☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 28°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 28°C | AQI 180
Bengaluru: ☀️ 24°C | AQI 112

Jailer 2: ಬಾಕ್ಸ್ ಆಫೀಸ್ನಲ್ಲಿ ರಜನಿಕಾಂತ್ ‘ಜೈಲರ್ 2’ ಹವಾ; ವಿಶ್ವ ಮಟ್ಟದಲ್ಲಿ 800 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ

Jailer 2: Box Office Collection Crosses 800 Crores Rajinikanth Film
ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾ 18 ದಿನಗಳಲ್ಲಿ 807.25 ಕೋಟಿ ರೂ. ಗಳಿಸುವ ಮೂಲಕ 800 ಕೋಟಿ ಕ್ಲಬ್ ಸೇರಿದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಯಾದ ದಿನದಿಂದಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರವು ಈಗ ಹೊಸ ಮೈಲಿಗಲ್ಲು ತಲುಪಿದೆ.

ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ ಕಮಾಲ್ ಮಾಡುತ್ತಿರುವ ಈ ಸಿನಿಮಾ, ಭರ್ಜರಿ ಗಳಿಕೆಯೊಂದಿಗೆ ಮುನ್ನಡೆಯುತ್ತಿದೆ. ಕೇವಲ 18 ದಿನಗಳಲ್ಲಿ ಈ ಚಿತ್ರವು ಭಾರಿ ಪ್ರಮಾಣದ ಹಣ ಬಾಚಿಕೊಂಡಿದೆ.

ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ಜೈಲರ್ 2’ ಸಿನಿಮಾ ಜಾಗತಿಕ ಮಟ್ಟದಲ್ಲಿ ಬರೋಬ್ಬರಿ 807.25 ಕೋಟಿ ರೂಪಾಯಿ ಒಟ್ಟು ಗಳಿಕೆ ದಾಖಲಿಸಿದೆ. ಇದರೊಂದಿಗೆ ಈ ಚಿತ್ರವು 800 ಕೋಟಿ ರೂಪಾಯಿ ಕ್ಲಬ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ.

ಭಾರತ ಹಾಗೂ ವಿದೇಶಗಳಲ್ಲಿ ಭರ್ಜರಿ ಕಲೆಕ್ಷನ್

ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ‘ಜೈಲರ್ 2’ ಸಿನಿಮಾಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಭಾರತದಲ್ಲಿ ಈ ಚಿತ್ರದ ಒಟ್ಟು ನಿವ್ವಳ ಗಳಿಕೆ 456.30 ಕೋಟಿ ರೂಪಾಯಿಗಳಿಗೆ ತಲುಪಿದೆ.

ವಿವಿಧ ಭಾಷೆಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರವು ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿಯೂ ಉತ್ತಮ ಗಳಿಕೆ ಮಾಡಿದೆ. ವಿದೇಶಗಳಲ್ಲಿಯೂ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಒಟ್ಟು ಗಳಿಕೆ ಏರಿಕೆಯಾಗಿದೆ.

‘ಧುರಂಧರ್ 2’ ನಂತರದ ಸ್ಥಾನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಭಾರತೀಯ ಚಲನಚಿತ್ರವಾಗಿ ಜೈಲರ್ 2 ಹೊರಹೊಮ್ಮಿದೆ. ಇದು ರಜನಿಕಾಂತ್ ಅಭಿಮಾನಿಗಳಿಗೆ ದೊಡ್ಡ ಸಂತಸ ತಂದಿದೆ.

ಇದನ್ನು ಓದಿ: Jailer 2: ಸಾವಿರ ಕೋಟಿ ಗಳಿಸುತ್ತಾ ಜೈಲರ್ 2?

Jailer 2: ಸ್ಟಾರ್ ನಟರ ದಂಡು ಮತ್ತು ದಿಗ್ಗಜರ ಸಾಥ್

ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ಅತ್ಯಂತ ಯಶಸ್ವಿಯಾಗಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಕಥೆ ಜನರನ್ನು ಥಿಯೇಟರ್‌ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರಜನಿಕಾಂತ್ ಅವರೊಂದಿಗೆ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು ನಟಿಸಿದ್ದಾರೆ. ಅಲ್ಲದೆ, ರಮ್ಯಾ ಕೃಷ್ಣನ್ ಮತ್ತು ವಿದ್ಯಾ ಬಾಲನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದಲ್ಲದೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್ ಹಾಗೂ ಹೃತಿಕ್ ರೋಷನ್ ವಿಶೇಷ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಈ ತಾರಾಗಳ ಸಾಥ್ ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಿದೆ.