BY VIJAYENDRA : ಕಾಂಗ್ರೆಸ್ ಶಾಸಕರೇ ಕಮಿಷನ್ ಆರೋಪ ಮಾಡುತ್ತಿದ್ದಾರೆ, ಇದು ಫ್ಲಾಪ್ ಸರ್ಕಾರ : ಬಿವೈವಿ

ಕಾಂಗ್ರೆಸ್ ಶಾಸಕರೇ ಕಮಿಷನ್ ದಂಧೆಯ ಬಗ್ಗೆ ಪತ್ರ ಬರೆಯುತ್ತಿದ್ದಾರೆ, ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಲಿಂಗಸುಗೂರಿನಲ್ಲಿ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ಹಾವಳಿ ಎಲ್ಲೆ ಮೀರಿದೆ ಎಂದು ಆರೋಪಿಸಿದ್ದಾರೆ. ಸ್ವತಃ ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರೇ ಮುಖ್ಯಮಂತ್ರಿಗೆ ಪತ್ರ ಬರೆದು ಒಬ್ಬ ಸಚಿವರಿಗೆ ಶೇ.7ರಷ್ಟು ಕಮಿಷನ್ ಕೊಡಬೇಕಾಗಿದೆ ಎಂದು ದೂರಿರುವುದೇ ಈ […]

BASAVARAJ RAYAREDDY: ನನಗೆ ಉಪನಿಷತ್ ಗೊತ್ತು, ಹಿಂದೂ ಧರ್ಮದ ಬಗ್ಗೆ ಚರ್ಚೆಗೆ ಯಾರು ಬರ್ತೀರಿ..?

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಹಿಂದೂ ಧರ್ಮದ ಕುರಿತು ತಮ್ಮೊಂದಿಗೆ ಚರ್ಚೆಗೆ ಇಳಿಯಲು ಯಾರು ಸಿದ್ಧರಿದ್ದಾರೆ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ತಮ್ಮ ಇತ್ತೀಚಿನ ಧಾರ್ಮಿಕ ಹೇಳಿಕೆ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ ತೀವ್ರ ಟೀಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ತಾವು ಯಾವುದೇ ಧರ್ಮವನ್ನು ಅವಮಾನಿಸಿಲ್ಲ ಎಂದು ಸಮರ್ಥಿಸಿಕೊಂಡ ಸಚಿವರು, ಧರ್ಮದ ಬಗ್ಗೆ ಮಾತನಾಡುವವರಿಗಿಂತ ತಮಗೆ ಹೆಚ್ಚಿನ ಅರಿವಿದೆ, ಉಪನಿಷತ್ತುಗಳ ಬಗ್ಗೆಯೂ ಮಾತನಾಡಬಲ್ಲೆ ಎಂದು ಹೇಳಿದ್ದಾರೆ. ಈ ವೇಳೆ ಮಾಜಿ […]

RSS : ರಸ್ತೆ ಬದಿ ನಿಂತಿದ್ದವರ ಮೇಲೆ ನುಗ್ಗಿದ ಕಸದ ಲಾರಿ – ಆರ್.ಎಸ್ ಎಸ್ ಮುಖಂಡ ಪವಾಡಸದೃಶ ಪಾರು

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಪಟ್ಟಣದ ರಸ್ತೆಯೊಂದರ ಪಕ್ಕದಲ್ಲಿ ಸ್ಥಳೀಯ ಆರ್‌ಎಸ್‌ಎಸ್ ಮುಖಂಡ ಅರವಿಂದ್ ರಾವ್ ದೇಶಪಾಂಡೆ ಅವರು ತಮ್ಮ ಪರಿಚಯದ ಕೆಲವರ ಜೊತೆ ನಿಂತು ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮಾತಿನಲ್ಲಿ ಮಗ್ನರಾಗಿದ್ದಾಗಲೇ ಪುರಸಭೆಯ ಕಸ ಸಾಗಾಟದ ವಾಹನವೊಂದು ಅತ್ಯಂತ ವೇಗವಾಗಿ ಅವರಿದ್ದ ಸ್ಥಳದ ಕಡೆಗೇ ಬಂದಿದೆ. ವಾಹನ ನೇರವಾಗಿ ಅವರ ಮೇಲೆ ಬರುವುದನ್ನು ಅಲ್ಲಿದ್ದವರಲ್ಲಿ ಒಬ್ಬರು ಗಮನಿಸಿ ತಕ್ಷಣ ಕೂಗಿ ಎಚ್ಚರಿಸಿದ್ದಾರೆ. ಆ ಎಚ್ಚರಿಕೆಯಿಂದಾಗಿ […]

DK SHIVAKUMAR: ಡಿಕೆಶಿ ಸಿಎಂ ಕುರ್ಚಿ ಸೇಫಾ..? ಮುಕ್ತಿಮಂದಿರ ಶ್ರೀಗಳ ಮಾರ್ಮಿಕ ಭವಿಷ್ಯವಾಣಿ ಏನು?

ಸಿಎಂ ಕುರ್ಚಿ ಮೇಲೆ ಡಿಕೆಶಿ ಗಟ್ಟಿಯಾಗಿ ಕೂರ್ತಾರಾ ಎಂಬ ಪ್ರಶ್ನೆಗೆ ಮುಕ್ತಿಮಂದಿರದ ಸ್ವಾಮೀಜಿಯಿಂದ ಭವಿಷ್ಯ ನುಡಿದಿದ್ದೇನು ಎಂಬ ಕುತೂಹಲಕ್ಕೆ ಗದಗ ಜಿಲ್ಲೆ ಲಕ್ಷ್ಮೇಶ್ವರದ ಬಳಿ ಇರುವ ಮುಕ್ತಿಮಂದಿರದ ಜಗದ್ಗುರು 1008 ವಿಮಲ ರೇಣುಕಾ ವೀರಗಂಗಾಧರ ಸ್ವಾಮೀಜಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಅವರು ಮಂದಿರದಲ್ಲಿರುವ ಜಗದ್ಗುರು ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಪ್ರಸನ್ನ ರೇಣುಕಾ ವೀರಗಂಗಾಧರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ವಿಶೇಷ […]

B NAGENDRA: ರೆಡ್ಡಿ, ರಾಮುಲು ಚಲಾವಣೆ ಕಳೆದುಕೊಂಡ ನಾಣ್ಯಗಳು – ನಾಗೇಂದ್ರ ನಿಗಿ ನಿಗಿ

ಬಳ್ಳಾರಿಯ ಸೋ ಕಾಲ್ಡ್ ನಾಯಕರುಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ರಾಜಕೀಯ ಪ್ರಭಾವ ಕಳೆದುಕೊಂಡ ಚಲಾವಣೆಯಲ್ಲಿಲ್ಲದ ನಾಣ್ಯಗಳು ಎಂದು ಮಾಜಿ ಸಚಿವ ಬಿ. ನಾಗೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಬ್ಬರು ನಾಯಕರು ಸುಳ್ಳು ಆರೋಪಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಾ ಜನರಲ್ಲಿ ತಪ್ಪು ಗ್ರಹಿಕೆ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮನ್ನು ತಮ್ಮ ಎಂದು ರೆಡ್ಡಿ ಸಂಬೋಧಿಸಿದ್ದಕ್ಕೆ ಪ್ರತಿಕ್ರಿಯಿಸಿದ ನಾಗೇಂದ್ರ, ನಾನು ಅವರನ್ನು ಅಣ್ಣ ಎಂದೇ ಗೌರವಿಸುತ್ತೇನೆ, ಆದರೆ ರೆಡ್ಡಿ ಸುಳ್ಳಿನ […]

MEKEDATU : ಜಲ ಸಮಾವೇಶದಲ್ಲಿ ರಾಜ್ಯದ 4 ಬೇಡಿಕೆ: ಮೇಕೆದಾಟು ಸಮ್ಮತಿಗೆ ಚಲುವರಾಯಸ್ವಾಮಿ ಪಟ್ಟು

ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ತಕ್ಷಣ ಅನುಮೋದನೆ ನೀಡಬೇಕು ಎಂದು ರಾಷ್ಟ್ರೀಯ ಜಲ ಸಮಾವೇಶದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಜಲ ಇಲಾಖಾ ಸಮಾವೇಶ-2026ರಲ್ಲಿ ಕರ್ನಾಟಕ ನಿಯೋಗದ ನೇತೃತ್ವ ವಹಿಸಿದ್ದ ಜಲಸಂಪನ್ಮೂಲ ಸಚಿವರು ಈ ಆಗ್ರಹ ಮಾಡಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿನ ಭದ್ರತೆಗೆ ಹಾಗೂ ಬರಗಾಲದ ಸಂದರ್ಭದಲ್ಲಿ ನೀರಿನ […]

HD KUMARASWAMY: ಜನರೇ ಗೂಟ ಕಿತ್ತು ಕಳುಹಿಸುತ್ತಾರೆ – ಡಿಕೆ ಹೇಳಿಕೆಗೆ ಹೆಚ್.ಡಿ.ಕೆ ಟಾಂಗ್

ಮುಂದಿನ ಏಳುವರೆ ವರ್ಷ ನಾನೇ ಇಲ್ಲೇ ಗಟ್ಟಿಯಾಗಿ ಬೇರೂರಿರುತ್ತೇನೆ ಎಂದು ಹೇಳಿಕೊಳ್ಳುವವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. 2028ರ ವಿಧಾನಸಭಾ ಚುನಾವಣೆ ಬಂದಾಗ ಯಾರ ಗೂಟ ಎಷ್ಟು ಭದ್ರವಾಗಿದೆ ಎಂಬುದು ತಿಳಿಯುತ್ತದೆ, ಜನರೇ ಅದನ್ನು ಕಿತ್ತು ಬಿಸಾಕುತ್ತಾರೆ ಎಂದು ಅವರು ಹೇಳಿದ್ದಾರೆ. ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು ತಾವು ಖಂಡಿತವಾಗಿಯೂ ರಾಜ್ಯಕ್ಕೆ ಹಿಂತಿರುಗುವುದು […]

BJP : ಕಾಂಗ್ರೆಸ್ ವಿರುದ್ಧ ಬಿಜೆಪಿ ಬಳ್ಳಾರಿ ಚಲೋ ಅಸ್ತ್ರ – 175 ಕಿ.ಮೀ. ಪಾದಯಾತ್ರೆಗೆ ಯಡಿಯೂರಪ್ಪ ಚಾಲನೆ

ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಅದ್ಧೂರಿ ಆರಂಭ ಸಿಕ್ಕಿದೆ. ಸುಮಾರು 175 ಕಿಲೋಮೀಟರ್ ದೂರ ಕ್ರಮಿಸಲಿರುವ ಈ ನಡಿಗೆ ಮೂಲಕ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜನರನ್ನು ತಲುಪುವುದು ಕೇಸರಿ ಪಡೆಯ ಉದ್ದೇಶವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದ ಈ ಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಹಳೆ ಮೊಳಗಿಸಿ ಚಾಲನೆ ನೀಡಿದರು. ಈ ಸಮಾವೇಶದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, […]

BC PATIL : ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್ – ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ : ಬಿ.ಸಿ. ಪಾಟೀಲ್ ವಾಗ್ದಾಳಿ

ಗೃಹಸಚಿವರ ಮಟ್ಟದ ಜೀರೋ ಟ್ರಾಫಿಕ್ ಸೌಲಭ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಪಡೆದಿದ್ದು ಅಲ್ಪನಿಗೆ ಐಶ್ವರ್ಯ ಬಂದ ಹಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ವೇಳೆ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸ್ ಇಲಾಖೆ ವಿಶೇಷ ಸಂಚಾರ ವ್ಯವಸ್ಥೆ ಮಾಡಿಕೊಟ್ಟಿದ್ದು ಇದರ ವಿರುದ್ಧ ಬಿ.ಸಿ. ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವ ಸಚಿವರು ಅಥವಾ ಶಾಸಕರಿಗೆ ಈ ರೀತಿ ರಸ್ತೆ ತಡೆದು ಸುಗಮ ಸಂಚಾರ […]

PM MODI : ಚಿನ್ನ ಖರೀದಿ ಮಾಡ್ಬೇಡಿ, ವಿದೇಶ ಪ್ರವಾಸ ಹೋಗ್ಬೇಡಿ : ಭಾರತೀಯರಿಗೆ ಮೋದಿ ಕರೆ

ಕಿರ್ಗಿಸ್ತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ದೇಶದ ಜನತೆಗೆ ನೇರ ಕರೆ ನೀಡಿದ್ದಾರೆ. ಅನಗತ್ಯ ಚಿನ್ನದ ಖರೀದಿಯನ್ನು ಮುಂದೂಡಿ, ವಿದೇಶ ಪ್ರವಾಸ ಮತ್ತು ವಿದೇಶದಲ್ಲಿ ಮದುವೆ ಸಮಾರಂಭಗಳನ್ನು ಕೈಬಿಡಿ, ಬದಲಿಗೆ ಸ್ವದೇಶಿ ವಸ್ತು ಮತ್ತು ಸೇವೆಗಳಿಗೆ ಆದ್ಯತೆ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಜಾಗತಿಕ ಆರ್ಥಿಕ ಸಂಕಷ್ಟ ಮತ್ತು ಯುದ್ಧದ ಪರಿಸ್ಥಿತಿಯ ನಡುವೆಯೂ ಭಾರತ ಜೂನ್ ತ್ರೈಮಾಸಿಕದಲ್ಲಿ ಶೇ 7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿರುವುದನ್ನು ಪ್ರಧಾನಿ ಶ್ಲಾಘಿಸಿದ್ದು, ಇದು ದೇಶದ […]