☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

BBK 13: ಬಿಗ್‌ ಬಾಸ್‌ನಲ್ಲಿ ದರ್ಶನ್ ಹಾಡು ಬ್ಯಾನ್? ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೊಟ್ಟ ಕಾರಣ ಇದು

ಬಿಗ್ ಬಾಸ್ನಲ್ಲಿ ದರ್ಶನ್ ಹಾಡು ಬ್ಯಾನ್?

Photo Credits: @king_of_kiccha (Instagram)

‘ಬಿಗ್‌ ಬಾಸ್ ಕನ್ನಡ’ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಕರು ಹಾಗೂ ಶೋ ನಿರೂಪಕ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಸೀಸನ್‌ನ ವಿಶೇಷತೆಗಳು ಹಾಗೂ ತಯಾರಿಗಳ ಕುರಿತು ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ಪ್ರೆಸ್‌ಮೀಟ್‌ನಲ್ಲಿ ನಟ ದರ್ಶನ್ ಅವರ ಸಿನಿಮಾಗಳ ಹಾಡುಗಳ ಬಳಕೆಯ ಕುರಿತು ಎದುರಾದ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಹಾಡುಗಳ ಹವಾ

ಸಾಮಾನ್ಯವಾಗಿ ಬಿಗ್‌ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ಬೆಳಗ್ಗೆ ಎಚ್ಚರಿಸಲು ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ಚಿತ್ರರಂಗದ ಹಲವು ನಟ-ನಟಿಯರ ಹಿಟ್ ಹಾಡುಗಳು ಶೋನಲ್ಲಿ ಧ್ವನಿಸುತ್ತವೆ.

ಆದರೆ ಕಳೆದ ಕೆಲವು ವರ್ಷಗಳಿಂದ ಮನೆಯೊಳಗೆ ನಟ ದರ್ಶನ್ ಅಭಿನಯದ ಸಿನಿಮಾಗಳ ಹಾಡುಗಳನ್ನು ಪ್ಲೇ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಕಾಪಿರೈಟ್ಸ್ ಸಮಸ್ಯೆ ಹಾಗೂ ಸುದೀಪ್ ಖಡಕ್ ಉತ್ತರ

ಬಿಗ್ ಬಾಸ್‌ನಲ್ಲಿ ದರ್ಶನ್ ಹಾಡುಗಳನ್ನು ಯಾಕೆ ಹಾಕಲ್ಲ, ತಾಂತ್ರಿಕ ಸಮಸ್ಯೆಗಳಿವೆಯೇ ಎಂದು ಪತ್ರಕರ್ತರು ನೇರವಾಗಿ ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ, “ನನಗೆ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ, ಯಾರ ಮೇಲೂ ದ್ವೇಷವಿಲ್ಲ. ಹಾಡುಗಳನ್ನು ಪ್ಲೇ ಮಾಡದಿರಲು ಬೇರೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳು ಇರಬಹುದು” ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

“ಯಾರನ್ನೂ ತುಳಿಯಲು ಯಾರ ಕೈಯಲ್ಲೂ ಸಾಧ್ಯವಿಲ್ಲ. ನನಗೆ ಪ್ರತಿಯೊಬ್ಬ ಕಲಾವಿದನ ಮೇಲೂ ಗೌರವವಿದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ವಿಷಯದ ಹಿಂದಿರುವ ನೈಜ ಸವಾಲುಗಳು

ಹಾಡು ಹಾಕದಿರಲು ಕೇವಲ ವೈಯಕ್ತಿಕ ನಿರ್ಧಾರಗಳಷ್ಟೇ ಕಾರಣವಲ್ಲ ಎಂದು ಸುದೀಪ್ ವಿವರಿಸಿದ್ದಾರೆ. “ಕೆಲವು ಹಾಡುಗಳನ್ನು ಪ್ಲೇ ಮಾಡಿದರೆ, ಈ ಸಾಂಗ್ ಯಾಕೆ ಪ್ಲೇ ಮಾಡ್ತೀರಾ ಎಂದು ಪ್ರಶ್ನೆ ಮಾಡುವವರು ಅಥವಾ ವಿರೋಧ ವ್ಯಕ್ತಪಡಿಸುವವರು ಇರಬಹುದು ಅಲ್ಲವೇ?” ಎಂದಿದ್ದಾರೆ. ಈ ಮೂಲಕ ವಿಷಯದ ಹಿಂದಿರುವ ಸವಾಲುಗಳನ್ನು ಬಹಿರಂಗಪಡಿಸಿ, ಸುದೀಪ್ ಚರ್ಚೆಗೆ ತೆರೆ ಎಳೆದಿದ್ದಾರೆ.