☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Jailer 2 Trailer:’ಜೈಲರ್ 2′ ಟ್ರೈಲರ್.. ರಜನಿ ಮಾಸ್‌.. ಒಂದೇ ಸೆಕೆಂಡ್‌ನಲ್ಲಿ ಶಿವಣ್ಣ ಕಿಕ್ಕು!

Rajinikanth and Nelson Dilipkumar movie Jailer 2 trailer review in Kannada

Rating:4/5

Jailer 2 Trailer: ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಹೆಸರೊಂದೇ ಸಾಕು ಥಿಯೇಟರ್‌ನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ. ಅಭಿಮಾನಿಗಳು ಅವರ ಸಿನಿಮಾಗಾಗಿ ವರ್ಷಗಳ ಕಾಲ ಕಾಯ್ತಾರೆ. ಇಂತಹ ಸಿನಿಮಾಗಳಲ್ಲಿ ‘ಜೈಲರ್ 2’ ಕೂಡ ಒಂದು. ಈ ಸಿನಿಮಾದ ಟ್ರೈಲರ್ ಈಗ ಆ ನಿರೀಕ್ಷೆಗಳನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.

‘ಜೈಲರ್ 2’ ಟ್ರೈಲರ್ ಆರಂಭವಾದ ಕ್ಷಣದಿಂದಲೇ ರಜನಿಕಾಂತ್ ಅವರ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲ್, ಮ್ಯಾನರಿಸಂ ಮತ್ತು ಮಾಸ್ ಎಲಿವೇಷನ್‌ಗಳು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸುತ್ತವೆ. 2 ನಿಮಿಷ 24 ಸೆಕೆಂಡುಗಳ ಟ್ರೈಲರ್‌ನ ಪ್ರತಿಯೊಂದು ಸನ್ನಿವೇಶವೂ ರಜನಿ ಫ್ಯಾನ್ಸ್‌ಗೆ ಕಿಕ್ ಕೊಡುತ್ತವೆ. ಅಷ್ಟೇ ಅಲ್ಲ ಶಿವಣ್ಣ, ಮೋಹನ್‌ಲಾಲ್ ಫ್ಯಾನ್ಸ್‌ಗೂ ಥ್ರಿಲ್ ಕೊಡುತ್ತವೆ.

ರಜನಿಕಾಂತ್ ವಯಸ್ಸು ಲೆಕ್ಕಕ್ಕಿಲ್ಲ ಅನ್ನೋದು ‘ಜೈಲರ್ 2’ ಟ್ರೈಲರ್ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ರಜನಿ ಡೈಲಾಗ್ ಡೆಲಿವರಿ, ಲುಕ್, ವಾಕಿಂಗ್ ಸ್ಟೈಲ್ ಯೂಟ್ಯೂಬ್‌ನಲ್ಲಿ ಕಿಚ್ಚು ಹಚ್ಚಿದೆ. ಇನ್ನೊಂದು ‘ಜೈಲರ್ 2’ ಕೇವಲ ಸೂಪರ್‌ಸ್ಟಾರ್ ಸಿನಿಮಾ ಅಷ್ಟೇ ಅಲ್ಲ. ಇದು ದಕ್ಷಿಣ ಭಾರತದ ದಿಗ್ಗಜರ ಮಾಸ್ ಜಲಕ್‌ ಇದೆ. ಅಲ್ಲದೇ ಈ ಬಾರಿ ಹೊಸ ಪಾತ್ರಗಳ ಸೇರ್ಪಡೆನೂ ಆಗಿದೆ.

ಒಂದೇ ಸೆಕೆಂಡ್.. ಆದ್ರೂ ಶಿವಣ್ಣನ ಕ್ರೇಜ್

‘ಜೈಲರ್’ನಲ್ಲಿ ಶಿವಣ್ಣ (Shivarajkumar) ಖದರ್‌ಗೆ, ಲುಕ್‌ಗೆ ತಮಿಳರು ಥ್ರಿಲ್ ಆಗಿದ್ದರು. ಈ ಬಾರಿ ಕೂಡ ಅದೇ ನಿರೀಕ್ಷೆಯಿತ್ತು. ಶಿವಣ್ಣನ ಸ್ಟೈಲ್, ಅಟಿಟ್ಯೂಡ್ ಮಾಸ್ ಲುಕ್ ಕೊಟ್ಟಿತ್ತು. ‘ಜೈಲರ್ 2’ ಟ್ರೈಲರ್‌ನಲ್ಲಿ ಶಿವಣ್ಣ ಕೇವಲ ಒಂದೇ ಫ್ರೇಮ್‌ನಲ್ಲಿ ಕಂಡಿದ್ದರೂ ಅದೇ ಸ್ವ್ಯಾಗ್ ಎದ್ದು ಕಾಣುತ್ತಿದೆ. ಸಿನಿಮಾದಲ್ಲಿ ಸೆಂಚುರಿ ಬಾರಿಸೋದು ಪಕ್ಕಾ ಅನ್ನೋ ಕಮೆಂಟ್‌ಗಳು ಬರುತ್ತಿವೆ.

ಮೋಹನ್‌ಲಾಲ್ ಪಕ್ಕಾ ಮಾಸ್!

ಮಲಯಾಳಂ ಚಿತ್ರರಂಗದ ಕಂಪ್ಲೀಟ್ ಆಕ್ಟರ್ ಮೋಹನ್‌ಲಾಲ್ ಕೂಡ ಮಾಸ್ ಲುಕ್ ಕೊಟ್ಟಿದ್ದಾರೆ. ಟ್ರೈಲರ್‌ನಲ್ಲಿ ಮೋಹನ್‌ಲಾಲ್ ಕೂಡ ಒಂದೇ ಫ್ರೇಮ್‌ನಲ್ಲಿ ಕಂಡರೂ ಸ್ಕ್ರೀನ್ ಪ್ರೆಸೆನ್ಸ್ ನೆಕ್ಸ್ಟ್‌ ಲೆವೆಲ್‌. ಈ ಬಾರಿನೂ ಮಾಸ್‌ ಪ್ರಿಯರಿಗೆ ಪವರ್‌ಫುಲ್ ಟ್ರೀಟ್ ಸಿಗೋದು ಪಕ್ಕಾ ಎನಿಸುತ್ತದೆ.

ರಜನಿಕಾಂತ್, ಶಿವಣ್ಣ , ಮೋಹನ್‌ಲಾಲ್

ಈ ಮೂವರು ದಿಗ್ಗಜರ ಕಾಂಬಿನೇಷನ್ ಸಿನಿಮಾದ ಹೈಲೈಟ್. ಶಿವಣ್ಣ ಹಾಗೂ ಮೋಹನ್‌ಲಾಲ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಒಂದೇ ಸಿನಿಮಾದಲ್ಲಿ ಇಂತಹ ಕಾಂಬಿನೇಷನ್ ಸಿಗೋದು ಅಭಿಮಾನಿಗಳಿಗೆ ನಿಜಕ್ಕೂ ಹಬ್ಬವೇ ಸರಿ. ಇದು ಕೇವಲ ಮಾಸ್ ಸಿನಿಮಾ ಅಷ್ಟೇ ಅಲ್ಲ. ಕಥೆ, ನಿರೂಪಣೆ, ಹಾಸ್ಯ, ಆಕ್ಷನ್ ಮತ್ತು ಸ್ಟೈಲಿಶ್ ಮೇಕಿಂಗ್ ಮೂಲಕ ಕ್ಲಾಸ್ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಸಿನಿಮಾ.

ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ, ಎಸ್‌ಜೆ ಸೂರ್ಯ

‘ಜೈಲರ್ 2’ನಲ್ಲಿ ಹೊಸ ಪಾತ್ರಗಳು ಸೇರ್ಪಡೆಯಾಗಿವೆ. ಬಾಲಿವುಡ್ ನಟಿ ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ ಹಾಗೂ ದಕ್ಷಿಣ ಭಾರತದ ಜನಪ್ರಿಯ ನಟ ಎಸ್‌ಜೆ ಸೂರ್ಯ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ‘ಜೈಲರ್ 2’ನಲ್ಲಿ ಈ ಮೂವರ ಪಾತ್ರಗಳು ನೆಗೆಟಿವ್‌ ಶೇಡ್‌ನಲ್ಲಿ ಇರುವಂತೆ ಕಾಣಿಸುತ್ತಿದೆ. ಅದಲ್ಲೂ ವಿದ್ಯಾ ಬಾಲನ್ ಹಾಗೂ ಎಸ್‌ಜೆ ಸೂರ್ಯ ಪಾತ್ರಗಳು ಪವರ್‌ಫುಲ್ ಆಗಿವೆ ಎನಿಸುತ್ತಿವೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ

ನೆಲ್ಸನ್ ಅವರ ನಿರ್ದೇಶನ ಸಿನಿಮಾ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ‘ಜೈಲರ್ 2’ ಟ್ರೈಲರ್ ಅಂತೂ ಮಾಸ್ ಪ್ರಿಯರಿಗೆ ಕಿಕ್ ಕೊಟ್ಟಿದೆ. ಪ್ರತಿಯೊಂದು ಫ್ರೇಮ್ ಕೂಡ ಥ್ರಿಲ್ಲಿಂಗ್ ಎನಿಸುತ್ತಿವೆ. ಮಾಸ್ ಸನ್ನಿವೇಶಗಳ ನಡುವೆ ಡಾರ್ಕ್ ಹ್ಯೂಮರ್ ಮತ್ತು ಎಂಟರ್‌ಟೈನ್‌ಮೆಂಟ್ ಸೇರಿಸಿರುವುದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ‘ಜೈಲರ್ 2’ ಟ್ರೈಲರ್ ಮಾಸ್ ಪ್ರಿಯರನ್ನು ಥಿಯೇಟರ್‌ಗೆ ಕರೆದುಕೊಂಡು ಬರೋದಂತೂ ಗ್ಯಾರಂಟಿ.

‘ಜೈಲರ್ 2’ ಟ್ರೈಲರ್ ಹೈಲೈಟ್ಸ್

ಮಾಸ್ ಪ್ರಿಯರಿಗೆ — ಫುಲ್ ಮೀಲ್!
ಕ್ಲಾಸ್ ಪ್ರೇಕ್ಷಕರಿಗೆ — ಸ್ಟೈಲಿಷ್ ಟ್ರೀಟ್!
ರಜನಿಕಾಂತ್ ಫ್ಯಾನ್ಸ್‌ಗೆ — ದೊಡ್ಡ ಹಬ್ಬ!
ಶಿವಣ್ಣ ಫ್ಯಾನ್ಸ್‌ಗೆ — ಮಾಸ್ ಕಿಕ್!
ಮೋಹನ್‌ಲಾಲ್ ಫ್ಯಾನ್ಸ್‌ಗೆ — ಸಖತ್ ಟ್ರೀಟ್!
ವಿದ್ಯಾ ಬಾಲನ್- ಡೈಲಾಗ್ ಚಿಂದಿ!
ಎಸ್‌ಜೆ ಸೂರ್ಯ- ಮಾಸ್ ವಿಲನ್!