☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

BBK 13: ತಿದ್ದುವ ಸಮಯ ಮುಗಿಯಿತು, ತಾಯಿಯ ಮಾತು ಕೇಳಿ ಕನ್ಫೆಷನ್ ರೂಮಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಂಜು

BBK 13: Manju Breaks Down Hearing Mother's Voice; Sudeep Warns Contestants

BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಮನೆಯೊಳಗೆ ಬಳಕೆಯಾದ ಅಸಭ್ಯ ಮಾತುಗಳು ಸಭ್ಯ ಪ್ರೇಕ್ಷಕರು ಕೇಳದಂತಾಗಿದ್ದವು.

ಈ ವಾರ ಮಾಡರ್ನ್ ಕವಿ ಮಂಜು ಅವರ ಮಾತುಗಳು ಮನೆಯೊಳಗೆ ಹಲವು ಬಾರಿ ದೊಡ್ಡ ಜಗಳಕ್ಕೆ ಕಾರಣವಾಗಿದ್ದವು. ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ವೇಳೆ ಮಂಜು ಬಳಸಿದ ಕೆಲವು ಅವಾಚ್ಯ ಪದಗಳಿಗೆ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇಂದು ಬಿಡುಗಡೆಯಾಗಿರುವ ಹೊಸ ಪ್ರೋಮೋ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಕಠಿಣ ನಿರ್ಧಾರದ ಸುಳಿವು ನೀಡಿದ್ದಾರೆ.

ಕನ್ಫೆಷನ್ ರೂಮಿನಲ್ಲಿ ಮಂಜು ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?

ತಿದ್ದುವ ಸಮಯ ಮುಗಿದಿದೆ, ಇನ್ನೇನಿದ್ದರೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಸುದೀಪ್ ಪ್ರೋಮೋದಲ್ಲಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಮಂಜ ಕನ್ಫೆಷನ್ ರೂಮ್ ತಲುಪಿದ್ದಾರೆ. ಕನ್ಫೆಷನ್ ರೂಮಿನಲ್ಲಿ ತಾಯಿ ಬೇಸರದಿಂದ ಹೇಳಿದ ಮಾತುಗಳನ್ನು ಕೇಳಿ ಮಂಜು ಭಾವುಕರಾಗಿದ್ದಾರೆ. ತಾಯಿಯ ಧ್ವನಿ ಕೇಳುತ್ತಿದ್ದಂತೆ ಮಂಜು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟಿದ್ದಾರೆ. ಮಂಜು ಅವರ ಅತಿರೇಕದ ಆಟಾಟೋಪಕ್ಕೆ ಮತ್ತು ಮಾತಿನ ಶೈಲಿಗೆ ಒಳ್ಳೆಯ ರೀತಿಯಲ್ಲಿ ಕಡಿವಾಣ ಹಾಕಲು ಬಿಗ್ ಬಾಸ್ ಈಗ ಮುಂದಾಗಿದೆ.

BBK 13: ಸುದೀಪ್ ನೀಡಿದ ಗಿಡದ ಉದಾಹರಣೆಯ ನಿಜವಾದ ಅರ್ಥವೇನು?

ಸುದೀಪ್ ಬಿಗ್ ಬಾಸ್ ಮನೆಯ ಪ್ರಸ್ತುತ ಪರಿಸ್ಥಿತಿಯನ್ನು ಗಿಡಕ್ಕೆ ಹೋಲಿಕೆ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮನೆ ಚೆನ್ನಾಗಿ ಕಾಣಲಿ ಎಂದು ಗಿಡ ನೆಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಆ ಗಿಡ ಅಡ್ಡಾದಿಡ್ಡಿಯಾಗಿ ಬೆಳೆದು ಗೋಡೆಯನ್ನೇ ಒಡೆಯುವ ಹಂತಕ್ಕೆ ಬಂದಾಗ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಮಾತುಗಳ ಮೂಲಕ ಮನೆಯೊಳಗೆ ನಡೆಯುತ್ತಿರುವ ಅತಿಯಾದ ವರ್ತನೆಗೆ ಕಠಿಣ ಶಿಕ್ಷೆ ಖಚಿತ ಎಂಬ ಸೂಚನೆ ಸಿಕ್ಕಿದೆ. ಇಂದಿನ ಸಂಚಿಕೆಯಲ್ಲಿ ಸುದೀಪ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.