☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

BBK 13: ‘ಮಾಡರ್ನ್ ಕವಿ’ ರೀ-ಎಂಟ್ರಿಗೆ ಬೆದರಿದ ಮನೆಮಂದಿ; ಬಿಗ್ ಬಾಸ್ ಕೊಟ್ಟ ಟಾಸ್ಕ್ನಿಂದ ದೊಡ್ಮನೆಯಲ್ಲಿ ಅಲ್ಲೋಲ ಕಲ್ಲೋಲ

BBK 13: Manja Creates Chaos On Day 1 Messes Up House Task
ಬಿಗ್ ಬಾಸ್ ಕನ್ನಡ 13ಕ್ಕೆ ಮರಳಿದ ಮಾಡರ್ನ್ ಕವಿ ಮಂಜ ಮೊದಲ ದಿನವೇ ಮನೆಯಲ್ಲಿ ರಂಪಾಟ ಸೃಷ್ಟಿಸಿದ್ದು, ಇಡೀ ಮನೆಯನ್ನು ಅಸ್ತವ್ಯಸ್ತ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ರಿಯಾಲಿಟಿ ಶೋಗೆ ‘ಮಾಡರ್ನ್ ಮಹಾಕವಿ ಮಂಜ’ ಅವರ ಕಂಬ್ಯಾಕ್ ಆಗುತ್ತಿದ್ದಂತೆ ದೊಡ್ಮನೆಯಲ್ಲಿ ಮತ್ತೆ ರಂಪಾಟ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಮರಳಿದ ಮೊದಲ ದಿನವೇ ಮಂಜ ತಮ್ಮ ಅಬ್ಬರವನ್ನು ತೋರಿಸಿದ್ದಾರೆ.

ಅವರು ತಮ್ಮ ವಿಚಿತ್ರ ವರ್ತನೆ ಹಾಗೂ ಮಾತುಗಳ ಮೂಲಕ ಇಡೀ ಮನೆಯಲ್ಲಿ ದೊಡ್ಡ ಮಟ್ಟದ ಗಲಾಟೆ ಹಾಗೂ ಗೊಂದಲವನ್ನು ಸೃಷ್ಟಿಸಿದ್ದಾರೆ. ಮಂಜನ ಈ ನಡೆಯಿಂದಾಗಿ ಮನೆಯ ಶಾಂತಿಯುತ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದೆ.

ಬಿಗ್‌ ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೂ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡಿದ್ದ ಮಂಜ, ತಮ್ಮ ಅತಿರೇಕದ ವರ್ತನೆಯಿಂದ ಶೋನಿಂದ ಹೊರಬಿದ್ದರು. ಆದರೆ ಇದೀಗ ಮತ್ತೆ ಮರಳಿ ಮನೆಗೆ ಸೈರನ್ ಬಾರಿಸಿದ್ದಾರೆ.

ಬಿಗ್ ಬಾಸ್ ಟಾಸ್ಕ್; ಇಡೀ ಮನೆ ಅಸ್ತವ್ಯಸ್ತ

ಮನೆಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಮಂಜ ಅವರಿಗೆ ಬಿಗ್ ಬಾಸ್ ವಿಶೇಷ ಹಾಗೂ ಕಠಿಣವಾದ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ ನಿರ್ವಹಿಸುವ ನೆಪದಲ್ಲಿ ಮಂಜ ಇಡೀ ಮನೆಯನ್ನು ಅಸ್ತವ್ಯಸ್ತ ಮಾಡಿದ್ದಾರೆ.

ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಮನೆಮಂದಿಗೆ ದೊಡ್ಡ ತಲೆನೋವು ತಂದಿಟ್ಟಿದ್ದಾರೆ. ಮಂಜನ ಈ ವಿಚಿತ್ರ ನಡೆ ಕಂಡು ಉಳಿದ ಸ್ಪರ್ಧಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: BBK 13: ಮನೆಮಂದಿಗೆ ಗೊತ್ತಿಲ್ಲದ ಮಂಜನ ಸೀಕ್ರೆಟ್ ಟ್ವಿಸ್ಟ್; ಬದಲಾಗಲು ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ತಾರಾ ಮಾಡರ್ನ್ ಕವಿ?

ಈ ರಂಪಾಟದ ನಡುವೆಯೂ ದೊಡ್ಮನೆಯಲ್ಲಿ ಗೊಂದಲ ಹೆಚ್ಚಾಗಿದ್ದು, ಆಟದ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಮಂಜನ ಈ ಎಂಟ್ರಿಯಿಂದಾಗಿ ಮನೆಯಲ್ಲಿ ಪ್ರತಿಯೊಬ್ಬರ ಗೇಮ್ ಪ್ಲಾನ್ ಬದಲಾಗುವ ಸೂಚನೆ ಸಿಕ್ಕಿದೆ.

BBK 13: ಸ್ಪರ್ಧಿಗಳಿಗೆ ಕ್ಲೀನಿಂಗ್ ಸವಾಲು; ಗ್ರೋಸರಿ ಟ್ವಿಸ್ಟ್

ಮಂಜ ಅಸ್ತವ್ಯಸ್ತ ಮಾಡಿರುವ ಇಡೀ ಮನೆಯನ್ನು ಬಿಗ್ ಬಾಸ್ ಸ್ಪರ್ಧಿಗಳು ಸಂಪೂರ್ಣವಾಗಿ ಕ್ಲೀನ್ ಮಾಡಬೇಕಾಗಿದೆ. ಇದು ಮನೆಮಂದಿಗೆ ನೀಡಲಾಗಿರುವ ಹೊಸ ಬಿಗ್ ಸವಾಲಾಗಿದೆ.

ಸ್ಪರ್ಧಿಗಳು ಎಷ್ಟರ ಮಟ್ಟಿಗೆ ಮನೆಯನ್ನು ಪರಿಶುದ್ಧವಾಗಿ ಶುಚಿಗೊಳಿಸುತ್ತಾರೆ ಎಂಬುದರ ಆಧಾರದ ಮೇಲೆಯೇ ಬಿಗ್ ಬಾಸ್ ಅವರಿಗೆ ವಾರದ ಗ್ರೋಸರಿ (ದಿನಸಿ) ನೀಡಲಿದ್ದಾರೆ.

ಹೀಗಾಗಿ ಮಂಜ ಮಾಡಿದ ಗೊಂದಲವನ್ನು ಸರಿಪಡಿಸಲು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದಾರೆ. ಮಂಜನ ಈ ಎರಡನೇ ಇನ್ನಿಂಗ್ಸ್ ಮುಂಬರುವ ದಿನಗಳಲ್ಲಿ ಇನ್ನೆಷ್ಟು ಗಲಾಟೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.