☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Indian Bank Recruitment 2026: ಇಂಡಿಯನ್ ಬ್ಯಾಂಕ್ನಲ್ಲಿ 1500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Bank Recruitment 2026: Apply Online For 1500 Apprentice Posts
ಇಂಡಿಯನ್ ಬ್ಯಾಂಕ್ನಲ್ಲಿ 1,500 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕಕ್ಕೆ 35 ಸ್ಥಾನಗಳಿದ್ದು, ವಿದ್ಯಾರ್ಹತೆ ಹಾಗೂ ಅರ್ಜಿ ವಿವರ ಇಲ್ಲಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರಬೇತಿ ಪಡೆದು ವೃತ್ತಿಪರ ಅನುಭವ ಗಳಿಸಲು ಬಯಸುವ ಪದವೀಧರರಿಗೆ ಅತ್ಯುತ್ತಮ ಅವಕಾಶ ಲಭ್ಯವಾಗಿದೆ. ಭಾರತದ ಪ್ರಮುಖ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಬೃಹತ್ ನೇಮಕಾತಿ (Indian Bank Recruitment 2026) ಅಧಿಸೂಚನೆ ಪ್ರಕಟಿಸಿದೆ.

2026-27ನೇ ಹಣಕಾಸು ವರ್ಷಕ್ಕಾಗಿ ಅಪ್ರೆಂಟಿಸ್ ಕಾಯ್ದೆಯಡಿ ದೇಶಾದ್ಯಂತ ಒಟ್ಟು 1,500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕವಾಗಿ 35 ಸ್ಥಾನಗಳನ್ನು ಮೀಸಲಿಡಲಾಗಿದೆ.

ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗೂ ಅರ್ಹತೆಯ ವಿವರಗಳು ಕೆಳಗಿನಂತಿವೆ.

ಹುದ್ದೆಗಳ ವಿವರ ಮತ್ತು ಕರ್ನಾಟಕದ ಮೀಸಲಾತಿ

  • ಒಟ್ಟು ಖಾಲಿ ಹುದ್ದೆಗಳು: ದೇಶಾದ್ಯಂತ 1,500 ಅಪ್ರೆಂಟಿಸ್ ಹುದ್ದೆಗಳು.
  • ಕರ್ನಾಟಕದ ಹುದ್ದೆಗಳು: ಒಟ್ಟು 35 ಸ್ಥಾನಗಳು (ಸಾಮಾನ್ಯ ವರ್ಗ 16, ಒಬಿಸಿ 9, ಎಸ್‌ಸಿ 5, ಇಡಬ್ಲ್ಯೂಎಸ್ 3, ಎಸ್‌ಟಿ 2).
  • ತರಬೇತಿ ಅವಧಿ: ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳು (1 ವರ್ಷ) ಬ್ಯಾಂಕ್ ಶಾಖೆಗಳಲ್ಲಿ ತರಬೇತಿ ನೀಡಲಾಗುತ್ತದೆ.
  • ಮಾಸಿಕ ಸ್ಟೈಪೆಂಡ್: ಮೆಟ್ರೋ ನಗರಗಳಲ್ಲಿ ₹15,000 ಹಾಗೂ ಗ್ರಾಮೀಣ ಪ್ರದೇಶದ ಬ್ರಾಂಚ್‌ಗಳಲ್ಲಿ ₹12,300 ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಪದವಿಯು 01-04-2022 ರಿಂದ 01-11-2026 ರ ನಡುವೆ ಪೂರ್ಣಗೊಂಡಿರಬೇಕು.
  • ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳ ಒಳಗಿರಬೇಕು.
  • ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮದಂತೆ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ವರ್ಷ ಸಡಿಲಿಕೆ ಇರಲಿದೆ.

ಇದನ್ನು ಓದಿ: Anganwadi Recruitment 2026: ಚಿತ್ರದುರ್ಗ ಅಂಗನವಾಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

Indian Bank Recruitment 2026: ಆಯ್ಕೆ ವಿಧಾನ, ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು

  • ಆಯ್ಕೆ ಪ್ರಕ್ರಿಯೆ: 100 ಅಂಕಗಳ ಆನ್‌ಲೈನ್ ಪರೀಕ್ಷೆ ಹಾಗೂ ಸ್ಥಳೀಯ ಭಾಷಾ ಪರೀಕ್ಷೆಯ (ಕನ್ನಡ) ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹800 (+GST) ಹಾಗೂ ಎಸ್‌ಸಿ, ಎಸ್‌ಟಿ, PwBD ಅಭ್ಯರ್ಥಿಗಳಿಗೆ ₹175 (+GST).
  • ಪ್ರಮುಖ ದಿನಾಂಕ: ಆನ್‌ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 25, 2026 ಕೊನೆಯ ದಿನವಾಗಿದೆ.