☔ Weather
Bengaluru: 🌧️ 21°C | AQI 51
Mysore: 🌧️ 22°C | AQI 55
Mangalore: ☁️ 28°C | AQI 130
Bengaluru: 🌧️ 21°C | AQI 51

SIDDARAMAIAH: ಜಂಬೂಸವಾರಿಗೆ ಸಿದ್ದು ಗೈರು – ಸ್ಟಿಂಗ್ ಹಿಂದೆ ಪಿತೂರಿ ಇದೆ ಎಂದ ಯತೀಂದ್ರ..!

Image of Yatindra Siddaramaiah

ಮೈಸೂರು : ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವಿಜೃಂಭಣೆಯಿಂದ ಆರಂಭಗೊಂಡಿದ್ದು, ಈ ಬಾರಿಯ ಸಂಭ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಾಣಿಸಿಕೊಳ್ಳಲಿಲ್ಲ. ಅವರ ಅನುಪಸ್ಥಿತಿಯ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಹೊತ್ತಿರುವ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ಹಬ್ಬದಲ್ಲಿ ತಂದೆಯವರಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಭಾವುಕರಾದರು. ಕಳೆದ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಕಾರಣ ಸಾಂವಿಧಾನಿಕ ಹೊಣೆಯಿಂದಾಗಿ ದಸರಾದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈಗ ಅವರು ಕೇವಲ ಶಾಸಕರಾಗಿರುವುದರಿಂದ ಪರಿಸ್ಥಿತಿ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ಎಂಬುದು ಅವರ ಮಾತಿನ ಸಾರವಾಗಿತ್ತು

ಸ್ಟಿಂಗ್ ಷಡ್ಯಂತ್ರದ ಬಗ್ಗೆ ಯತೀಂದ್ರ ಗರಂ !

ಇದೇ ವೇಳೆ ತಂದೆಯವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಸುಳ್ಳು ಸ್ಟಿಂಗ್ ಕಾರ್ಯಾಚರಣೆ ಮಾಡಲಾಗಿದೆ ಎಂದು ಯತೀಂದ್ರ ತೀವ್ರವಾಗಿ ಆಕ್ಷೇಪಿಸಿದರು. ಈಗಾಗಲೇ ಮುಗಿದುಹೋಗಿದ್ದ ಹಳೆಯ ಪ್ರಕರಣವನ್ನು ಮತ್ತೆ ಕೆದಕಿ ಸಿದ್ದರಾಮಯ್ಯ ಅವರಿಗೆ ಅಪಖ್ಯಾತಿ ತರುವ ದೊಡ್ಡ ಸಂಚು ನಡೆದಿದೆ ಎಂದು ಆರೋಪಿಸಿದರು. 2022ರಲ್ಲಿಯೂ ಇದೇ ರೀತಿಯ ಪ್ರಯತ್ನ ನಡೆದು ಪ್ರಕರಣ ಕೈಬಿಡಲಾಗಿತ್ತು ಎಂದು ಅವರು ನೆನಪಿಸಿದರು. ಈ ಸ್ಟಿಂಗ್ ಹಿಂದೆ ಒಂದು ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ಹಾಗೂ ಸ್ವಪಕ್ಷದ ಮಹಿಳೆಯೊಬ್ಬರ ಹೆಸರು ಕೇಳಿಬರುತ್ತಿದೆ. ಆದರೆ ಇದರ ಹಿಂದೆ ನಿಜವಾಗಿ ಯಾರಿದ್ದಾರೆ, ಯಾರ ನಿರ್ದೇಶನದ ಮೇರೆಗೆ ಇದನ್ನು ಮಾಡಲಾಗಿದೆ ಎಂಬುದು ತನಿಖೆಯಿಂದಲೇ ಹೊರಬರಬೇಕು ಎಂದು ಒತ್ತಾಯಿಸಿದರು. ಇದರ ಹಿಂದೆ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ತನಿಖೆ ಪೂರ್ಣಗೊಳ್ಳುವ ಮೊದಲು ಯಾರ ಮೇಲೂ ಅವಸರದ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ವಿಜಯೇಂದ್ರ ಭೇಟಿ ಹಿಂದೆ ರಾಜಕೀಯ ಇಲ್ಲ – ನಾಯಕತ್ವ ಬದಲಾವಣೆಯೇ ಷರತ್ತು : ಯತ್ನಾಳ್

ಮಾಜಿ ಸಿಎಂ ಸಿದ್ದರಾಮಯ್ಯ ಅವರಂತಹ ಹಿರಿಯ ನಾಯಕರು ತಮ್ಮ ತವರು ಜಿಲ್ಲೆಯಲ್ಲಿ ನಡೆದ ವಿಶ್ವವಿಖ್ಯಾತ ಮೈಸೂರು ದಸರಾಗೆ ಗೈರಾಗುವುದು ಸಹಜವಾಗಿಯೇ ಸಹಜವಾಗಿಯೇ ಚರ್ಚೆಗೆ ಗ್ರಾಸವಾಗುತ್ತದೆ. ಒಂದು ಕಡೆ ಅಧಿಕಾರದ ಬದಲಾವಣೆಯಿಂದಾಗಿ ಅವರ ಪಾತ್ರ ಬದಲಾಗಿದೆ ಎಂಬ ವಿವರಣೆ, ಮತ್ತೊಂದು ಕಡೆ ಸ್ಟಿಂಗ್ ವಿವಾದ ಸ್ಫೋಟಗೊಂಡಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇನ್ನು ಯತೀಂದ್ರ ತನಿಖೆಗೆ ಆಗ್ರಹಿಸಿರುವುದು ಈ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ತನಿಖೆಯ ಫಲಿತಾಂಶ ಏನಾಗುತ್ತದೆ ಎಂಬುದರ ಮೇಲೆ ಕಾಂಗ್ರೆಸ್ ಒಳಗಿನ ಬಣ ರಾಜಕೀಯ ಹಾಗೂ ಮುಂದಿನ ದಿನಗಳ ರಾಜಕೀಯ ಲೆಕ್ಕಾಚಾರಗಳು ನಿರ್ಧಾರವಾಗುವ ಸಾಧ್ಯತೆ ಇದೆ.