☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

ಚಿತ್ರದುರ್ಗ ಗ್ರಾಮ ಪಂಚಾಯಿತಿ ಕರವಸೂಲಿಗಾರ ಹುದ್ದೆ; ನವೆಂಬರ್ 20ರಂದು ಪರೀಕ್ಷೆ

Panchayat Recruitment 2026: Chitradurga Gram Panchayat Computer Test Date Announced
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕರವಸೂಲಿಗಾರ ಹುದ್ದೆಯ 58 ಅಭ್ಯರ್ಥಿಗಳಿಗೆ ನವೆಂಬರ್ 20ರಂದು ಕಂಪ್ಯೂಟರ್ ಪರೀಕ್ಷೆ ನಡೆಯಲಿದೆ. ಪೂರ್ಣ ವಿವರ ಹಾಗೂ ಸಮಯದ ಪಟ್ಟಿ ಇಲ್ಲಿದೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರ ಹುದ್ದೆಗಳ ಭರ್ತಿಗೆ ಮಹತ್ವದ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ನವೆಂಬರ್ 20ರಂದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಡೆಯಲಿದೆ.

ಸರ್ಕಾರಿ ಉದ್ಯೋಗ ಪಡೆಯಲು ಕನಸು ಕಾಣುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ನಿರ್ಣಾಯಕ ಘಟ್ಟವಾಗಿದೆ. ಅರ್ಜಿ ಸಲ್ಲಿಸಿರುವವರ ಪೈಕಿ 58 ಅಭ್ಯರ್ಥಿಗಳು ಈ ಪರೀಕ್ಷೆಗೆ ಅಂತಿಮವಾಗಿ ಅರ್ಹತೆ ಪಡೆದಿದ್ದಾರೆ.

ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈ ಪರೀಕ್ಷೆ ಆಯೋಜಿಸಲಾಗಿದೆ. ಅಭ್ಯರ್ಥಿಗಳು ತಕ್ಷಣವೇ ತಮ್ಮ ಹೆಸರು ಮತ್ತು ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಪರೀಕ್ಷೆಯ ಬ್ಯಾಚ್ ವಿವರ ಹಾಗೂ ಸಮಯ

  • ಮೊದಲ ಬ್ಯಾಚ್: ಕ್ರಮ ಸಂಖ್ಯೆ 01 ರಿಂದ 20 ರವರೆಗಿನ ಅಭ್ಯರ್ಥಿಗಳಿಗೆ ಬೆಳಿಗ್ಗೆ 10:00 ರಿಂದ 11:30 ರವರೆಗೆ ಪರೀಕ್ಷೆ ನಡೆಯಲಿದೆ.
  • ಎರಡನೇ ಬ್ಯಾಚ್: ಕ್ರಮ ಸಂಖ್ಯೆ 21 ರಿಂದ 40 ರವರೆಗಿನ ಅಭ್ಯರ್ಥಿಗಳಿಗೆ ಬೆಳಿಗ್ಗೆ 12:00 ರಿಂದ ಮಧ್ಯಾಹ್ನ 1:30 ರವರೆಗೆ ನಿಗದಿಯಾಗಿದೆ.
  • ಮೂರನೇ ಬ್ಯಾಚ್: ಕ್ರಮ ಸಂಖ್ಯೆ 41 ರಿಂದ 58 ರವರೆಗಿನ ಅಭ್ಯರ್ಥಿಗಳಿಗೆ ಮಧ್ಯಾಹ್ನ 2:00 ರಿಂದ ಸಂಜೆ 3:30 ರವರೆಗೆ ಪರೀಕ್ಷೆ ಇರುತ್ತದೆ.

ಇದನ್ನು ಓದಿ: ಉದ್ಯೋಗ ಮಾಹಿತಿ: ಚಿತ್ರದುರ್ಗ ರುಡ್ಸೆಟ್ ಸಂಸ್ಥೆಯಿಂದ ಉಚಿತ ತರಬೇತಿ; ಸ್ವಾವಲಂಬಿ ಬದುಕಿಗೆ ಗೋಲ್ಡನ್ ಚಾನ್ಸ್

ಚಿತ್ರದುರ್ಗ: ಸಿಇಒ ಸೂಚನೆ ಮತ್ತು ವೆಬ್‌ಸೈಟ್ ವಿವರ

  • ಅಧಿಕೃತ ವೆಬ್‌ಸೈಟ್: ಅಭ್ಯರ್ಥಿಗಳುnic.in ವೆಬ್‌ಸೈಟ್ ಮೂಲಕ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬಹುದು.
  • ಮುಖ್ಯ ಸೂಚನೆ: ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಸ್. ಆಕಾಶ್ ಅವರ ಸೂಚನೆಯಂತೆ, ಅಭ್ಯರ್ಥಿಗಳು ನಿಗದಿಪಡಿಸಿದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
  • ಪ್ರಮುಖ ದಿನ: ನವೆಂಬರ್ 20ರಂದು ನಡೆಯುವ ಈ ಪರೀಕ್ಷೆಗೆ ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಸಮಯಕ್ಕೆ ತೆರಳಿ ಯಶಸ್ವಿಗೊಳಿಸಿ.