☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

HD KUMARASWAMY: ಹೆಚ್.ಡಿ.ಕುಮಾರಸ್ವಾಮಿ ನೀಚ ರಾಜಕಾರಣಿ – ನಾಲಗೆ ಹರಿಬಿಟ್ಟ ಪ್ರದೀಪ್ ಈಶ್ವರ್

Image of Predeep Eshwar about HD Kumaraswamy

ಕರ್ನಾಟಕ ಹಿಂದೆಂದೂ ನಿಮ್ಮಂತಹ ನೀಚ ಮನಸ್ಥಿತಿಯ ರಾಜಕಾರಣಿಯನ್ನು ಕಂಡಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೈಸ್ ಯೋಜನೆಯ ವಿವಾದದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿ ಆರೋಪ ಮಾಡಿದ ಬೆನ್ನಲ್ಲೇ ಪ್ರದೀಪ್ ಈಶ್ವರ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಾಹೇಬರು ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು, ಕುಟುಂಬದ ಸದಸ್ಯರ ಹೆಸರನ್ನು ಎಳೆದು ತಂದಿರುವುದು ವೈಯಕ್ತಿಕವಾಗಿ ನನಗೆ ಬಹಳ ಬೇಸರ ತಂದಿದೆ ಎಂದು ಪ್ರದೀಪ್ ಈಶ್ವರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಕುಮಾರಸ್ವಾಮಿ ಅವರು 1997 ರಲ್ಲಿ ಸರ್ಕಾರದ ಯೋಜನೆಗೆ ನೋಟಿಫೈ ಆಗಿದ್ದ ಸುಮಾರು ಹತ್ತು ಎಕರೆ ಜಮೀನನ್ನು 2004 ರ ನವೆಂಬರ್ 3 ರಂದು ಡಿ.ಕೆ. ಸುರೇಶ್ ಖರೀದಿಸಿದ್ದರು, ಅದನ್ನು 2026 ರಲ್ಲಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಹೆಸರಿಗೆ ವರ್ಗಾಯಿಸಲಾಗಿದೆ, ಇದು ಕುಟುಂಬದ ಹೆಸರಿನಲ್ಲಿ ನಡೆದ ಭೂ ಕಬಳಿಕೆ ಎಂದು ಆಡಿಯೋ ಬಹಿರಂಗಪಡಿಸಿ ಆರೋಪಿಸಿದ್ದರು. ಈ ಆರೋಪ ಪ್ರತ್ಯಾರೋಪದಿಂದಾಗಿ ಇಬ್ಬರು ನಾಯಕರ ನಡುವಿನ ಮಾತಿನ ಸಮರ ರಾಜ್ಯ ರಾಜಕಾರಣದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : ನೈಸ್ ವಿವಾದ ರಣರಣ – ಕುಮಾರಸ್ವಾಮಿ ಹಫ್ತಾ ವಸೂಲಿ ಗಿರಾಕಿ ಎಂದ ಬಾಲಣ್ಣ

ಅತಿಯಾದ ರಾಜಕೀಯ ವಾಕ್ಸಮರ !

ಈ ಬೆಳವಣಿಗೆಯನ್ನು ವಿಶ್ಲೇಷಿಸಿದರೆ ನೈಸ್ ಯೋಜನೆ ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕ ರಾಜಕಾರಣದ ಅತಿದೊಡ್ಡ ವಿವಾದಗಳಲ್ಲಿ ಒಂದಾಗಿ ಉಳಿದಿದೆ. ಬೆಂಗಳೂರು ಮೈಸೂರು ಕಾರಿಡಾರ್ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ನಂತರ ಹೆಚ್ಚುವರಿ ಭೂಮಿ ಬಳಕೆ, ರೈತರಿಗೆ ಪರಿಹಾರದಲ್ಲಿನ ವ್ಯತ್ಯಾಸ ಮತ್ತು ರಾಜಕೀಯ ಪ್ರಭಾವದ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ 1997 ರಲ್ಲಿ ಅಧಿಸೂಚನೆಯಾದ ಜಮೀನನ್ನು 2004 ರಲ್ಲಿ ಖರೀದಿಸಿ 2026 ರಲ್ಲಿ ಮಗಳ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪ ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಸರಿ ಎಂಬುದು ಸಂಪೂರ್ಣ ದಾಖಲೆ ಪರಿಶೀಲನೆ ಮತ್ತು ನ್ಯಾಯಾಲಯದ ವ್ಯಾಖ್ಯಾನದ ನಂತರವೇ ಸ್ಪಷ್ಟವಾಗುತ್ತದೆ.

ಅಧಿಸೂಚಿತ ಆಸ್ತಿ ವ್ಯವಹಾರ ನಿಷಿದ್ಧವೇ ಅಥವಾ ನಿಯಮಬದ್ಧ ಖರೀದಿಯೇ ಎಂಬುದು ಭೂಸ್ವಾಧೀನ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಅವಲಂಬಿಸಿದೆ. ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವಿನ ಪೈಪೋಟಿ ವೈಯಕ್ತಿಕ ದ್ವೇಷದ ಮಟ್ಟಕ್ಕೆ ತಲುಪಿದೆ. ಇಬ್ಬರೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರು, ಹಳೇ ಮೈಸೂರು ಭಾಗದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀತಿ ಆಧಾರಿತ ಚರ್ಚೆ ಬದಲು ಕುಟುಂಬದ ಸದಸ್ಯರನ್ನು ಗುರಿಯಾಗಿಸುವುದು ರಾಜಕೀಯ ಸಂಸ್ಕೃತಿಯ ಅವನತಿಯನ್ನು ತೋರಿಸುತ್ತದೆ ಎಂಬುದು ಕಾಂಗ್ರೆಸ್ ವಾದ.