Darshan Case: ದರ್ಶನ್-ರೇಣುಕಾಸ್ವಾಮಿ ಕೇಸ್‌ನಲ್ಲಿ 1 ಬಿಗ್ ಟ್ವಿಸ್ಟ್; ಪ್ರಭಾವಿಗಳಿಗೆ ನಡುಕ?

Darshan Case: Rapid Investigation Against Pradosh, Big Move by Darshan's Legal Team

Photo Credits: @madhuvdboss_official (Instagram)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಮಾಫಿ ಸಾಕ್ಷಿ ಆಗಲು ಮುಂದಾಗಿದ್ದಾರೆ.

ಆದರೆ ಈ ಮಾಫಿ ಸಾಕ್ಷಿ ವಿಷಯದಲ್ಲಿ ಪ್ರದೋಷ್ ಬೆನ್ನಿಗೆ ಯಾರಾದರೂ ಪ್ರಭಾವಿ ವ್ಯಕ್ತಿಗಳು ನಿಂತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಕೋರ್ಟ್‌ನಲ್ಲಿ ದರ್ಶನ್ (Darshan Case) ಪರ ವಕೀಲರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪದ ಬೆನ್ನಲ್ಲೇ ನ್ಯಾಯಾಲಯದ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಾಫಿ ಸಾಕ್ಷಿ ಅರ್ಜಿ ಹಾಕಿದಾಗಿನಿಂದ ಪ್ರದೋಷ್ ಕುಟುಂಬಸ್ಥರ ಚಲನವಲನದ ಮೇಲೆ ನಿಗಾ ಇಡಲಾಗಿದೆ.

Darshan Case: ಜೈಲಿನಲ್ಲಿದ್ದು ಪ್ರದೋಷ್ ಕರೆ ಮಾಡಿದ್ದು ಯಾರಿಗೆ?

ಪ್ರದೋಷ್ ಜೈಲಿನಲ್ಲಿದ್ದುಕೊಂಡು ಯಾರಿಗೆಲ್ಲ ಕರೆ ಮಾಡಿ ಮಾತನಾಡುತ್ತಿದ್ದರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಅವರು ಜೈಲಿನಲ್ಲಿ ಯಾರನ್ನು ಭೇಟಿಯಾಗುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಪಿನ್ ಟು ಪಿನ್ ಸಂಗ್ರಹಿಸುತ್ತಿದ್ದಾರೆ.

ತನಿಖೆ ವೇಳೆ ಪ್ರದೋಷ್ ಕರೆ ಮಾಡಿದ್ದ ಮೊಬೈಲ್ ನಂಬರ್ ಪರಿಶೀಲಿಸಲಾಗಿದೆ. ಅದು ಅವರ ಹೆಸರಿನಲ್ಲಿಯೇ ಇರುವ ನಂಬರ್ ಎಂಬುದು ಪತ್ತೆಯಾಗಿದೆ. ಆ ನಂಬರ್‌ಗೆ ಕೆಲ ಬ್ಯಾಂಕ್ ಅಕೌಂಟ್‌ಗಳು ಲಿಂಕ್ ಆಗಿರುವುದು ಗೊತ್ತಾಗಿದೆ.

ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆಗೂ ಮುನ್ನ ಹಾಗೂ ನಂತರದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ತನಿಖೆಯ ವರದಿ ಪ್ರಕರಣಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.

ದರ್ಶನ್ ಲೀಗಲ್ ಟೀಮ್ ಬಿಗ್ ಮೂವ್: ಹೈಕೋರ್ಟ್‌ಗೆ ಹೋಗಲು ಸಿದ್ಧತೆ

ಇನ್ನೊಂದೆಡೆ ನಟ ದರ್ಶನ್ ಲೀಗಲ್ ಟೀಮ್ ದೊಡ್ಡ ಹೆಜ್ಜೆ ಇಡಲು ಮುಂದಾಗಿದೆ. ಮಾಹಿತಿ ಹಕ್ಕು ಕಾಯ್ದೆ (RTI) ಮೂಲಕ ಜೈಲಿನಿಂದ ಪ್ರದೋಷ್ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ವಕೀಲರು ನಿರ್ಧರಿಸಿದ್ದಾರೆ.

ಪಕ್ಕಾ ಸಾಕ್ಷ್ಯಗಳನ್ನು ಆಧರಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರದೋಷ್ ವಿರುದ್ಧ ಸಾಕ್ಷ್ಯಗಳು ಸಿಕ್ಕಿದರೆ ಅದು ದರ್ಶನ್ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

ಒಂದು ವೇಳೆ ಷರತ್ತು ಮೀರಿದರೆ ಅಥವಾ ವಿರುದ್ಧ ಸಾಕ್ಷ್ಯ ಸಿಕ್ಕಿದರೆ ಮಾಫಿ ಸಾಕ್ಷಿಗೆ ತಡೆ ಸಿಗುವ ಸಾಧ್ಯತೆಯಿದೆ. ಹೀಗಾಗಿ ಪ್ರದೋಷ್ ತಮ್ಮ ವಕೀಲರ ಜೊತೆ ನಿರಂತರ ಚರ್ಚೆಯಲ್ಲಿ ತೊಡಗಿದ್ದಾರೆ.