☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

KSRTC Free Driving Training 2026: ಕೆಎಸ್ಆರ್ಟಿಸಿಯಿಂದ ಉಚಿತ ಡ್ರೈವಿಂಗ್ ತರಬೇತಿ ಮತ್ತು ಲೈಸೆನ್ಸ್; ಅರ್ಜಿ ಆಹ್ವಾನ

KSRTC Free Driving Training 2026: Free LMV HMV Driving Course For SC ST Candidates
ಕೆಎಸ್‌ಆರ್‌ಟಿಸಿಯಿಂದ SC ಮತ್ತು ST ಅಭ್ಯರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿ ನೀಡಲಾಗುತ್ತಿದೆ. ಉಚಿತ ಊಟ ಮತ್ತು ವಸತಿ ಸೌಲಭ್ಯವಿದ್ದು, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.

ವಾಹನ ಚಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ ಲಭ್ಯವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC Free Driving Training 2026) ಉಚಿತ ಚಾಲನಾ ತರಬೇತಿ ನೀಡಲು ಮುಂದಾಗಿದೆ.

ಕರ್ನಾಟಕ ಸರ್ಕಾರದ SCSP/TSP ಯೋಜನೆಯಡಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳಿಗೆ ಈ ಅವಕಾಶ ಸಿಗಲಿದೆ. ಉಚಿತ ತರಬೇತಿಯ ಜೊತೆಗೆ ನಿಯಮಾನುಸಾರ ಚಾಲನಾ ಪರವಾನಗಿ (DL) ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು KSRTC ಯ ವಿಶೇಷ ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ವಿವರಗಳನ್ನು ಸಲ್ಲಿಸಬಹುದಾಗಿದೆ. ಈ ತರಬೇತಿ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.

ತರಬೇತಿ ವಿವರ ಮತ್ತು ವಸತಿ ಸೌಲಭ್ಯ

  • ತರಬೇತಿ ವಿಭಾಗಗಳು: ಲಘು ಮೋಟಾರು ವಾಹನ (LMV – ಕಾರು ಇತ್ಯಾದಿ) ಹಾಗೂ ಭಾರೀ ವಾಹನ (HMV – ಬಸ್, ಲಾರಿ ಇತ್ಯಾದಿ) ಚಾಲನಾ ತರಬೇತಿ.
  • ತರಬೇತಿ ಅವಧಿ: ಒಟ್ಟು 30 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ.
  • ವಸತಿ ಮತ್ತು ಊಟ: ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು KSRTC ಒದಗಿಸಲಿದೆ.
  • ತರಬೇತಿ ಕೇಂದ್ರಗಳು: ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಮತ್ತು ಹೊಳಲ್ಕೆರೆ ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ.

ಅರ್ಹತೆ ಮತ್ತು ಅಗತ್ಯ ದಾಖಲೆಗಳು

  • ವಯೋಮಿತಿ: LMV ತರಬೇತಿಗೆ 18 ರಿಂದ 45 ವರ್ಷ ಹಾಗೂ ಭಾರೀ ವಾಹನ ತರಬೇತಿಗೆ 20 ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು.
  • ಪರವಾನಗಿ ಷರತ್ತು: ಭಾರೀ ವಾಹನ ತರಬೇತಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 1 ವರ್ಷ ಪೂರ್ಣಗೊಂಡಿರುವ LMV ಚಾಲನಾ ಪರವಾನಗಿ ಹೊಂದಿರಬೇಕು.
  • ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿ, ಭಾವಚಿತ್ರ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.

ಇದನ್ನು ಓದಿ: ONGC Recruitment 2026: ಲಿಖಿತ ಪರೀಕ್ಷೆಯಿಲ್ಲದೆ ಒಎನ್ಜಿಸಿಯಲ್ಲಿ 3047 ಹುದ್ದೆಗಳಿಗೆ ಅರ್ಜಿ ಆಹ್ವಾನ

KSRTC Free Driving Training 2026: ಅರ್ಜಿ ಸಲ್ಲಿಕೆ ವಿಧಾನ ಮತ್ತು ಪ್ರಮುಖ ಲಿಂಕ್‌ಗಳು

  • ಅರ್ಜಿ ಸಲ್ಲಿಕೆ: ಅರ್ಹ ಅಭ್ಯರ್ಥಿಗಳು KSRTC ಯ ಅಧಿಕೃತ ಅರ್ಜಿ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ವೈಯಕ್ತಿಕ ವಿವರಗಳು, ತರಬೇತಿ ಪ್ರಕಾರ ಮತ್ತು ತರಬೇತಿ ಕೇಂದ್ರವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಪೋರ್ಟಲ್: ksrtcjobs.karnataka.gov.in
  • ಅಧಿಕೃತ ವೆಬ್‌ಸೈಟ್: ksrtc.karnataka.gov.in
  • ಸಂಪರ್ಕ ಸಂಖ್ಯೆ: 9449596666