☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

DONALD TRUMP : ಟ್ರಂಪ್ ಹ*ತ್ಯೆಗೆ ಯತ್ನ – ಶ್ವೇತಭವನದ ಬಳಿ ಶಸ್ತ್ರಾಸ್ತ್ರ ಸಹಿತ ವ್ಯಕ್ತಿ ಬಂಧನ

Image of Donald trump
ಡೊನಾಲ್ಡ್ ಟ್ರಂಪ್ (Donald trump) ಅವರನ್ನು ಕೊಲ್ಲುವ ಉದ್ದೇಶದಿಂದ ಶ್ವೇತಭವನದ ಸಮೀಪ ಓಡಾಡುತ್ತಿದ್ದ ವೆನೆಜುವೆಲಾ ಮೂಲದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಟ್ರಂಪ್ ಹತ್ಯೆಗೆ ಯತ್ನ !
  • ಶಸ್ತ್ರ ಸಮೇತ ವ್ಯತಿ ಬಂಧನ

ಯು.ಎಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಅವರನ್ನು ಕೊಲ್ಲುವ ಉದ್ದೇಶದಿಂದ ಶ್ವೇತಭವನದ ಸಮೀಪ ಓಡಾಡುತ್ತಿದ್ದ ವೆನೆಜುವೆಲಾ ಮೂಲದ ವ್ಯಕ್ತಿಯನ್ನು ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ರೋನ್ನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂದು ಗುರುತಿಸಲಾಗಿದೆ. ವಾಷಿಂಗ್ಟನ್‌ನ ಕಾನ್‌ಸ್ಟಿಟ್ಯೂಷನ್ ಅವೆನ್ಯೂ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಆತ ಅನುಮಾನ ಮೂಡಿಸುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ಹಿಡಿದಿದ್ದಾರೆ. ಕಾರನ್ನು ಪರಿಶೀಲಿಸಿದಾಗ ಅದು ಕಳವು ಮಾಡಿದ್ದ ವಾಹನ ಎಂಬುದು ಗೊತ್ತಾಗಿದೆ. ಜೊತೆಗೆ ವಾಹನದ ಒಳಗೆ ಎಆರ್-15 ರೈಫಲ್, ಮ್ಯಾಕ್-10 ಸಬ್‌ಮಷಿನ್ ಗನ್ ಮತ್ತು ಗ್ಲಾಕ್ ಪಿಸ್ತೂಲ್ ಸೇರಿದಂತೆ ಮೂರು ಮಾರಕ ಬಂದೂಕುಗಳು ಹಾಗೂ ಹಲವು ಜೀವಂತ ಗುಂಡುಗಳು ಸಿಕ್ಕಿವೆ ಎಂದು ಭದ್ರತಾ ಇಲಾಖೆ ತಿಳಿಸಿದೆ.

ಟ್ರಂಪ್ ಹತ್ಯೆ ಮಾಡುವಂತೆ ಆ ಧ್ವನಿಗಳು ತನಗೆ ಹೇಳುತ್ತಿದ್ದವು !

ಇನ್ನು ವಿಚಾರಣೆ ವೇಳೆ ಆರೋಪಿಯು ತನ್ನ ತಲೆಯೊಳಗೆ ಧ್ವನಿಗಳು ಕೇಳಿಬರುತ್ತಿದ್ದವು ಮತ್ತು ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ಆ ಧ್ವನಿಗಳು ತನಗೆ ಹೇಳುತ್ತಿದ್ದವು ಎಂದು ಹೇಳಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಆತ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ. ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಪರವಾನಗಿ ಇಲ್ಲದೆ ಬಂದೂಕುಗಳನ್ನು ಇಟ್ಟುಕೊಂಡಿರುವುದು, ವಾಹನ ಕಳವು ಮತ್ತು ಕಳವು ಮಾಡಿದ ಸೊತ್ತನ್ನು ಸ್ವೀಕರಿಸಿದ ಆರೋಪಗಳಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆತನನ್ನು ಕಾನೂನು ಕ್ರಮಕ್ಕಾಗಿ ಯುಎಸ್ ಮಾರ್ಷಲ್ಸ್ ಸರ್ವಿಸ್ ವಶಕ್ಕೆ ನೀಡಲಾಗಿದೆ. ಶ್ವೇತಭವನದ ಸುತ್ತ ಹೆಚ್ಚುತ್ತಿರುವ ಭದ್ರತಾ ಆತಂಕಗಳ ನಡುವೆ ಈ ಘಟನೆ ನಡೆದಿದ್ದು, ಮಾನಸಿಕ ಅಸ್ಥಿರತೆ ಇರುವ ವ್ಯಕ್ತಿಗಳಿಂದ ಎದುರಾಗುವ ಅಪಾಯವನ್ನು ಎದುರಿಸಲು ಸೀಕ್ರೆಟ್ ಸರ್ವಿಸ್ ಸಿದ್ಧವಾಗಿದೆ ಎಂದು ನಿರ್ದೇಶಕ ಶಾನ್ ಕರನ್ ಹೇಳಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳು ನ್ಯಾಯಾಲಯದಲ್ಲಿ ನಡೆಯಲಿವೆ.

ಇದನ್ನೂ ಓದಿ : ವೋಟ್ ಮಾತ್ರವಲ್ಲ..ಜನರ ಹಕ್ಕುಗಳು ಕಳುವಾಗಿದೆ : ರಾಹುಲ್ ಗಾಂಧಿ

ಅಮೆರಿಕದಲ್ಲಿ ಅಕ್ರಮ ವಲಸೆ, ಸುಲಭವಾಗಿ ಸಿಗುವ ಮಾರಕ ಶಸ್ತ್ರಾಸ್ತ್ರಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಒಂದೇ ಕಡೆ ಸೇರಿದಾಗ ಎಷ್ಟು ದೊಡ್ಡ ಭದ್ರತಾ ಅಪಾಯ ಸೃಷ್ಟಿಯಾಗುತ್ತದೆ ಎಂಬುದನ್ನು ಇದು ಮತ್ತೊಮ್ಮೆ ತೋರಿಸಿದೆ. ಅಧ್ಯಕ್ಷರ ಸುತ್ತ ಎಷ್ಟೇ ಬಿಗಿ ಭದ್ರತೆ ಇದ್ದರೂ, ಕಳವು ಮಾಡಿದ ಕಾರಿನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಶ್ವೇತಭವನದ ಹತ್ತಿರದವರೆಗೂ ಒಬ್ಬ ವ್ಯಕ್ತಿ ತಲುಪಿರುವುದು ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನೂ ಎತ್ತಿ ತೋರಿಸುತ್ತದೆ. ಇನ್ನೊಂದು ಕಡೆ, ಆರೋಪಿಯ ಮಾನಸಿಕ ಸ್ಥಿತಿಯ ಬಗ್ಗೆ ಆತನೇ ನೀಡಿದ ಹೇಳಿಕೆ ನಿಜವೋ ಅಥವಾ ತನಿಖೆಯಿಂದ ತಪ್ಪಿಸಿಕೊಳ್ಳುವ ತಂತ್ರವೋ ಎಂಬುದನ್ನು ಕೂಲಂಕಷ ತನಿಖೆ ನಿರ್ಧರಿಸಬೇಕಿದೆ. ಅಕ್ರಮ ವಲಸಿಗ ಎಂಬ ಹಿನ್ನೆಲೆಯಿಂದ ಈ ಪ್ರಕರಣ ಅಮೆರಿಕದ ರಾಜಕೀಯ ಚರ್ಚೆಯಲ್ಲೂ ದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ.