☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Jailer 2: ‘ಜೈಲರ್ 2’ ಕರ್ನಾಟಕ ವಿತರಣೆ ಹಕ್ಕಿಗೆ ಭರ್ಜರಿ ಪೈಪೋಟಿ; ಕೆ.ಮಂಜು ಕೊಂಡಿದ್ದು ಎಷ್ಟಕ್ಕೆ?

Rajinikanth Jailer 2 movie Karnataka rights brought by K Manju on huge money

ಬೆಂಗಳೂರು: ಭಾರತದಲ್ಲಿ ಅಷ್ಟೇ ಅಲ್ಲ. ಇಡೀ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಂದರೆ, ಅದು ಒನ್ ಅಂಡ್ ಓನ್ಲಿ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth). ಇವರ ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ, ಅಭಿಮಾನಿಗಳಿಗೆಸಂಭ್ರಮ. ಥಿಯೇಟರರ್ ಮುಂದೆ ಹಬ್ಬ ಮಾಡಿಬಿಡ್ತಾರೆ. ಇನ್ನೊಂದ್ಕಡೆ ರಜನಿಕಾಂತ್ ಸಿನಿಮಾದಲ್ಲಿ ಯಾವುದಾದರೂ ಒಂದು ಭಾಗ ಆಗ್ಬೇಕು ಅಂತ ವಿತರಕರು, ಪ್ರದರ್ಶಕರು ತುದಿಗಾಲಲ್ಲಿ ನಿಂತಿರುತ್ತಾರೆ.

ಇದಕ್ಕೆ ಮತ್ತೊಂದು ದೊಡ್ಡ ಉದಾಹರಣೆ ಅಂದರೆ ಅದು ‘ಜೈಲರ್ 2’ (Jailer 2). ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾಗೆ ಕರ್ನಾಟಕದ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ವಿತರಣೆ ಹಕ್ಕು ಪಡೆಯುವುದಕ್ಕೆ ಹಲವು ಪ್ರಮುಖ ಸಂಸ್ಥೆಗಳು ತೀವ್ರ ಪೈಪೋಟಿಗೆ ಬಿದ್ದಿದ್ದವು.

ಕರ್ನಾಟಕದಲ್ಲಿ ‘ಜೈಲರ್ 2’ ವಿತರಣೆ ಹಕ್ಕು ಪಡೆಯುವುದಕ್ಕೆ ಹಲವು ಸಂಸ್ಥೆಗಳು ತೀವ್ರ ಪೈಪೋಟಿ ನಡೆಸಿದ್ದವು. ಅದರಲ್ಲಿ ವಸೀಮ್ ಫಿಲ್ಮ್ ಫ್ಯಾಕ್ಟರಿ, ಗೋಕುಲ್ ರಾಜ್ ಫಿಲ್ಮ್ಸ್, ಎವಿ ಮೀಡಿಯಾಗಳು ಸೇರಿವೆ. ರಜನಿಕಾಂತ್ ಅವರ ಸ್ಟಾರ್‌ಡಮ್, ‘ಜೈಲರ್’ ಸಿನಿಮಾ ಭರ್ಜರಿ ಯಶಸ್ಸಿನಿಂದ ‘ಜೈಲರ್ 2’ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿತರಣೆ ಹಕ್ಕಿಗಾಗಿ ಭಾರೀ ಮೊತ್ತದ ಬೇಡಿಕೆ ಉಂಟಾಗಿದೆ.

ಇಷ್ಟು ಸಂಸ್ಥೆಗಳ ಪೈಪೋಟಿಯಲ್ಲಿ ಅಂತಿಮವಾಗಿ ನಿರ್ಮಾಪಕ ಗಂಡುಗಲಿ ಕೆ.ಮಂಜು ಅವರ ‘ಕೆ ಮಂಜು ಫಿಲ್ಮ್ಸ್’ ಸಂಸ್ಥೆ ಬೆಂಗಳೂರು ಕುಮಾರ್ ಫಿಲ್ಮ್ಸ್ ಮೂಲಕ ‘ಜೈಲರ್ 2’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕನ್ನು ತನ್ನದಾಗಿಸಿಕೊಂಡಿದೆ. ‘ಜೈಲರ್ 2’ ವಿತರಣೆಗೆ ಸನ್ ಪಿಕ್ಚರ್ಸ್ ಬಾರೀ ಬೇಡಿಕೆ ಇಟ್ಟಿತ್ತು. ಹೀಗಾಗಿ ಕೆಲವು ಸಂಸ್ಥೆಗಳು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದವು ಎನ್ನಲಾಗಿದೆ.

ಚಿತ್ರರಂಗದ ಮೂಲಗಳ ಪ್ರಕಾರ, ‘ಜೈಲರ್ 2’ ಸಿನಿಮಾವನ್ನು ಬಾರೀ ಮೊತ್ತಕ್ಕೆ ಖರೀದಿ ಮಾಡಲಾಗಿದೆ. ಸುಮಾರು ₹20.5 ಕೋಟಿ + GST NRI ಮೊತ್ತದ ಜೊತೆಗೆ ₹5 ಕೋಟಿ ಅಡ್ವಾನ್ಸ್ ಒಪ್ಪಂದದ ಮೂಲಕ ಕರ್ನಾಟಕದ ವಿತರಣೆ ಹಕ್ಕನ್ನು ಪಡೆಯಲಾಗಿದೆ ಎನ್ನಲಾಗಿದೆ.

ಕನ್ನಡನಾಡಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾಗೆ ಇರುವ ಭಾರೀ ಮಾರುಕಟ್ಟೆ ಹಾಗೂ ಬೇಡಿಕೆಗೆ ಮತ್ತೊಂದು ಸಾಕ್ಷಿಯಾಗಿದೆ. ‘ಜೈಲರ್’ ಸಿನಿಮಾ ಕರ್ನಾಟಕದಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ, ಇದೀಗ ‘ಜೈಲರ್ 2’ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ರಜನಿಕಾಂತ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಕರ್ನಾಟಕದ ಅನೇಕ ನಗರಗಳಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗುತ್ತದೆ. ವಿಶೇಷ ಪ್ರದರ್ಶನಗಳು, ಫ್ಯಾನ್ಸ್ ಶೋಗಳು, ಕಟೌಟ್‌ಗಳು, ಹಾಲಿನ ಅಭಿಷೇಕ ಹಾಗೂ ವಿವಿಧ ರೀತಿಯ ಸಂಭ್ರಮಾಚರಣೆಗಳಿಗೆ ಅಭಿಮಾನಿಗಳು ಸಜ್ಜಾಗುತ್ತಾರೆ. ಒಟ್ಟಿನಲ್ಲಿ, ಬಿಡುಗಡೆಯ ಮುನ್ನವೇ ಕರ್ನಾಟಕ ವಿತರಣೆ ಹಕ್ಕಿನ ವಿಚಾರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬ್ರ್ಯಾಂಡ್‌ ವ್ಯಾಲ್ಯೂ ಮತ್ತು ‘ಜೈಲರ್ 2’ ಮೇಲಿರುವ ನಿರೀಕ್ಷೆಗೆ ಸ್ಪಷ್ಟ ಉದಾಹರಣೆ.

ಕರ್ನಾಟಕದಲ್ಲಿ ‘ಜೈಲರ್ 2’ ಯಾವೆಲ್ಲ ದಾಖಲೆಗಳನ್ನು ಬರೆಯುತ್ತೆ? ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಓಪನಿಂಗ್ ಪಡೆಯುತ್ತೆ? ಎಂಬ ಕುತೂಹಲ ಇದೀಗ ಸಿನಿಮಾ ಮಂದಿ ಹಾಗೂ ಸಿನಿಪ್ರೇಮಿಗಳಲ್ಲಿ ಹೆಚ್ಚಾಗಿದೆ.