☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

Daily Horoscope: ಇಂದಿನ ದಿನ ಭವಿಷ್ಯ; ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ?

Daily Horoscope: Horoscope Today and Panchanga Details for All Zodiac Signs

Daily Horoscope: ಇಂದಿನ ಗ್ರಹಗಳ ಚಲನೆ ಹಾಗೂ ಪಂಚಾಂಗದ ಪ್ರಕಾರ ದ್ವಾದಶ ರಾಶಿಗಳ ಫಲಫಲಗಳು ಹೀಗಿವೆ. ಕೆಲ ರಾಶಿಯವರಿಗೆ ಇಂದು ಸವಾಲುಗಳು ಎದುರಾದರೆ, ಮತ್ತೆ ಕೆಲವರಿಗೆ ಅದೃಷ್ಟ ಹಾಗೂ ಜನಬೆಂಬಲ ಸಿಗಲಿದೆ. ನಿಮ್ಮ ಇಂದಿನ ದಿನ ಹೇಗಿರಲಿದೆ ಎನ್ನುವುದರ ಸಂಪೂರ್ಣ ರಾಶಿ ಭವಿಷ್ಯ ಇಲ್ಲಿದೆ.

ಮೇಷ

ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡಿ. ಪ್ರೇಮ ಜೀವನದಲ್ಲಿ ಒಗ್ಗಿಕೊಳ್ಳುವುದು ಕಷ್ಟವಾಗಬಹುದು. ಸಂಗಾತಿ ಸಲಹೆ ಪಡೆಯಿರಿ.

ವೃಷಭ

ಅಹಂಕಾರದ ಭಾವನೆ ಬರಬಹುದು. ಮನೆಯಲ್ಲಿ ಮಂಗಳ ಕಾರ್ಯಕ್ಕೆ ಆಸಕ್ತಿ ತೋರುವಿರಿ. ಅಪರಿಚಿತರಿಂದ ಕೊಂಚ ಎಚ್ಚರವಿರಲಿ.

ಮಿಥುನ

ಹೊಸ ಪಾಲುದಾರಿಕೆ ಉದ್ಯಮಕ್ಕೆ ಯೋಚಿಸುವಿರಿ. ಉಸಿರಾಟದ ತೊಂದರೆ ಕಾಣಿಸಬಹುದು. ಕೆಲಸಗಳಲ್ಲಿ ಕೊಂಚ ವಿಳಂಬ ಸಾಧ್ಯತೆ.

ಕರ್ಕಾಟಕ

ಆತುರದ ನಿರ್ಧಾರದಿಂದ ಕೆಲಸ ಹಾಳಾಗಬಹುದು. ವ್ಯವಹಾರದಲ್ಲಿ ಅನಗತ್ಯ ಹಸ್ತಕ್ಷೇಪ ಇಷ್ಟವಾಗುವುದಿಲ್ಲ. ಒತ್ತಡದಿಂದ ದೂರವಿರಿ.

ಸಿಂಹ

ನಿಮ್ಮವರು ಯಾರು ಎಂಬ ಸ್ಪಷ್ಟತೆ ಸಿಗಲಿದೆ. ಸರ್ಕಾರದ ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ.

ಕನ್ಯಾ

ಉದ್ಯಮದಲ್ಲಿ ನಿರೀಕ್ಷಿತ ಲಾಭ ಸಿಗದೇ ಇರಬಹುದು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. ಒಟ್ಟಿಗೆ ಹಲವು ಕೆಲಸಗಳಲ್ಲಿ ಮಗ್ನರಾಗುವಿರಿ.

ತುಲಾ

ಹೊಸ ಒಪ್ಪಂದಗಳು ಕೈಗೂಡುವುದು ಕಷ್ಟ. ಅನುಮಾನದಿಂದ ಮಿತ್ರರನ್ನು ಕಾಣಬೇಡಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ.

ವೃಶ್ಚಿಕ

ನಿಮ್ಮ ಹಲವು ದಿನಗಳ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ಸಿಗಲಿದೆ. ಪೂರ್ವಸಿದ್ಧತೆಯೊಂದಿಗೆ ಹೊಸ ಕೆಲಸಕ್ಕೆ ಕೈಹಾಕಿ.

ಧನು

ಯಂತ್ರೋಪಕರಣ ಬಳಸುವಾಗ ಎಚ್ಚರಿಕೆ ವಹಿಸಿ. ಆರೋಗ್ಯ ವಿಮೆ ನವೀಕರಿಸಿಕೊಳ್ಳಿ. ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ.

ಮಕರ

ಅದೃಷ್ಟ ನಿಮ್ಮದಾಗಿಸಿಕೊಳ್ಳುವ ಪ್ರಯತ್ನ ಸಫಲವಾಗಲಿದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಸೂಕ್ಷ್ಮವಾಗಿ ಪೂರ್ಣಗೊಳಿಸಿ.

ಕುಂಭ

ಹಳೆಯ ಸ್ನೇಹಿತರನ್ನು ಅನಿರೀಕ್ಷಿತವಾಗಿ ಭೇಟಿಯಾಗುವಿರಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರಿ.

ಮೀನ

ಆದಾಯ ಹೆಚ್ಚಿಸಲು ಸುಲಭ ಮಾರ್ಗ ಹುಡುಕುವಿರಿ. ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂತೋಷಪಡುವಿರಿ.

Daily Horoscope

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:08

ರಾಹು ಕಾಲ: ಮಧ್ಯಾಹ್ನ 13:39 – 15:09

ಗುಳಿಕ ಕಾಲ: ಬೆಳಿಗ್ಗೆ 09:10 – 10:39

ಯಮಗಂಡ ಕಾಲ: ಬೆಳಿಗ್ಗೆ 06:10 – 07:40