☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ತಾಂಡವ್ ನೇರ ಮಾತಿಗೆ ಗರಂ ಆದ ಆಸಿಯಾ; ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರಂಪಾಟ

BBK 13: Captain Thandav Ram Direct Words Spark Fight with Aasiya Firdos

BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರ ದೊಡ್ಮನೆಯಲ್ಲಿ ಇದೀಗ ಕಾವೇರಿದ ವಾತಾವರಣ ನಿರ್ಮಾಣವಾಗಿದೆ. ಕ್ಯಾಪ್ಟನ್ ತಾಂಡವ್ ರಾಮ್ ಆಡಿದ ಮಾತುಗಳಿಗೆ ಸ್ಪರ್ಧಿ ಆಸಿಯಾ ಫಿರ್ದೋಸ್ ತೀವ್ರವಾಗಿ ಗರಂ ಆಗಿದ್ದಾರೆ. ತಾಂಡವ್ ರಾಮ್ ನೀಡಿರುವ ಬೋರ್ಡ್ ನೀಡುವ ಟಾಸ್ಕ್ ಹಾಗೂ ಹೇಳಿಕೆಗಳು ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.

ದೊಡ್ಮನೆಯಲ್ಲಿ ಬೋರ್ಡ್ ಟಾಸ್ಕ್ ರಂಪಾಟ

ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್‌ನಲ್ಲಿ ತಾಂಡವ್ ರಾಮ್ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮನೆಯ ಸದಸ್ಯರ ನಿಜವಾದ ವ್ಯಕ್ತಿತ್ವವನ್ನು ವಿವರಿಸುವ ಬೋರ್ಡ್‌ಗಳನ್ನು ಆಯಾ ಸ್ಪರ್ಧಿಗಳಿಗೆ ಹಾಕಿದ್ದಾರೆ. ಮತ್ತೊಬ್ಬರ ನೆರಳಿನಲ್ಲಿ ಇರುವವರು ಯಾರು ಎಂಬ ಪ್ರಶ್ನೆಗೆ ಜಗ್ಗ ಮಮ್ಮಿ ಹೆಸರು ಸೂಚಿಸಿದ್ದಾರೆ.

ಮುಖವಾಡ ಧರಿಸಿದವರಾರು? ಸೌಂದರ್ಯಗೆ ಶಾಕ್

ದೊಡ್ಮನೆಯಲ್ಲಿ ಮುಖವಾಡ ಧರಿಸಿರುವ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ತಾಂಡವ್ ರಾಮ್ ಸೌಂದರ್ಯ ಶೆಟ್ಟಿ ಹೆಸರು ಹೇಳಿದ್ದಾರೆ. ನನ್ನ ಜೊತೆ ಚೆನ್ನಾಗಿದ್ದುಕೊಂಡೇ ನನ್ನ ಅವಕಾಶ ಕಿತ್ತುಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಈ ವೇಳೆ ಸೌಂದರ್ಯ ಶೆಟ್ಟಿ ಯಾವುದೇ ಗಲಾಟೆ ಮಾಡದೆ ಸೈಲೆಂಟ್ ಆಗಿ ನಗೆ ಬೀರಿದ್ದಾರೆ.

ಆಸಿಯಾ ಫಿರ್ದೋಸ್ ಕೆಂಡಾಮಂಡಲ

ಸ್ನೇಹದಲ್ಲಿ ಲಾಭ ನೋಡುವ ವ್ಯಕ್ತಿ ಯಾರು ಎಂದಾಗ ತಾಂಡವ್ ರಾಮ್ ಅವರು ಆಸಿಯಾ ಫಿರ್ದೋಸ್ ಹೆಸರು ತಗೆದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಆಸಿಯಾ, ನನ್ನ ವ್ಯಕ್ತಿತ್ವವನ್ನು ಬೇರೆಯವರು ಜಡ್ಜ್ ಮಾಡುವುದು ಬೇಕಿಲ್ಲ ಎಂದು ವಾದಿಸಿದ್ದಾರೆ. ಆಸಿಯಾ ಎಷ್ಟೇ ಕೂಗಾಡಿದರೂ ತಾಂಡವ್ ರಾಮ್ ತಮ್ಮ ನಿಲುವಿಗೆ ಬದ್ಧರಾಗಿ ಶಾಂತವಾಗಿ ಉತ್ತರಿಸಿದ್ದಾರೆ.

BBK 13: ಸೀಸನ್ 13ರ 2ನೇ ಕ್ಯಾಪ್ಟನ್ ತಾಂಡವ್

ಸಂಗೀತಾ ಭಟ್ ಬಳಿಕ ಈ ಸೀಸನ್‌ನ ಎರಡನೇ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಲಿಖಿತ್ ಗೊಂದಿ ಹಾಗೂ ಮಂಜ್ಯಾರ ಎಡವಟ್ಟಿನಿಂದ ಕ್ಯಾಪ್ಟನ್ಸಿ ಟಾಸ್ಕ್ ರದ್ದಾದ ಬಳಿಕ ತಾಂಡವ್ ನಾಯಕರಾಗಿದ್ದರು. ಇದೀಗ ನಾಯಕನಾಗಿ ತಾಂಡವ್ ರಾಮ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮನೆಯಲ್ಲಿ ಕಿಚ್ಚು ಹೊತ್ತಿಸಿವೆ.