ಬಿಡಿಎ ಸೈಟು ಹಂಚಿಕೆ ಘೋಷಿಸಿದೆ. ಈ ಬಾರಿ ಡಾ ಕೆ ಶಿವರಾಮ ಕಾರಂತ ಲೇಔಟ್ನಲ್ಲಿ ಸೈಟುಗಳನ್ನು ಮಾರಾಟ ಹಂಚಿಕೆ ಮಾಡಲಾಗುತ್ತಿದೆ. ಇದೇ ವರ್ಷದ ಜುಲೈ ತಿಂಗಳಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲಿ ಸೈಟುಗಳನ್ನು ಹಂಚಿಕೆ ಮಾಡಿತ್ತು. ಚದರ ಅಡಿಗೆ ಕೇವಲ 2000 ರೂಪಾಯಿ ಲೆಕ್ಕದಲ್ಲಿ ಅಲ್ಲಿನ ಸೈಟುಗಳ ವಿಲೇವಾರಿ ಆಗಿತ್ತು. ಆದರೆ ಈ ಬಾರಿ ಶಿವರಾಮ ಕಾರಂತ ಲೇಔಟ್ನಲ್ಲಿ ಚದರ ಅಡಿಗೆ 6458 ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಸೈಟು ಪಡೆಯಲಿಚ್ಛಿಸುವವರು ಅರ್ಜಿ ಹಾಕಬಹುದಾಗಿದೆ. ಶಿವರಾಮ ಕಾರಂತ ಲೇಔಟ್ನಲ್ಲಿ ಬಿಡಿಎ ಸೈಟು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ನಿಯಮಗಳು ಏನು? ಬೆಲೆ ಎಷ್ಟು? ಮಾಹಿತಿ ಇಲ್ಲಿದೆ…
ಸೈಟುಗಳ ಬಗ್ಗೆ ಮಾಹಿತಿ
ಇದು ಬಿಡಿಎ ನಿರ್ಮಿಸಿರುವ ಎರಡೆನೇ ಅತಿ ದೊಡ್ಡ ಲೇಔಟ್ ಆಗಿದೆ. ಒಟ್ಟು 3069 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬಡವಾಣೆ ಇದು. ಈ ಪ್ರಾಜೆಕ್ಟ್, ಬೆಂಗಳೂರು ಉತ್ತರದಲ್ಲಿದ್ದು, ಯಲಹಂಕ-ಹೆಸರಘಟ್ಟ-ಥಣಿಸಂದ್ರ ವ್ಯಾಪ್ತಿಯಲ್ಲಿದೆ. ಸುಮಾರು 15 ಹಳ್ಳಿಗಳು ಇದರ ಸುತ್ತ-ಮುತ್ತ ಇದೆ. ಜೊತೆಗೆ ಬಿಡಿಎ ಮಾಡಿರುವ ಬಡವಾಣೆಗಳಲ್ಲೇ ಹೆಚ್ಚು ಮೂಲಬೆಲೆ ನಿಗದಿಪಡಿಸಿರುವ ಬಡಾವಣೆಯೂ ಇದೇ ಆಗಿದೆ.
ಸೈಟುಗಳ ವಿಂಗಡಣೆ
30*40 ಸೈಟುಗಳು
2500
40*60 ಸೈಟುಗಳು
300
50*80 ಸೈಟುಗಳು
15
ಒಟ್ಟು ಸೈಟುಗಳು
2815
ಸೈಟುಗಳ ಬೆಲೆ
30*40 ಸೈಟುಗಳು
69,75,072 ರೂ
40*60 ಸೈಟುಗಳು
1,39,50,144 ರೂ
50*80 ಸೈಟುಗಳು
2,32,50,240 ರೂ
ನೊಂದಣಿ ಶುಲ್ಕ
30*40 ಸೈಟುಗಳು
2000 ರೂ
40*60 ಸೈಟುಗಳು
4000 ರೂ
50*80 ಸೈಟುಗಳು
5000 ರೂ
ಪ್ರಾರಂಭಿಕ ಠೇವಣಿ ಹಣ
ಸಾಮಾನ್ಯರಿಗೆ
ವರ್ಗ/ ಎಸ್ಸಿ/ಎಸ್‌ಟಿ
30*40 ಸೈಟುಗಳು
8,71,884
3,48,754
40*60 ಸೈಟುಗಳು
17,43,768
6,97,507
50*80 ಸೈಟುಗಳು
29,06,280
11,62,512
ನಿಯಮಗಳು
ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು
15 ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸಿಸರಬೇಕು
18 ವರ್ಷ ತುಂಬಿದವರು ಮಾತ್ರ ಅರ್ಜಿ ಸಲ್ಲಿಸಬೇಕು.
ಅಕ್ಟೋಬರ್ 15ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಆರಂಭಿಕ ಠೇವಣಿ ಕಡ್ಡಾಯವಾಗಿ ನೀಡಬೇಕು.
ಠೇವಣಿ ಮೊತ್ತಕ್ಕೆ ಬಿಡಿಎ ಬಡ್ಡಿ ನೀಡುವುದಿಲ್ಲ
ನಿಯಮಗಳು
ಪ್ರವರ್ಗ 1
2%
ಪರಿಶಿಷ್ಟ ಪಂಗಡ
3%
ಪರಿಶಿಷ್ಟ ಜಾತಿ
15%
ಹಿಂದುಳಿದ ವರ್ಗ A-B
10%
ಮಾಜಿ ಸೈನಿಕರು, ಮೃತ ಸೈನಿಕರ ಕುಟುಂಬದವರು
5%
ರಾಜ್ಯ ಸರ್ಕಾರಿ ನೌಕರರು
8%
ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರಿ ನೌಕರರು
2%
ಅಂಗವಿಕಲ ವ್ಯಕ್ತಿಗಳು
3%
ಸಾರ್ವಜನಿಕರು
50%
ಕಲೆ, ವಿಜ್ಞಾನ, ಕ್ರೀಡೆ ಸಾಧಕರು
2%
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು https://bdakarnataka.in/ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅಲ್ಲಿ ನೊಂದಣಿ ಶುಲ್ಕ ನೀಡಿ ನೊಂದಣಿ ಆಗಬೇಕು. ಆನ್ಲೈನ್ ಮೂಲಕ ಚಲನ್ ಮುದ್ರಿಸಿ, ನಿಗದಿತ ಬ್ಯಾಂಕುಗಳ ಮೂಲಕವೇ ಠೇವಣಿ ಹಣ ಪಾವತಿಸಬೇಕು. ಮೀಸಲಾತಿ ಆಧಾರದಲ್ಲಿ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಸಾಮಾನ್ಯರು ಸಹ ಸೂಕ್ತ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿ ದಾಖಲಿಸಿದ ಬಳಿಕ ಬಿಡಿಎ ನಿವೇಶನ ಹಂಚಿಕೆ ನಿಯಮಗಳು 1984ರ ಅನ್ವಯ ಹಂಚಿಕೆ ಮಾಡಲಾಗುವುದು. ನಿವೇಶನ ಸಿಗದವರಿಗೆ ಠೇವಣಿ ಮೊತ್ತ ಮರಳಿಸಲಾಗುವುದು.