☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಕೋರ್ಟ್‌ಗೆ ನಟ ದರ್ಶನ್ ಮತ್ತೆರಡು ಅರ್ಜಿ

Darshan Case: Major Twist in Renukaswamy Murder Trial with New Petitions

Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಮಹತ್ವದ ತಿರುವು ಪಡೆಯುತ್ತಿದೆ. ಮಾಫಿ ಸಾಕ್ಷಿ ಪ್ರದೋಷ್ ಕೋರ್ಟ್‌ನಲ್ಲಿ ನೀಡಿರುವ ಹೇಳಿಕೆಗಳು ಪ್ರಕರಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ಇದೀಗ ನಟ ದರ್ಶನ್ ಪರ ವಕೀಲರು ಕೋರ್ಟ್‌ಗೆ ಮತ್ತೆರಡು ನೂತನ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ.

ಪಟ್ಟಣಗೆರೆ ಶೆಡ್ ಕ್ರೌರ್ಯ ಬಿಚ್ಚಿಟ್ಟ ಪ್ರದೋಷ್

ಕಳೆದ ಮೂರು ದಿನಗಳಿಂದ ಆರೋಪಿ ಪ್ರದೋಷ್ ರಾವ್ ಕೋರ್ಟ್ ಮುಂದೆ ಮಾಫಿ ಸಾಕ್ಷ್ಯ ನುಡಿಯುತ್ತಿದ್ದಾರೆ. ಅವರು ಬರೋಬ್ಬರಿ 59 ಪುಟಗಳ, 100 ಪ್ಯಾರಾಗ್ರಾಫ್‌ಗಳ ಸುದೀರ್ಘ ಹೇಳಿಕೆಯನ್ನು ದಾಖಲಿಸಿದ್ದಾರೆ. ಶೆಡ್‌ನಲ್ಲಿ ನಡೆದ ಘಟನೆ, ಶವ ಸಾಗಾಟ ಹಾಗೂ ಸಾಕ್ಷ್ಯನಾಶದ ಪ್ರತಿಯೊಂದು ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ಪ್ರದೋಷ್ ವಿಚಾರಕ್ಕೆ ದರ್ಶನ್ ಸಲ್ಲಿಕೆ ಮಾಡಿದ ಅರ್ಜಿ ಏನು?

ಪ್ರದೋಷ್ ಹೇಳಿಕೆಯಿಂದ ಆತಂಕಗೊಂಡಿರುವ ದರ್ಶನ್ ಟೀಮ್ ತಕ್ಷಣವೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪ್ರದೋಷ್‌ಗೆ ನೀಡಲಾಗಿರುವ ಎಸ್ಕಾರ್ಟ್ ಭದ್ರತೆ ಮತ್ತು ಇತರರ ಭೇಟಿ ಕುರಿತು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಸಾಕ್ಷಿ ಜೊತೆ ಇತರರು ಭೇಟಿಯಾಗಲು ಅವಕಾಶ ನೀಡಬಾರದು ಎಂದು ದರ್ಶನ್ ವಕೀಲರು ಕೋರಿದ್ದಾರೆ.

ದರ್ಶನ್ ಅರ್ಜಿಗೆ ಎಸ್‍ಪಿಪಿ ನೀಡಿದ ಸ್ಪಷ್ಟನೆ

ಸೆಷನ್ಸ್ ಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದ್ದು, ಪ್ರಾಸಿಕ್ಯೂಷನ್ ಎಸ್‌ಪಿಪಿ ತಕ್ಕ ಉತ್ತರ ನೀಡಿದ್ದಾರೆ. ಜೈಲು ಅಧಿಕಾರಿಗಳು ಮತ್ತು ಪೊಲೀಸರು ಬಾಡಿ ಕ್ಯಾಮೆರಾ ಧರಿಸಿ ಪ್ರದೋಷ್ ಭದ್ರತೆ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರದೋಷ್ ಸುರಕ್ಷತೆಯ ದೃಷ್ಟಿಯಿಂದಲೇ ಅಗತ್ಯ ಬೆಂಗಾವಲು ಪಡೆ ನಿಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Darshan Case: ಕೋರ್ಟ್ ಆದೇಶ ಕಾಯ್ದಿರಿಸಿದ್ದು ಯಾವಾಗ?

ಅರ್ಜಿ ವಿಚಾರಣೆ ನಡೆಸಿದ 59ನೇ ಸೆಷನ್ಸ್ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ. ಮತ್ತೊಂದು ಎವಿಡೆನ್ಸ್ ಆಕ್ಟ್ ಸೆಕ್ಷನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಿದೆ.