☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

BBK 13: ಮಿತಿಮೀರಿದ ಗಾನವಿ-ಸೌಂದರ್ಯಾ ಮಾತಿನ ಯುದ್ಧ; ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಕ್ಲಾಸ್ ಗ್ಯಾರಂಟಿ

BBK 13: Ganavi Threatens Soundarya Shetty High Voltage Fight Update
BBK 13: 'ಬಿಗ್ ಬಾಸ್ ಕನ್ನಡ ಸೀಸನ್ 13' ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಮತ್ತು ಗಾನವಿ ನಡುವೆ ವೈಯಕ್ತಿಕ ವಿಚಾರಕ್ಕೆ ಭಾರಿ ಜಗಳ ನಡೆದಿದ್ದು, ನಿನ್ನನ್ನು ಹೊಡೆದು ಸಾಯಿಸುತ್ತೇನೆ ಎಂದು ಗಾನವಿ ಉಗ್ರ ಸ್ವರೂಪ ತಾಳಿದ್ದಾರೆ.

ಮುಖ್ಯಾಂಶಗಳು

  • ಗಾನವಿ ಮತ್ತು ಸೌಂದರ್ಯಾ ನಡುವೆ ಭಾರಿ ಜಗಳ.
  • ವೈಯಕ್ತಿಕ ವಿಚಾರ ಎಳೆದು ತಂದು ಪರಸ್ಪರ ವಾಗ್ವಾದ.
  • ಸೌಂದರ್ಯಾಗೆ ನೇರ ಬೆದರಿಕೆ ಹಾಕಿದ ಗಾನವಿ.

‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಜಗಳಗಳು ತಾರಕಕ್ಕೇರುತ್ತಿವೆ. ಮನೆಯೊಳಗೆ ಈಗ ಆಸಿಯಾ, ಸೌಂದರ್ಯಾ ಶೆಟ್ಟಿ ಮತ್ತು ಗಾನವಿ ಎಂಬ ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ.

ಈ ಮೂವರ ನಡುವೆ ಟಾಸ್ಕ್‌ಗಳ ವಿಚಾರವಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ನವೆಂಬರ್ 18ರ ಸಂಚಿಕೆಯಲ್ಲಿ ಸೌಂದರ್ಯಾ ಶೆಟ್ಟಿ ಮತ್ತು ಗಾನವಿ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ.

ಮಾತಿನ ಭರದಲ್ಲಿ ಇಬ್ಬರೂ ವೈಯಕ್ತಿಕ ವಿಷಯಗಳನ್ನು ಎಳೆದು ತಂದಿದ್ದಾರೆ. ಇದರಿಂದ ಕೆರಳಿದ ಗಾನವಿ ಅವರು ಸೌಂದರ್ಯಾ ಶೆಟ್ಟಿ ಮೇಲೆ ಉಗ್ರ ಸ್ವರೂಪ ತಾಳಿದ್ದು, ಮನೆಯ ವಾತಾವರಣವೇ ಬದಲಾಗಿದೆ.

ಮನೆಯ ಬಹುತೇಕರ ಜೊತೆ ಜಗಳ ಮಾಡಿಕೊಂಡಿರುವ ಗಾನವಿ

ಬಿಗ್ ಬಾಸ್ ಮನೆಯಲ್ಲಿ ಗಾನವಿ ಅವರು ಆರಂಭದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಎಲ್ಲಾ ಸ್ಪರ್ಧಿಗಳ ಜೊತೆಗೂ ಅವರು ಜಗಳವಾಡಿದ್ದಾರೆ.

ಈ ಮೊದಲು ಗಗನ್ ಚಿನ್ನಪ್ಪ ಅವರ ಜೊತೆ ಗಾನವಿಗೆ ತೀವ್ರ ಮಟ್ಟದಲ್ಲಿ ಜಗಳವಾಗಿತ್ತು. ಇತ್ತೀಚಿನ ಸಂಚಿಕೆಯಲ್ಲಿ ಜಗದೀಶ್ ಜೊತೆಗೂ ಮಾತಿಗೆ ಮಾತು ಬೆಳೆಸಿ ರಂಪಾಟ ಮಾಡಿಕೊಂಡಿದ್ದರು.

ಇದನ್ನು ಓದಿ: BBK 13: ಮೊನ್ನೆಯಷ್ಟೇ ‘ಮಂಜಿ’ ಎಂದು ಕಾಲೆಳೆದಿದ್ದ ಕಿಚ್ಚ; ಈಗ ಮಂಜನನ್ನೇ ನಾಮಿನೇಟ್ ಮಾಡಿ ಶಾಕ್ ಕೊಟ್ಟ ಗಾನವಿ

ಬಿಗ್ ಬಾಸ್ ಆಟದಲ್ಲಿ ಈಗಾಗಲೇ 73 ದಿನಗಳು ಕಳೆದಿದ್ದು, ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ. ಎರಡನೇ ಚಾನ್ಸ್ ಪಡೆದು ಮನೆಯೊಳಗೆ ಬಂದಿರುವ ಮಂಜನ ಜೊತೆ ಗಾನವಿ ಹೆಚ್ಚು ಆಪ್ತವಾಗಿದ್ದು, ಇದು ಕೂಡ ಆಟ ಮತ್ತು ಜಗಳಗಳ ಮೇಲೆ ಪರಿಣಾಮ ಬೀರುತ್ತಿದೆ.

BBK 13: ವೈಯಕ್ತಿಕ ವಿಚಾರ ಎಳೆದು ತಂದು ಕಿತ್ತಾಡಿಕೊಂಡ ಸ್ಪರ್ಧಿಗಳು

ಜಗಳದ ವೇಳೆ ಗಾನವಿ ಅವರು ಸೌಂದರ್ಯಾ ಶೆಟ್ಟಿ ವಿರುದ್ಧ ಏಕವಚನದಲ್ಲಿಯೇ ಕೂಗಾಡಿದ್ದಾರೆ. ‘ಮೊದಲು ಕನ್ನಡ ಸರಿಯಾಗಿ ಕಲಿ, ಮುಂಬೈಗೆ ಕಳಿಸುತ್ತೇನೆ. ಬೇರೆ ಶೋನಲ್ಲಿ ಹೊಡೆಸಿಕೊಂಡು ಬಂದಿದ್ದೀಯ, ಶೋಗೋಸ್ಕರ ಸಂಬಂಧ ಬೆಳೆಸಿದ್ದೀಯ’ ಎಂದು ಗಾನವಿ ಆರೋಪಿಸಿದ್ದಾರೆ.

ಗಾನವಿ ಅವರ ಈ ಮಾತುಗಳಿಂದ ಸೌಂದರ್ಯಾ ಶೆಟ್ಟಿ ಅವರ ಕೋಪ ನೆತ್ತಿಗೇರಿದೆ. ತಕ್ಷಣವೇ ತಿರುಗೇಟು ನೀಡಿದ ಸೌಂದರ್ಯಾ, ‘8 ವರ್ಷದಿಂದ ಒಂದು ರಿಲೇಷನ್‌ಶಿಪ್ ಇಟ್ಟುಕೊಂಡು, ಇಲ್ಲಿ ಗುಳುಗುಳು ಮಾಡೋದರ ಬಗ್ಗೆ ನಾನು ಹೇಳಬೇಕಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಮಾತಿನಿಂದ ಕೆಂಡಾಮಂಡಲವಾದ ಗಾನವಿ, ‘ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ನಾನು ಸುಮ್ಮನೆ ಇರಲ್ಲ, ನಿನ್ನನ್ನು ಹೊಡೆದು ಸಾಯಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ. ಈ ಗಂಭೀರ ಬೆಳವಣಿಗೆಯ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.