☔ Weather
Bengaluru: 🌧️ 21°C | AQI 49
Mysore: 🌦️ 22°C | AQI 42
Mangalore: ⛈️ 25°C | AQI 75
Bengaluru: 🌧️ 21°C | AQI 49

Darshan Case: ‘ಇವಳು ನನ್ನ ಹೆಂಡತಿ ಗೊತ್ತಾ?’: ರೇಣುಕಾಸ್ವಾಮಿ ಎದುರು ದರ್ಶನ್ ಬಾಯ್ಬಿಟ್ಟಿದ್ದ ಸತ್ಯ

Darshan Case: Pradosh Reveals Darshan's Words

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್ ವಿಚಾರಣೆ ವೇಳೆ ಹಲವು ಆಘಾತಕಾರಿ ಸತ್ಯಗಳು ಹೊರಬಿದ್ದಿವೆ. ಮೊದಲ ದಿನದ ವಿಚಾರಣೆಯಲ್ಲಿ ಪ್ರದೋಶ್ ಅವರು ಸತತ 3 ಗಂಟೆಗಳ ಕಾಲ ಅಂದು ನಡೆದ ಘಟನೆಯನ್ನು ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ. ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತಂದಿದ್ದು ಯಾರು ಹಾಗೂ ಹಲ್ಲೆ ನಡೆಸಿದ್ದು ಯಾರು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದ್ದೇನು?

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ತೀವ್ರ ಕೋಪಗೊಂಡಿದ್ದ ನಟ ದರ್ಶನ್ ಕೂಡ ತಕ್ಷಣವೇ ಶೆಡ್‌ಗೆ ಬಂದಿದ್ದರು. ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕಂಡ ದರ್ಶನ್ ಅವಾಚ್ಯ ಶಬ್ದಗಳಿಂದ ಬೈದು ಆತನ ಮೇಲೆ ಭೀಕರ ಹಲ್ಲೆ ನಡೆಸಿದ್ದಾರೆ.

Darshan Case: ‘ಇವಳು ನನ್ನ ಹೆಂಡತಿ’ ಎಂದಿದ್ದ ದರ್ಶನ್

ಹಲ್ಲೆಯ ವೇಳೆ ರೇಣುಕಾಸ್ವಾಮಿಗೆ ‘ಇವಳು ಯಾರು ಗೊತ್ತಾಯ್ತಾ?’ ಎಂದು ದರ್ಶನ್ ಪ್ರಶ್ನೆ ಮಾಡಿದ್ದರು. ಆಗ ರೇಣುಕಾಸ್ವಾಮಿ ಕೈ ಮುಗಿದು ತನಗೆ ಕ್ಷಮಿಸುವಂತೆ ದರ್ಶನ್ ಕಾಲಿಗೆ ಬಿದ್ದು ಬೇಡಿಕೊಂಡಿದ್ದನು. ಆ ಸಂದರ್ಭದಲ್ಲಿ ಪವಿತ್ರಾ ಗೌಡ ಭುಜದ ಮೇಲೆ ಕೈಹಾಕಿದ ದರ್ಶನ್, ‘ಇವಳು ನನ್ನ ಹೆಂಡತಿ’ ಎಂದು ಹೇಳಿದ್ದರು.

ಮರ್ಮಾಂಗಕ್ಕೆ ಒದ್ದಿದ್ದ ನಟ ದರ್ಶನ್

‘ನನ್ನ ಹೆಂಡತಿಗೆ ಮೆಸೇಜ್ ಮಾಡುವಷ್ಟು ಧೈರ್ಯ ನಿನಗೆ ಬಂದಿದೆಯಾ?’ ಎಂದು ದರ್ಶನ್ ತೀವ್ರ ಆಕ್ರೋಶ ಹೊರಹಾಕಿದ್ದರು. ಬಿಕರಿಯಾಗಿದ್ದ ಆ ಕ್ಷಣದಲ್ಲೇ ದರ್ಶನ್ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಜೋರಾಗಿ ಒದ್ದಿದ್ದರು ಎಂದು ಪ್ರದೋಶ್ ಮಾಹಿತಿ ನೀಡಿದ್ದಾರೆ. ದರ್ಶನ್ ಹಾಗೂ ಪವಿತ್ರಾ ನಡುವಿನ ಸಂಬಂಧದ ಬಗ್ಗೆಯೂ ಪ್ರದೋಶ್ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ನೀಡಿದ್ದಾರೆ.