☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ಮನೆಗೆ ಹೊಸ ಕ್ಯಾಪ್ಟನ್ ಆಗಿ ತಾಂಡವ್ ಮಾಸ್ ರೀ-ಎಂಟ್ರಿ; ‘ಒಳ್ಳೆ ರಾಮನ್’ ಅವತಾರಕ್ಕಿಲ್ಲಿಗೆ ಬ್ರೇಕ್

BBK 13: Thandav Ram Re-Enters Show as New Captain

BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ತಾಂಡವ್ ರಾಮ್ ಭರ್ಜರಿಯಾಗಿ ರೀ-ಎಂಟ್ರಿ ಕೊಟ್ಟಿದ್ದಾರೆ. ಎಮರ್ಜೆನ್ಸಿ ರೂಮ್ ಮೂಲಕ ಮನೆಯಿಂದ ಹೊರಗೆ ಹೋಗಿದ್ದ ತಾಂಡವ್ ರಾಮ್, ಇದೀಗ ಹೊಸ ಅವತಾರದಲ್ಲಿ ದೊಡ್ಮನೆಗೆ ಮರಳಿದ್ದಾರೆ. ಕ್ಯಾಪ್ಟನ್ಸಿ ರೂಮ್ ಮೂಲಕ ಭರ್ಜರಿಯಾಗಿ ಎಂಟ್ರಿ ನೀಡಿ, ಮನೆಯ ಹೊಸ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಮನೆಯವರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.

ಕ್ಯಾಪ್ಟನ್ಸಿ ರೂಮ್ ಮೂಲಕ ಭರ್ಜರಿ ಎಂಟ್ರಿ

ತಾಂಡವ್ ರಾಮ್ ಮನೆಗೆ ಬರುತ್ತಿದ್ದಂತೆಯೇ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳು ಅಚ್ಚರಿಯಿಂದ ಚೀರ್ ಮಾಡುತ್ತಾ ಅತ್ಯಂತ ಪ್ರೀತಿಯಿಂದ ಅವರನ್ನು ಸ್ವಾಗತಿಸಿದ್ದಾರೆ. ದೊಡ್ಮನೆಗೆ ಒಳಗೆ ಕಾಲಿಟ್ಟ ತಕ್ಷಣ ತಾಂಡವ್ ತಮ್ಮ ಕುಚಿಕು ಗೆಳೆಯ ಗಗನ್ ಅವರನ್ನು ಮೊದಲಿಗೆ ಪ್ರೀತಿಯಿಂದ ತಬ್ಬಿಕೊಂಡರು. ಅವರ ಈ ಹಠಾತ್ ಎಂಟ್ರಿಯಿಂದ ಮನೆಯಲ್ಲಿದ್ದ ವಾತಾವರಣ ಸಂಪೂರ್ಣವಾಗಿ ಬದಲಾಗಿದ್ದು, ಎಲ್ಲರಲ್ಲೂ ಹೊಸ ಕುತೂಹಲ ಮೂಡಿದೆ.

‘ಇನ್ಮುಂದೆ ಒಳ್ಳೆ ರಾಮ್‌ನನ್ನು ನಿರೀಕ್ಷೆ ಮಾಡಬೇಡಿ’

ಇದಕ್ಕೂ ಮುನ್ನ ಮನೆಯಲ್ಲಿದ್ದಾಗ ತಾಂಡವ್ ರಾಮ್ ಎಲ್ಲರ ಬಳಿಯೂ ತುಂಬಾ ಒಳ್ಳೆಯವನಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ರೀ-ಎಂಟ್ರಿ ಕೊಡುತ್ತಿದ್ದಂತೆಯೇ ತಮ್ಮ ಆಟದ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುವ ಸುಳಿವು ನೀಡಿದ್ದಾರೆ. “ತುಂಬಾ ಒಳ್ಳೆಯವನಾಗಿದ್ದು ಸಾಕು, ಮೊದಲು ಇದ್ದ ಆ ಒಳ್ಳೆ ರಾಮ್‌ನನ್ನು ಇನ್ಮುಂದೆ ಯಾರೂ ನಿರೀಕ್ಷೆ ಮಾಡಬೇಡಿ” ಎಂದು ಹೇಳುವ ಮೂಲಕ ಮನೆಯವರಿಗೆ ಶಾಕ್ ನೀಡಿದ್ದಾರೆ.

BBK 13: ದೊಡ್ಮನೆಯಲ್ಲಿ ಹೆಚ್ಚಾಗಲಿದೆ ಆಟದ ರಂಗು

ಹೊಸ ಕ್ಯಾಪ್ಟನ್ ಆಗಿ ದೊಡ್ಮನೆಗೆ ಕಾಲಿಟ್ಟಿರುವ ತಾಂಡವ್ ರಾಮ್, ಮುಂದಿನ ದಿನಗಳಲ್ಲಿ ತಮ್ಮ ಆಟವನ್ನು ಹೇಗೆ ನಡೆಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ತಮ್ಮ ಕಠಿಣ ನಿರ್ಧಾರಗಳು ಹಾಗೂ ಬದಲಾದ ಶೈಲಿಯ ಮೂಲಕ ಮನೆಯಲ್ಲಿ ತಮ್ಮದೇ ಆದ ಹೊಸ ಶಕ್ತಿಯನ್ನು ಪ್ರದರ್ಶಿಸಲು ಅವರು ಸಜ್ಜಾಗಿದ್ದಾರೆ. ತಾಂಡವ್ ಅವರ ಈ ರೀ-ಎಂಟ್ರಿ ಮುಂಬರುವ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೊಸ ತಿರುವಿಗೆ ಕಾರಣವಾಗುವ ಸಾಧ್ಯತೆಯಿದೆ.