☔ Weather
Bengaluru: ☀️ 25°C | AQI 128
Mysore: ☀️ 23°C | AQI 152
Mangalore: ☀️ 28°C | AQI 184
Bengaluru: ☀️ 25°C | AQI 128
☔ Weather
Bengaluru: ☀️ 25°C | AQI 128
Mysore: ☀️ 23°C | AQI 152
Mangalore: ☀️ 28°C | AQI 184
Bengaluru: ☀️ 25°C | AQI 128

Bigg Boss Kannada: ಗಾನವಿ vs ಪ್ರಶಾಂತ್ ಜಗಳ: ಸುದೀಪ್ ಕೊಟ್ಟ ತೀರ್ಪು ಏನು?

Bigg Boss Kannada
ಬಿಗ್‌ಬಾಸ್‌ ಮನೆಯಲ್ಲಿ ಜಗಳ ನಡೆದಿದೆ. ಪ್ರಶಾಂತ್‌, ಗಾನವಿ ಮೇಲೆ ಹಲ್ಲೆ ಮಾಡಿದ ಆರೋಪ ಇದೆ. ಸುದೀಪ್‌ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಗಾನವಿ vs ಪ್ರಶಾಂತ್ ಜಗಳ
  • ನಡೆದಿದ್ದೇನು? ತಪ್ಪು ಯಾರದ್ದು?
  • ಸುದೀಪ್ ಕೊಟ್ಟ ತೀರ್ಪು ಏನು?

ಬಿಗ್​​ಬಾಸ್ (Bigg Boss Kannada) ಮನೆಯಲ್ಲಿ ಕಳೆದ ವಾರ ಸಾಕಷ್ಟು ಜಗಳ-ಗಲಾಟೆಗಳು ನಡೆದವು. ಯಶಸ್ ಮತ್ತು ಮಂಜ ವಾರ ಪೂರ್ತಿ ಜಗಳ ಮಾಡುತ್ತಲೇ ಇದ್ದರು. ಆತ್ಮೀಯ ಗೆಳತಿಯರಾಗಿದ್ದ ಸೌಂದರ್ಯಾ ಮತ್ತು ಆಸಿಯಾ ಜಗಳ ಮಾಡಿದರು. ಆಸಿಯಾ ಮತ್ತು ಯಶಸ್​​ ಸಹ ಜಗಳ ಮಾಡಿಕೊಂಡರು. ಶೋ ಪ್ರಾರಂಭವಾದ ದಿನದಿಂದಲೂ ಆತ್ಮೀಯ ಗೆಳೆಯರಾಗಿದ್ದ ತಾಂಡವ್ ಮತ್ತು ಗಗನ್ ಅನ್ನೂ ಭೀಕರವಾಗಿ ಜಗಳ ಮಾಡಿಕೊಂಡರು. ಒಬ್ಬರಿಗೊಬ್ಬರು ಬೆದರಿಕೆ ಹಾಕಿಕೊಂಡರು, ಹೊಡೆದಾಡುವ ಹಂತ ತಲುಪಿದರು. ಆದರೆ ಜಗಳವಾದ ಒಂದೇ ದಿನದಲ್ಲಿ ಇಬ್ಬರೂ ಪರಸ್ಪರ ಮತ್ತೆ ಸ್ನೇಹಿತರಾದರು. ಆದರೆ ಅದೇ ವಾರ ಗಾನವಿ ಮತ್ತು ಪ್ರಶಾಂತ್ ನಡುವೆಯೂ ಜಗಳ ನಡೆಯಿತು. ಆ ಜಗಳ ಕುರಿತು ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ವಿಚಾರಣೆ ನಡೆಸಿದರು.

ಆಗಿದ್ದಿಷ್ಟು, ಪೋಸ್ಟರ್​​ಗೆ ಬಣ್ಣ ಹಚ್ಚುವ ಟಾಸ್ಕ್​​ನಲ್ಲಿ ಪ್ರಶಾಂತ್ ಪೋಸ್ಟರ್​​ನ ಕಾವಲಿಗೆ ನಿಂತಿದ್ದ. ಗಾನವಿ ಬಣ್ಣ ಹಚ್ಚಲು ಬಂದಾಗ ತಾಂಡವ್, ಗಾನವಿಯನ್ನು ಹಿಡಿದು ಕೆಳಗೆ ಮಲಗಿಸಿದ್ದರು. ಅದೇ ಸಮಯದಲ್ಲಿ ಧನುಶ್ ಸಹ ಬಣ್ಣ ಹಚ್ಚಲು ಬಂದ ಕಾರಣ, ಧನುಶ್ ಅನ್ನು ತಡೆಯಲು ಹೋಗಿ ಗಾನವಿಯ ಕತ್ತಿನ ಭಾಗದ ಮೇಲೆ ಮೊಣಕಾಲನ್ನೇ ಇರಿಸಿಬಿಟ್ಟರು ಪ್ರಶಾಂತ್, ಮೊಣಕಾಲು ಇರಿಸಿದ್ದು ಮಾತ್ರವೇ ಅಲ್ಲದೆ, ‘ಉದ್ದೇಶಪೂರ್ವಕ’ವಾಗಿ ಮೊಣಕಾಲನ್ನು ಗಾನವಿಯ ಕೊರಳಿನ ಮೇಲೆ ಗಟ್ಟಿಯಾಗಿ ಊರಿ ಮೇಲೆದ್ದರು. ಇದರಿಂದ ಗಾನವಿಗೆ ಹೆಚ್ಚು ನೋವಾಯ್ತು.

ಇದನ್ನೂ ಓದಿ:BBK 13: ಯಶಸ್ vs ಮಂಜು ಟಾಸ್ಕ್ ಗೊಂದಲಕ್ಕೆ ಬಿತ್ತು ತೆರೆ; ಎಐ ಸಹಾಯದಿಂದ ಗೆದ್ದವರು ಯಾರು ಗೊತ್ತಾ?

​​ಈ ಕುರಿತು ಶನಿವಾರದ ಎಪಿಸೋಡಿನಲ್ಲಿ ಸುದೀಪ್ ವಿಚಾರಣೆ ಮಾಡಿದರು. ಆಗ ಹಲವು ಬಾರಿ ವಿಡಿಯೋ ಅನ್ನು ಪ್ಲೇ ಮಾಡಲಾಯ್ತು. ವಿಡಿಯೋ ನೋಡಿದ ಯಶಸ್ ಮತ್ತು ಗಗನ್, ‘ಪ್ರಶಾಂತ್ ಉದ್ದೇಶಪೂರ್ವಕವಾಗಿಯೇ ಗಾನವಿಯ ಕತ್ತಿನ ಮೇಲೆ ಕಾಲಿಟ್ಟಿದ್ದಾರೆ’ ಎಂದರು. ಆದರೆ ಅದೇ ವಿಡಿಯೋ ಅನ್ನು ಸುದೀಪ್ ಅವರು ಬೇರೆ ಕೋನದಿಂದ ತೋರಿಸಿದರು. ಆಗ ಗೊತ್ತಾಗಿದ್ದು ಏನೆಂದರೆ ಗಾನವಿ ಪ್ರಶಾಂತ್ ಕಾಲು ಹಿಡಿದುಕೊಂಡಿದ್ದರು. ಅದೇ ಕಾರಣಕ್ಕೆ ಪ್ರಶಾಂತ್ ಗಾನವಿಯ ಮೇಲೆ ಬಿದ್ದಿದ್ದು. ಪ್ರಶಾಂತ್ ಬಿದ್ದ ಮೇಲೂ ಗಾನವಿ, ಪ್ರಶಾಂತ್ ಕಾಲು ಬಿಡಲಿಲ್ಲ, ಹಾಗಾಗಿ ಪ್ರಶಾಂತ್​​ಗೆ ಏಳಲು ತಡವಾಯ್ತು.

ಇದನ್ನು ಪ್ರಾಕ್ಟಿಕಲ್ ಆಗಿ ಪ್ರೂವ್ ಮಾಡಿದ ಸುದೀಪ್, ಪ್ರಶಾಂತ್ ಮತ್ತು ಧನುಶ್ ಅವರನ್ನು ಪಕ್ಕ-ಪಕ್ಕ ಕೂರಿಸಿ ಒಟ್ಟಿಗೆ ಏಳಿಸಿದರು. ಧನುಶ್ ಬೇಗ ಎದ್ದರೆ ಪ್ರಶಾಂತ್ ತಡ ಮಾಡಿದರು. ಪ್ರಶಾಂತ್ ಅವರ ದೇಹತೂಕ ಹೆಚ್ಚಾಗಿರುವ ಕಾರಣ, ಪ್ರಶಾಂತ್​​ಗೆ ಬೇಗ ಏಳಲು ಆಗಲಿಲ್ಲ ಎಂದು ಸುದೀಪ್ ಹೇಳಿದರು. ಆ ಮೂಲಕ ಪ್ರಶಾಂತ್ ಬೇಕೆಂದು ಗಾನವಿಗೆ ಹಲ್ಲೆ ಮಾಡಿಲ್ಲ ಎಂಬ ತೀರ್ಪು ನೀಡಿದರು. ಬಳಿಕ ಪ್ರಶಾಂತ್ ಸಹ ಸುದೀಪ್ ಎದುರೇ ಗಾನವಿಗೆ ಕ್ಷಮೆ ಕೇಳಿದರು. ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ನನ್ನಿಂದ ನಿಮಗೆ ನೋವಾಗಿದೆ ಕ್ಷಮಿಸಿ ಎಂದರು. ಗಾನವಿ ಸಹ ಕ್ಷಮಿಸಿದರು.