Photo Credits: AI Generated
ಆಗಸ್ಟ್ 31, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಸೋಮವಾರದಂದು ಕೋಪದಿಂದ ಕಟು ಮಾತು, ಭೂಮಿಯ ಪರಿಶೀಲನೆ, ಪ್ರಗತಿಗೆ ಮನಸ್ಸು, ವಿಶೇಷ ತರಬೇತಿ, ವಿಶ್ವಾಸಕ್ಕೆ ಘಾಸಿ, ಪಶ್ಚಾತ್ತಾಪ, ಸಾಲದ ಅಪೇಕ್ಷೆ, ದಾಖಲೆ ನಿರ್ಮಾಣ ಇವೆಲ್ಲ ಇಂದಿನ ಭವಿಷ್ಯ.
ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.
ಮೇಷ ರಾಶಿ
ಅತಿಯಾದ ಚಿಂತೆಯಿಂದ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ, ಚಿಂತೆಯಿಂದ ಹೊರಬರಲು ಸೂಕ್ತ ದಾರಿಗಳನ್ನು ಹುಡುಕಿಕೊಳ್ಳಿ. ಸನ್ನಿವೇಶಗಳು ಸದಾ ಒಂದೇ ರೀತಿ ಇರಲಾರವು. ಧನಾತ್ಮಕ ಚಿಂತನೆ ಬೆಳೆಸಿಕೊಂಡು ಮುನ್ನಡೆಯಿರಿ.
ವೃಷಭ ರಾಶಿ
ಹಣದ ಹೂಡಿಕೆ ಮಾಡುವಾಗ ಸರಿಯಾದ ಮಾಹಿತಿ ಪಡೆದು ಮುಂದುವರಿಯುವುದು ಒಳಿತು. ದಾಂಪತ್ಯದಲ್ಲಿ ಹಳೆಯ ವಿವಾದಗಳನ್ನು ಮತ್ತೆ ಕೆದಕಬೇಡಿ. ಸಂಗಾತಿಯ ಅಭಿಪ್ರಾಯಗಳಿಗೆ ಗೌರವ ನೀಡಿ ಶಾಂತಿ ಕಾಪಾಡಿಕೊಳ್ಳಿ.
ಮಿಥುನ ರಾಶಿ
ಹಿರಿಯರ ಆಶೀರ್ವಾದ ಹಾಗೂ ಪ್ರಶಂಸೆ ಲಭ್ಯವಾಗಲಿದೆ. ಸಾಹಿತ್ಯ ಮತ್ತು ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ವಿಶೇಷ ಗೌರವ ದೊರೆಯಲಿದೆ. ಉತ್ತಮ ದಿನಚರಿಯಿಂದ ಆರೋಗ್ಯದಲ್ಲಿ ಪ್ರಗತಿ ಕಾಣಲಿದ್ದು, ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಕರ್ಕಾಟಕ ರಾಶಿ
ಎಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಸೂಕ್ತವಲ್ಲ. ಸಿಕ್ಕ ಅವಕಾಶಗಳನ್ನು ಅಹಂಕಾರದಿಂದ ಕಳೆದುಕೊಳ್ಳಬೇಡಿ. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಅತ್ಯಗತ್ಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ.
ಸಿಂಹ ರಾಶಿ
ನಿಮ್ಮ ವ್ಯಾಪಾರ ಹಾಗೂ ಕೆಲಸದ ಯೋಜನೆಗಳನ್ನು ಗೌಪ್ಯವಾಗಿಡುವುದು ಒಳಿತು. ಪ್ರಮುಖ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿಕೊಳ್ಳಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ, ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಕನ್ಯಾ ರಾಶಿ
ಗೊಂದಲಗಳ ನಡುವೆ ಸಮಯಸ್ಫೂರ್ತಿಯಿಂದ ಸವಾಲುಗಳನ್ನು ದಾಟುವಿರಿ. ಅನಗತ್ಯ ಅನುಮಾನಗಳಿಂದ ನಂಬಿಕಸ್ಥ ಸ್ನೇಹವನ್ನು ಹಾಳುಮಾಡಿಕೊಳ್ಳಬೇಡಿ. ದುಡುಕಿ ನಿರ್ಧಾರ ತಗೊಳ್ಳದೆ ತಾಳ್ಮೆಯಿಂದ ಆಲೋಚಿಸಿ.
ತುಲಾ ರಾಶಿ
ಮಕ್ಕಳ ವಿಚಾರದಲ್ಲಿ ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಆಗಿಹೋದ ವಿಷಯಗಳನ್ನು ಮರೆತು ಮುನ್ನಡೆಯಿರಿ. ಉದ್ಯೋಗಾವಕಾಶಗಳನ್ನು ಕೈಚೆಲ್ಲಬೇಡಿ, ಆತುರದ ನಿರ್ಧಾರಗಳಿಂದ ದೂರವಿರಿ.
ವೃಶ್ಚಿಕ ರಾಶಿ
ಜೀವನದಲ್ಲಿ ಸ್ಪಷ್ಟ ಗುರಿಯನ್ನು ಇಟ್ಟುಕೊಳ್ಳಲು ಆಪ್ತರ ನೆರವು ಸಿಗಲಿದೆ. ನೀಡಿದ ಮಾತನ್ನು ಉಳಿಸಿಕೊಳ್ಳಲು ಶ್ರಮಪಡಬೇಕಾಗುತ್ತದೆ. ಇಂದು ಕೊಂಚ ಏಕಾಂತವನ್ನು ಬಯಸುವಿರಿ, ಸಕಾರಾತ್ಮಕ ಆಲೋಚನೆಗಳಿಗೆ ಆದ್ಯತೆ ನೀಡಿ.
ಧನು ರಾಶಿ
ತಪ್ಪುಗಳನ್ನು ಒಪ್ಪಿಕೊಂಡು ತಿದ್ದುಪಡಿ ಮಾಡಿಕೊಳ್ಳುವುದು ಗೌರವ ತರಲಿದೆ. ಮನೆಯ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸುವಿರಿ. ಮನೆಗೆ ಬಂದ ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡಿ ಗೌರವಿಸುವಿರಿ. ಮಾತು ಮಿತವಾಗಿರಲಿ.
ಮಕರ ರಾಶಿ
ಇತರರಿಗೆ ನೆರವಾಗುವುದು ಮನಸ್ಸಿಗೆ ತೃಪ್ತಿ ನೀಡಲಿದೆ. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ತಾಯಿಯಿಂದ ಸೂಕ್ತ ಹಿತವಚನ ಹಾಗೂ ಬೆಂಬಲ ಸಿಗಲಿದೆ. ಹಣಕಾಸಿನ ನಿರ್ವಹಣೆಯಲ್ಲಿ ಜಾಣತನ ಪ್ರದರ್ಶಿಸುವಿರಿ.
ಕುಂಭ ರಾಶಿ
ಹೊಸ ಸ್ಪೂರ್ತಿಯೊಂದಿಗೆ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಶ್ರಮಿಸುವಿರಿ. ಸಣ್ಣ ವ್ಯಾಪಾರಸ್ಥರಿಗೆ ಉತ್ತಮ ಆರ್ಥಿಕ ಲಾಭ ಕಾಯುತ್ತಿದೆ. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ, ಕುಟುಂಬದೊಂದಿಗೆ ಸಂತೋಷದಿಂದಿರಿ.
ಮೀನ ರಾಶಿ
ಅತಿಯಾದ ಆತಂಕವಿಲ್ಲದೆ ಸಮಾಧಾನದಿಂದ ಕೆಲಸಗಳನ್ನು ಪೂರ್ಣಗೊಳಿಸಿ. ಹಿರಿಯರು ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ. ಮನಸ್ಸನ್ನು ಮುಕ್ತವಾಗಿಟ್ಟುಕೊಂಡು ಕಾರ್ಯಪ್ರವೃತ್ತರಾದರೆ ಯಶಸ್ಸು ಖಂಡಿತ.
ಇಂದಿನ ಪಂಚಾಂಗ (31 ಆಗಸ್ಟ್ 2026)
ಸಂವತ್ಸರ: ಪರಾಭವ
ಅಯನ: ದಕ್ಷಿಣಾಯನ | ಋತು: ವರ್ಷ ಋತು
ಮಾಸ: ಶ್ರಾವಣ (ಮಾಸ) | ಪಕ್ಷ: ಕೃಷ್ಣ ಪಕ್ಷ
ತಿಥಿ: ತೃತೀಯಾ | ವಾರ: ಸೋಮವಾರ
ನಕ್ಷತ್ರ: ಪೂರ್ವಾಭಾದ್ರ | ಯೋಗ: ಶೂಲಿ | ಕರಣ: ಭದ್ರ
ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:30
ರಾಹು ಕಾಲ: 07:42 AM – 09:15 AM
ಯಮಗಂಡ ಕಾಲ: 10:47 AM – 12:20 PM
ಗುಳಿಕ ಕಾಲ: 01:52 PM – 03:25 PM




