☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

Dina Bhavishya: ಇಂದು ಈ ರಾಶಿಯವರು ಖಿನ್ನತೆಯಿಂದ ಹೊರಬರುವುದು ಕಷ್ಟ

Dina Bhavishya: 6 October 2026 Today Rashi Bhavishya Predictions

Dina Bhavishya: ಅಕ್ಟೋಬರ್ 6, 2026ರ ಇಂದಿನ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯವರಿಗೂ ಪ್ರಮುಖ ಸೂಚನೆಗಳನ್ನು ನೀಡುತ್ತದೆ. ಇಂದು ಕೆಲ ರಾಶಿಯವರಿಗೆ ಖಿನ್ನತೆಯಿಂದ ಹೊರಬರುವುದು ಕಷ್ಟವಾಗಬಹುದು. ಆದರೆ ಸಕಾರಾತ್ಮಕ ಆಲೋಚನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.

ಮೇಷ

ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಬಹುದು. ವಾಹನಕ್ಕೆ ಸಂಬಂಧಿಸಿದಂತೆ ಹಣ ವ್ಯಯಿಸಬೇಕಾಗಬಹುದು. ಕಾರ್ಯದ ಒತ್ತಡ ಇದ್ದರೂ ಕುಟುಂಬಕ್ಕೆ ಸಮಯ ನೀಡುವಿರಿ.

ವೃಷಭ

ಸಂತೋಷ ಪಡಲು ನಿಮ್ಮದೇ ಮಾರ್ಗ ಕಂಡುಕೊಳ್ಳುವಿರಿ. ಅನವಶ್ಯಕ ವಿಚಾರಕ್ಕೆ ಸಮಯ ವ್ಯರ್ಥ ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಮಧ್ಯಮವಾಗಿದ್ದು, ಅವಮಾನಿಸುವವರಿಗೆ ತಕ್ಕ ಉತ್ತರ ನೀಡುವಿರಿ.

ಮಿಥುನ

ಇನ್ನೊಬ್ಬರ ಮಾತನ್ನು ನಂಬಿ ನಿಮ್ಮವರನ್ನು ಕಳೆದುಕೊಳ್ಳಬೇಡಿ. ಮಕ್ಕಳಿಂದ ಸಮಸ್ಯೆಗಳು ಬರಬಹುದು. ಬೇಸರದಿಂದ ದುಶ್ಚಟಗಳಿಗೆ ಸಿಲುಕದೆ ಸಾವಧಾನತೆಯಿಂದ ನಿರ್ಧಾರ ಕೈಗೊಳ್ಳಿ.

ಕರ್ಕಾಟಕ

ದಾಂಪತ್ಯದಲ್ಲಿ ವಿರಸದ ಮನೋಭಾವ ಮುಂದುವರಿಯಬಹುದು. ಇಂದು ನೀವು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ದುಂದು ವೆಚ್ಚಗಳನ್ನು ಮಾಡದೆ ಹತೋಟಿಯಲ್ಲಿಡಿ.

ಸಿಂಹ

ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ ಸೂಚನೆ ಬರಬಹುದು. ಕಛೇರಿಯ ಕೆಲಸದ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭಾಂಶ ಕಡಿಮೆಯಾಗುವ ಸಾಧ್ಯತೆ ಇದೆ.

ಕನ್ಯಾ

ವೇಗವಾಗಿ ಸಾಲವನ್ನು ಮುಗಿಸಲು ಪ್ರಯತ್ನಿಸಬೇಕಾದೀತು. ಅದೃಷ್ಟವನ್ನು ನಂಬಿ ಕುಳಿತುಕೊಳ್ಳದೆ ಸ್ವಂತ ಪ್ರಯತ್ನ ಮಾಡಿ. ವೈಯಕ್ತಿಕ ಲಾಭ ನಿರೀಕ್ಷಿಸದೇ ಕೆಲಸ ಮಾಡುವಿರಿ.

ತುಲಾ

ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ದಾಂಪತ್ಯದಲ್ಲಿ ಬಿರುಕು ಬರಬಹುದು. ನೆಮ್ಮದಿ ಬೇಕಾದ ಸಂಗತಿಗಳು ಇದ್ದರೂ ಚಿಂತೆ ಕಾಡಬಹುದು. ಹೂಡಿಕೆಯ ವಿಚಾರದಲ್ಲಿ ಜಾಗರೂಕರಾಗಿರಿ.

ವೃಶ್ಚಿಕ

ಹಿರಿಯ ವ್ಯಕ್ತಿಗಳಿಂದ ನಿಮಗೆ ಸೂಕ್ತ ಸಾಂತ್ವನ ಸಿಗಲಿದೆ. ಉದ್ಯಮದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಅಪರಿಚಿತರನ್ನು ಆಹಾರಕ್ಕೆ ಅವಲಂಬಿಸುವುದು ಬೇಡ.

ಧನು

ಆದಾಯದಲ್ಲಿ ಹಿನ್ನಡೆಯಾಗಲಿದ್ದು, ಬುದ್ಧಿವಂತಿಕೆಯಿಂದ ಹಣದ ವಂಚನೆಯಿಂದ ತಪ್ಪಿಸಿಕೊಳ್ಳಿ. ದಿನನಿತ್ಯದ ಜೀವನ ಏರುಪೇರಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮಕರ

ನೀವಂದುಕೊಂಡಿದ್ದೇ ಸತ್ಯ ಎನ್ನುವ ಭ್ರಮೆಯಿಂದ ಹೊರಬರುವುದು ಒಳ್ಳೆಯದು. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ಖುಷಿ ನೀಡಲಿದೆ. ಪಾಲುದಾರಿಕೆಯಲ್ಲಿ ಎಚ್ಚರವಿರಲಿ.

ಕುಂಭ

ವೃತ್ತಿಯ ಆದಾಯಕ್ಕಿಂತ ಬೇರೆ ಮೂಲಗಳಿಂದ ಆದಾಯ ಸಿಗಲಿದೆ. ಕಠಿಣ ಪರಿಶ್ರಮದಿಂದ ಅಂದುಕೊಂಡ ಕಾರ್ಯ ಸಾಧ್ಯವಾಗಲಿದೆ. ವಿದೇಶದಲ್ಲಿ ಇರುವವರಿಗೆ ಆತಂಕ ಬರಬಹುದು.

ಮೀನ (Dina Bhavishya)

ಪರರ ಭಾಗ್ಯ ನೆನೆದು ಕೊರಗುವುದಕ್ಕಿಂತ ನಿಮ್ಮ ಬಳಿ ಇರುವುದಕ್ಕೆ ಸಂತೋಷಪಡಿ. ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದರೆ ನಷ್ಟ ಅನುಭವಿಸಬೇಕಾಗುತ್ತದೆ.