ 11 […]