ಮಾಸ್ ಆಟಿಟ್ಯೂಡ್‌ನಿಂದ ಬೋಲ್ಡ್ ಸ್ಟೇಟ್‌ಮೆಂಟ್
ವೇದಿಕೆ ಮೇಲೆಯೇ ತಮ್ಮ ಕಡಕ್ ಆಟಿಟ್ಯೂಡ್ ತೋರಿಸಿದ ಗಗನ್ ಚಿನ್ನಪ್ಪ, “ನಾನು ಯಾರನ್ನೂ ಕೇರ್ ಮಾಡುವವನಲ್ಲ” ಎಂದು ಹೇಳುವ ಮೂಲಕ ದೊಡ್ಮನೆಯಲ್ಲಿ ಮಾಸ್ ಹಂಗಾಮಾ ಸೃಷ್ಟಿಸುವ ಸೂಚನೆ ನೀಡಿದ್ದಾರೆ.
ವೇದಿಕೆ ಮೇಲೆಯೇ ತಮ್ಮ ಕಡಕ್ ಆಟಿಟ್ಯೂಡ್ ತೋರಿಸಿದ ಗಗನ್ ಚಿನ್ನಪ್ಪ, “ನಾನು ಯಾರನ್ನೂ ಕೇರ್ ಮಾಡುವವನಲ್ಲ” ಎಂದು ಹೇಳುವ ಮೂಲಕ ದೊಡ್ಮನೆಯಲ್ಲಿ ಮಾಸ್ ಹಂಗಾಮಾ ಸೃಷ್ಟಿಸುವ ಸೂಚನೆ ನೀಡಿದ್ದಾರೆ.
‘ಮಂಗಳಗೌರಿ ಮದುವೆ’ ಸೇರಿದಂತೆ ಪ್ರಮುಖ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರುವ ನಟ ಗಗನ್ ಚಿನ್ನಪ್ಪ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ತಮ್ಮಲ್ಲಿರುವ ನೈಜ ಪ್ರತಿಭೆ ಹಾಗೂ ಅಸಲಿ ವ್ಯಕ್ತಿತ್ವವನ್ನು ಇಡೀ ಜಗತ್ತಿಗೆ ತೋರಿಸುವ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಬಂದಿರುವುದಾಗಿ ಪ್ರಥಮಾ ಪ್ರಸಾದ್ ಹೇಳಿಕೊಂಡಿದ್ದಾರೆ.
ನಟಿ, ಅದ್ಭುತ ನೃತ್ಯ ಕಲಾವಿದೆ ಹಾಗೂ ಹಾಡುಗಾರ್ತಿಯಾಗಿ ಗುರುತಿಸಿಕೊಂಡಿರುವ ಪ್ರಥಮಾ, ಬಹುಮುಖ ಪ್ರತಿಭೆಯ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ.
ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಅವರು ಬಿಗ್ ಬಾಸ್ ಸೀಸನ್-13ರ ನಾಲ್ಕನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಬಿಗ್ ಬಾಸ್ ವೇದಿಕೆ ಮೇಲೆ ಹಾಡೊಂದನ್ನು ಹಾಡುವ ಮೂಲಕ ಗಮನ ಸೆಳೆದ ಅವಿನಾಶ್, ತಾವು ಸೋತವನು ಹಾಗೂ ಸ್ವಾತಂತ್ರ್ಯ ಪ್ರೇಮಿ ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್-13ರ ಮೂರನೇ ಸ್ಪರ್ಧಿಯಾಗಿ ವಿಭಿನ್ನ ವ್ಯಕ್ತಿತ್ವದ ಗಾಯಕ ಅವಿನಾಶ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮಸ್ಕತ್‌ನಲ್ಲಿ ಹುಟ್ಟಿ, ಮೂಲತಃ ಮಂಗಳೂರಿನವರಾದ ಸೌಂದರ್ಯ ಶೆಟ್ಟಿ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದು, ಸದಾ ಜಾಲಿಯಾಗಿರೋ ಬೋಲ್ಡ್ ಹುಡುಗಿಯಾಗಿ ಗ್ಲಾಮರ್‌ನಿಂದಲೇ ಸಖತ್ ಸೌಂಡು ಮಾಡ್ತಿದ್ದಾರೆ.
ಬಿಗ್ ಬಾಸ್ ಸೀಸನ್-13ರ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಸೌಂದರ್ಯ ಶೆಟ್ಟಿ ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಅದ್ಭುತ ಟೈಮಿಂಗ್ ಹಾಗೂ ಹಾಸ್ಯ ನಟನೆಯಿಂದಲೇ ಜನಪ್ರಿಯರಾಗಿರುವ ಜಗ್ಗು ಮಮ್ಮಿ, ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುವ ಮೂಲಕ ಶೋಗೆ ಭರ್ಜರಿ ಆರಂಭ ನೀಡಿದ್ದಾರೆ.
‘ಲವ್ ಮಾಕ್ಟೇಲ್ 3’ ಸಿನಿಮಾದ ಖ್ಯಾತ ಹಾಸ್ಯನಟ ಜಗದೀಶ್ ಎಂ. ಬಿ. (ಜಗ್ಗು ಮಮ್ಮಿ) ಬಿಗ್ ಬಾಸ್ ಸೀಸನ್-13ರ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಕನ್ನಡದ ಸುದೀಪ್, ಮಲಯಾಳಂನ ಮೋಹನ್‌ಲಾಲ್, ತಮಿಳಿನ ವಿಜಯ್ ಸೇತುಪತಿ ಹಾಗೂ ತೆಲುಗಿನ ನಾಗಾರ್ಜುನ ಅಕ್ಕಿನೇನಿ ಒಟ್ಟಿಗೆ ತೆರೆಹಂಚಿಕೊಂಡು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ.