ಉದ್ಯೋಗ ಮಾಹಿತಿ: ಚಿತ್ರದುರ್ಗ ನಗರದ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗಾಗಿ ಸ್ವ ಉದ್ಯೋಗ ಕೈಗೊಳ್ಳಲು ವಿಶೇಷ ಸಮಗ್ರ ಕೃಷಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಯಸುವ ಗ್ರಾಮೀಣ ಯುವಕ-ಯುವತಿಗಳಿಗೆ ಇಲ್ಲೊಂದು ಸುವರ್ಣ ಅವಕಾಶವಿದೆ. ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ ಕುರಿತು ಮಾರ್ಗದರ್ಶನ ಸಿಗಲಿದೆ.
ಈ 13 ದಿನಗಳ ತರಬೇತಿಯು ಸಂಪೂರ್ಣ ಉಚಿತವಾಗಿದ್ದು(Free Training), ಆಗಮಿಸುವ ಅಭ್ಯರ್ಥಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಉಚಿತವಾಗಿರಲಿದೆ. ನವೆಂಬರ್ 16ರಂದು ತರಬೇತಿ ಪ್ರಾರಂಭವಾಗಲಿದೆ.
ತರಬೇತಿ ವಿವರ ಮತ್ತು ಅರ್ಹತೆಗಳು
- ಸಂಸ್ಥೆಯ ಹೆಸರು: ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗ.
- ತರಬೇತಿಯ ಹೆಸರು: ಸಮಗ್ರ ಕೃಷಿ ಮತ್ತು ಸ್ವ ಉದ್ಯೋಗ ತರಬೇತಿ.
- ವಯೋಮಿತಿ: 19 ರಿಂದ 50 ವರ್ಷ ವಯೋಮಿತಿಯೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಹತೆ: ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯುವ ಸಾಮಾನ್ಯ ಜ್ಞಾನವಿರಬೇಕು. ಕೃಷಿ ಹಾಗೂ ಸ್ವಯಂ ಉದ್ಯೋಗದ ಬಗ್ಗೆ ಪ್ರಾಥಮಿಕ ಆಸಕ್ತಿ ಕಡ್ಡಾಯವಾಗಿದೆ.
- ಅವಧಿ: ಒಟ್ಟು 13 ದಿನಗಳ ಕಾಲ ಈ ಉಚಿತ ವಸತಿಯುತ ತರಬೇತಿ ನಡೆಯಲಿದೆ.
ಇದನ್ನು ಓದಿ: ಉದ್ಯೋಗ ಮಾಹಿತಿ: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 10ನೇ ತರಗತಿ ಪಾಸಾದವರಿಗೆ ಜವಾನ ಹುದ್ದೆಗಳ ನೇಮಕಾತಿ
ಸಂದರ್ಶನ ಮತ್ತು ಅಗತ್ಯ ದಾಖಲೆಗಳು
- ಪ್ರಾರಂಭ ದಿನಾಂಕ: ಈ ತರಬೇತಿಯು ಇದೇ ನವೆಂಬರ್ 16ರಿಂದ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ.
- ದಾಖಲೆಗಳು: ಆಸಕ್ತರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ನೇರವಾಗಿ ಸಂಸ್ಥೆಗೆ ತೆರಳಬಹುದು.
- ಸಂಪರ್ಕ ಸಂಖ್ಯೆಗಳು: ಹೆಚ್ಚಿನ ಮಾಹಿತಿಗಾಗಿ 8431329162, 861828445, 8660627785 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಗ್ರಾಮೀಣ ಪ್ರದೇಶದ ಯುವ ಜನತೆ ಈ ಸದಾವಕಾಶವನ್ನು ತಪ್ಪದೆ ಬಳಸಿ.




