☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

‘ರಾಮಾಯಣ’: ಬಾಕ್ಸ್ ಆಫೀಸ್ ನಲ್ಲಿ 1500 ಕೋಟಿ ದಾಟಿದ ‘ರಾಮಾಯಣ’; 2000 ಕೋಟಿ ಗುರಿ ಮುಟ್ಟುತ್ತಾ?

Ramayana Box Office Collection Crosses 1500 Crore Worldwide; Will 2000 Crore Mark Be Reached?
ರಣಬೀರ್ ಕಪೂರ್ ಮತ್ತು ಯಶ್ ನಟನೆಯ ‘ರಾಮಾಯಣ ಭಾಗ 1’ ಸಿನಿಮಾ ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ 1500 ಕೋಟಿ ರೂಪಾಯಿ ಗಡಿ ದಾಟಿದೆ. ಒಟ್ಟು 1519.05 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಚಿತ್ರ ಸೇಫ್ ಝೋನ್ ಸೇರಿದೆ. ಈಗ ಎಲ್ಲರ ಚಿತ್ತ 2000 ಕೋಟಿ ರೂಪಾಯಿ ಗುರಿಯ ಮೇಲಿದೆ.

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ ಭಾಗ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 14 ದಿನಗಳಲ್ಲೇ ಈ ಚಿತ್ರವು ವಿಶ್ವದಾದ್ಯಂತ 1500 ಕೋಟಿ ರೂಪಾಯಿಗಳ ಮಹತ್ವದ ಮೈಲಿಗಲ್ಲನ್ನು ದಾಟಿದೆ. ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹಿಂದಿ ಬೆಲ್ಟ್ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ದಕ್ಷಿಣ ಭಾರತದ ಭಾಷೆಗಳಲ್ಲಿ ಗಳಿಕೆಯ ವೇಗ ಸ್ವಲ್ಪ ತಗ್ಗಿದೆ. ಅದರಲ್ಲೂ ತೆಲುಗು ಮಾರುಕಟ್ಟೆಯಲ್ಲಿ ಕಲೆಕ್ಷನ್ ಕೊಂಚ ನಿಧಾನವಾಗಿದೆ.

ಸದ್ಯ ಸಿನಿಮಾ ತಂಡ ಹಾಗೂ ಅಭಿಮಾನಿಗಳ ಚಿತ್ತ 2000 ಕೋಟಿ ರೂಪಾಯಿ ಗಡಿಯ ಮೇಲಿದೆ. 14ನೇ ದಿನಕ್ಕೆ ಒಟ್ಟು 1519.05 ಕೋಟಿ ರೂಪಾಯಿ ಗ್ರಾಸ್ ಗಳಿಸಿರುವ ಈ ಚಿತ್ರ, ಮುಂದಿನ ದಿನಗಳಲ್ಲಿ ಈ ಬೃಹತ್ ಗುರಿಯನ್ನು ತಲುಪುತ್ತದೆಯೇ ಎಂಬ ಕುತೂಹಲ ಮೂಡಿಸಿದೆ.

14ನೇ ದಿನದ ಬಾಕ್ಸ್ ಆಫೀಸ್ ಲೆಕ್ಕಾಚಾರ

ಬಿಡುಗಡೆಯಾದ 14ನೇ ದಿನದಂದು ‘ರಾಮಾಯಣ’ ದೇಶಾದ್ಯಂತ ಒಟ್ಟು 23.20 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಹಿಂದಿ ಭಾಷೆಯೊಂದರಿಂದಲೇ 16.50 ಕೋಟಿ ರೂಪಾಯಿ ಹರಿದುಬಂದಿದೆ. ಮಲಯಾಳಂನಲ್ಲಿ 2.15 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಕನ್ನಡದಲ್ಲಿ 1.65 ಕೋಟಿ ರೂಪಾಯಿ, ತಮಿಳಿನಲ್ಲಿ 1.60 ಕೋಟಿ ಹಾಗೂ ತೆಲುಗಿನಲ್ಲಿ 1.30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 1009.05 ಕೋಟಿ ರೂಪಾಯಿ ತಲುಪಿದೆ.

ವಿದೇಶದಲ್ಲಿ ಭರ್ಜರಿ ಕಲೆಕ್ಷನ್

ಭಾರತದ ಜೊತೆಗೆ ವಿದೇಶದಲ್ಲೂ ‘ರಾಮಾಯಣ’ ಸಿನಿಮಾ ಉತ್ತಮ ಗಳಿಕೆ ಮುಂದುವರಿಸಿದೆ. 14ನೇ ದಿನದಂದು ವಿದೇಶಿ ಮಾರುಕಟ್ಟೆಯಿಂದ 8 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಒಟ್ಟಾರೆ ವಿದೇಶದ ಗ್ರಾಸ್ ಕಲೆಕ್ಷನ್ 510 ಕೋಟಿ ರೂಪಾಯಿ ಆಗಿದೆ. ಭಾರತ ಮತ್ತು ವಿದೇಶದ ಗಳಿಕೆ ಸೇರಿ ವಿಶ್ವದಾದ್ಯಂತ ಒಟ್ಟು ಗ್ರಾಸ್ ಮೊತ್ತ 1519.05 ಕೋಟಿ ರೂಪಾಯಿ ಮುಟ್ಟಿದೆ.

ಇದನ್ನು ಓದಿ: ರಾಮಾಯಣ: ಭಾರತದಲ್ಲೇ ಸಾವಿರ ಕೋಟಿ ಗ್ರಾಸ್ ಸನಿಹಕ್ಕೆ ‘ರಾಮಾಯಣ’; ಸೋಮವಾರವೂ 32 ಕೋಟಿ ರೂ. ಗಳಿಸಿ ಹೊಸ ದಾಖಲೆ

2000 ಕೋಟಿ ಗಡಿ ತಲುಪುತ್ತಾ ಸಿನಿಮಾ?

ಕೇರಳದಲ್ಲಿ ‘ರಾಮಾಯಣ’ ನಿರೀಕ್ಷೆಗೂ ಮೀರಿ ಪ್ರದರ್ಶನ ಕಾಣುತ್ತಿದೆ. ಆದರೆ ಬೇರೆ ದಕ್ಷಿಣ ಭಾರತದ ಭಾಷೆಗಳಲ್ಲಿ ಹೊಸ ಸಿನಿಮಾಗಳ ಆಗಮನದಿಂದ ಸ್ವಲ್ಪ ಹಿನ್ನಡೆಯಾಗಿದೆ. ಇತ್ತ ವಿದೇಶದ ಹೊಸ ರಾಷ್ಟ್ರಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸದ್ಯದ ಲೆಕ್ಕಾಚಾರದ ಪ್ರಕಾರ 2000 ಕೋಟಿ ತಲುಪುವುದು ಸುಲಭವಲ್ಲ. ಆದರೆ ಅಸಾಧ್ಯವೇನೂ ಅಲ್ಲ ಎನ್ನುತ್ತಿದ್ದಾರೆ ಸಿನಿ ಪಂಡಿತರು. ಈಗಾಗಲೇ ನಿರ್ಮಾಪಕರ ಪಾಲಿಗೆ ಸಿನಿಮಾ ಸೇಫ್ ಝೋನ್ ಸೇರಿದೆ.

ಭಾಗ 2ರ ಮೇಲೆ ಹೆಚ್ಚಿದ ನಿರೀಕ್ಷೆ

ಈ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಹಾಗೂ ಯಶ್ ಬಂಡವಾಳ ಹೂಡಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಮಿಂಚಿದ್ದಾರೆ. ಮೊದಲ ಭಾಗದ ಈ ಭರ್ಜರಿ ಯಶಸ್ಸು ‘ರಾಮಾಯಣ ಭಾಗ 2’ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಚಿತ್ರದ ಎರಡನೇ ಭಾಗವು 2028ರ ದೀಪಾವಳಿಗೆ ತೆರೆಗೆ ಬರಲಿದೆ.