☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Indian Cinema: 60 ದಾಟಿದ್ರೂ ತಗ್ಗಿಲ್ಲ ಗ್ರೇಸ್; ಭಾರತೀಯ ಸಿನಿರಂಗ ಏಳುವಂತೆ ಮಾಡಲಿರೋ ದೈತ್ಯರು

Indian Cinema: 60+ Superstars Ready to Rule Big Screen Again

Indian Cinema: ಭಾರತೀಯ ಚಿತ್ರರಂಗದಲ್ಲಿ ವಯಸ್ಸು ಎನ್ನುವುದು ಬರಿ ಒಂದು ಸಂಖ್ಯೆ ಅಷ್ಟೇ ಎಂಬುದನ್ನು ಹಿರಿಯ ನಟರು ಸಾಬೀತು ಮಾಡುತ್ತಿದ್ದಾರೆ. 60 ವರ್ಷ ದಾಟಿದರೂ ಸಹ ಸೂಪರ್‌ಸ್ಟಾರ್‌ಗಳ ಬಿಗ್ ಸ್ಕ್ರೀನ್ ಕ್ರೇಜ್ ಹಾಗೂ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ ಕೊಂಚವೂ ಕಡಿಮೆಯಾಗಿಲ್ಲ. ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌‌ವರೆಗೆ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳ ಮೂಲಕ ಈ ಹಿರಿಯ ದಿಗ್ಗಜರು ಮತ್ತೆ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.

ಬಾಲಿವುಡ್ ಬಾದ್‌ಷಾಗಳ ಅಬ್ಬರ

ಬಾಲಿವುಡ್‌ ಕಿಂಗ್ ಶಾರುಖ್ ಖಾನ್ ‘ಕಿಂಗ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗುತ್ತಿದ್ದಾರೆ. ಇತ್ತ ಸಲ್ಮಾನ್ ಖಾನ್ ‘ಮಾನ್‌ಸ್ಟರ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರೆ, ಆಮಿರ್ ಖಾನ್ ‘ಲಲ್ಕಾರ’ ಸಿನಿಮಾದಲ್ಲಿ ಮಿಂಚಲಿದ್ದಾರೆ. ಅಮಿತಾಭ್ ಬಚ್ಚನ್ ಅಭಿನಯದ ‘ಕಲ್ಕಿ 2898 AD: ಪಾರ್ಟ್ 2’ ಹಾಗೂ ಸಂಜಯ್ ದತ್ ಅವರ ‘ಖಲ್ನಾಯಕ್ ರಿಟರ್ನ್ಸ್’ ಚಿತ್ರಗಳು ಕೂಡ ಭಾರಿ ನಿರೀಕ್ಷೆ ಹುಟ್ಟುಹಾಕಿವೆ.

ದಕ್ಷಿಣ ಭಾರತದ ದೈತ್ಯ ನಟರ ಕಮಾಲ್

ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ‘ಜೈಲರ್ 2’ ಮೂಲಕ ಆರ್ಭಟಿಸಲು ರೆಡಿಯಾಗಿದ್ದರೆ, ಕಮಲ್ ಹಾಸನ್ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ಚಿರಂಜೀವಿ ‘ಕಾಕಾ’ ಹಾಗೂ ನಾಗಾರ್ಜುನ ‘ಕಿಂಗ್ 100’ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಮೆಗಾ ಎಂಟರ್‌ಟೈನ್‌ಮೆಂಟ್ ನೀಡಲಿದ್ದಾರೆ. ಮಾಲಿವುಡ್‌ನ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅಭಿನಯದ ‘ಅತಿಮನೋಹರಂ’ ಚಿತ್ರಗಳು ಸೌತ್ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿವೆ.

Indian Cinema: ಸ್ಯಾಂಡಲ್‌ವುಡ್ ಸೆನ್ಸೇಷನ್ ಶಿವಣ್ಣ

ನಮ್ಮ ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಕೂಡ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಶಿವಣ್ಣ ಸಾಲು ಸಾಲು ಆಕ್ಷನ್ ಎಂಟರ್‌ಟೈನರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪೂರ್ತಿ ಸಜ್ಜಾಗಿದ್ದಾರೆ. ಅನಿಲ್ ಕಪೂರ್, ವೆಂಕಟೇಶ್, ನಂದಮೂರಿ ಬಾಲಕೃಷ್ಣ ಹಾಗೂ ಸನ್ನಿ ಡಿಯೋಲ್ ಕೂಡ ಸಾಲು ಸಾಲು ಮಾಸ್ ಸಿನಿಮಾಗಳ ಮೂಲಕ ಚಿತ್ರರಂಗವನ್ನು ಆಳಲು ಸಿದ್ಧರಾಗಿದ್ದಾರೆ.