ದಿನಭವಿಷ್ಯ: ಇಂದು ಈ ರಾಶಿಯವರ ಸ್ವಾರ್ಥದಿಂದ ಮಿತ್ರರು ನಷ್ಟವಾಗುವರು; ಯಾರಿಗೆ ಶುಭ?

ದಿನಭವಿಷ್ಯ (09 ಸೆಪ್ಟೆಂಬರ್ 2026)

Photo Credits: AI Generated

ಸೆಪ್ಟೆಂಬರ್ 09, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಬುಧವಾರದಂದು ಫಲಿತಾಂಶದಿಂದ ತಳಮಳ, ಮಾತಿನ ಬಂಧನ, ಅನವಶ್ಯಕ ಖರೀದಿ, ಏಕಾಂಗಿಯ ಅನುಭವ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ಶತ್ರುಗಳ ಮೇಲೆ ಜಯ, ದಾಖಲೆಗಳ ಸಂಗ್ರಹ ಇವೆಲ್ಲ ಇಂದಿನ ಭವಿಷ್ಯ.

ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.

ಮೇಷ ರಾಶಿ

ಆತುರದ ನಿರ್ಧಾರಗಳನ್ನು ತಗೊಳ್ಳದೆ ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಅಧ್ಯಾತ್ಮ ಹಾಗೂ ಧಾರ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ವ್ಯಾಪಾರ-ಉದ್ಯಮದ ಕೆಲಸಗಳಿಗಾಗಿ ಪ್ರಯಾಣ ಬೆಳೆಸಬೇಕಾಗಬಹುದು.

ವೃಷಭ ರಾಶಿ

ಕುಟುಂಬದವರ ಮೇಲೆ ಹೆಚ್ಚಿನ ಕಾಳಜಿ ವಹಿಸುವಿರಿ. ಸಮಯ ಪಾಲನೆಗೆ ಆದ್ಯತೆ ನೀಡಿ ಎಲ್ಲರ ಮೆಚ್ಚುಗೆ ಪಡೆಯುವಿರಿ. ಮನೆ ವಾತಾವರಣ ಪ್ರಸನ್ನವಾಗಿರಲಿದೆ. ಅನಗತ್ಯ ಮಾನಸಿಕ ಒತ್ತಡಗಳಿಂದ ಹೊರಬಂದು ನಿರಾಳವಾಗುವಿರಿ.

ಮಿಥುನ ರಾಶಿ

ಅನಗತ್ಯ ಮಾತಿನಿಂದ ಒರಟುತನ ಪ್ರದರ್ಶಿಸಬೇಡಿ, ಸಂಬಂಧಗಳಿಗೆ ಬೆಲೆ ನೀಡಿ. ಆಲಂಕಾರಿಕ ವಸ್ತುಗಳ ಖರೀದಿಗೆ ಆತುರ ಬೇಡ. ಪರೋಪಕಾರದ ಗುಣ ನಿಮ್ಮ ಮನಸ್ಸಿಗೆ ತೃಪ್ತಿ ನೀಡಲಿದೆ. ಸಮಯವನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ.

ಕರ್ಕಾಟಕ ರಾಶಿ

ಪ್ರಭಾವಿ ವ್ಯಕ್ತಿಗಳ ಸನ್ನಿಧಾನದಿಂದ ಹೊಸ ನಂಟ ಬೆಳೆಯಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆ ಪಡೆಯಲಿವೆ. ಆರ್ಥಿಕ ಹರಿವು ಚೆನ್ನಾಗಿದ್ದರೂ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಒಳಿತು.

ಸಿಂಹ ರಾಶಿ

ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಧನಾತ್ಮಕವಾಗಿ ಯೋಚಿಸಿ. ಮಾತು ಮತ್ತು ನಡವಳಿಕೆಯಲ್ಲಿ ಸೌಮ್ಯತೆ ಇರಲಿ. ಮನೋರಂಜನೆಗೆ ಕೊಂಚ ಸಮಯ ನೀಡುವಿರಿ.

ಕನ್ಯಾ ರಾಶಿ

ವಿವಾಹ ಆಕಾಂಕ್ಷಿಗಳಿಗೆ ಸೂಕ್ತ ನೆಂಟಸ್ಥಿಕೆ ಕೂಡಿಬರುವ ಶುಭ ಯೋಗವಿದೆ. ಆರ್ಥಿಕ ಮುಗ್ಗಟ್ಟು ಕಡಿಮೆಯಾಗಲಿದ್ದು, ಸಾಲ ತೀರಿಸಲು ಪ್ರಯತ್ನಿಸುವಿರಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಾಮರಸ್ಯ ಕಾಯ್ದುಕೊಳ್ಳುವುದು ಅಗತ್ಯ.

ತುಲಾ ರಾಶಿ

ನಿಮ್ಮ ಹಠಮಾರಿತನ ಬಿಟ್ಟು ಹಿರಿಯರ ಸಲಹೆಗಳನ್ನು ಕೇಳುವುದು ಒಳಿತು. ಗೌರವ ಸಿಗುವ ಸ್ಥಳಗಳಲ್ಲಿ ಸಕ್ರಿಯರಾಗಿರಿ. ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ವಹಿಸಬೇಕಾಗಬಹುದು. ಆರ್ಥಿಕ ಹಾದಿ ಗೋಚರಿಸಲಿದೆ.

ವೃಶ್ಚಿಕ ರಾಶಿ

ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರಲಿದ್ದು ಸಮಯ ನಿರ್ವಹಣೆ ಮುಖ್ಯ. ಆದಾಯ ಹೆಚ್ಚಿಸಿಕೊಳ್ಳಲು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಿ. ಆರೋಗ್ಯದ ಕಡೆಗೆ ಗಮನ ಹರಿಸಿ. ಸಂಗಾತಿಯ ಬೆಂಬಲ ಮನಸ್ಸಿಗೆ ಧೈರ್ಯ ತುಂಬಲಿದೆ.

ಧನು ರಾಶಿ

ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಯೋಚಿಸಿ. ಅನಗತ್ಯ ಕೋಪ ಮತ್ತು ಒತ್ತಡದಿಂದ ದೂರವಿರಿ. ಹೂಡಿಕೆ ವಿಚಾರಗಳಲ್ಲಿ ಜಾಗರೂಕರಾಗಿರಿ. ಕುಟುಂಬದಲ್ಲಿ ತಾಳ್ಮೆಯಿಂದ ಇರಿ.

ಮಕರ ರಾಶಿ

ವಿಫಲತೆ ಕಂಡು ಎದೆಗುಂದದೆ ಛಲದಿಂದ ಮುನ್ನಡೆಯಿರಿ. ಕಚೇರಿಯ ಕೆಲಸದ ಒತ್ತಡವನ್ನು ಸುಲಭವಾಗಿ ನಿರ್ವಹಿಸುವಿರಿ. ನಿಮ್ಮ ಮೃದುವಾದ ಮಾತುಗಳು ಎಲ್ಲರ ಗಮನ ಸೆಳೆಯಲಿವೆ. ವಿಶ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಿ.

ಕುಂಭ ರಾಶಿ

ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆಸ್ತಿ ಮತ್ತು ಭೂ ವ್ಯವಹಾರಗಳಲ್ಲಿ ಮಕ್ಕಳ ನೆರವು ಸಿಗಲಿದೆ. ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರ ತಗೊಳ್ಳಿ. ಕೆಲಸದಲ್ಲಿ ಗೊಂದಲ ಬೇಡ.

ಮೀನ ರಾಶಿ

ಸಾಮಾಜಿಕ ಗೌರವ ಮತ್ತು ಮನ್ನಣೆ ಲಭಿಸಲಿದೆ. ನಿಮ್ಮ ಸ್ವಂತ ಶ್ರಮ ಮತ್ತು ಸಾಮರ್ಥ್ಯದ ಮೇಲೆ ಭರವಸೆ ಇಟ್ಟು ಮುನ್ನಡೆಯಿರಿ. ಅತಿಯಾದ ಹಸ್ತಕ್ಷೇಪಗಳಿಂದ ದೂರವಿದ್ದು ಸ್ವಂತ ಕೆಲಸಗಳತ್ತ ಗಮನ ಹರಿಸುವುದು ಒಳಿತು.

ಇಂದಿನ ಪಂಚಾಂಗ (09 ಸೆಪ್ಟೆಂಬರ್ 2026)

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಕೃಷ್ಣ ಪಕ್ಷ

ತಿಥಿ: ತ್ರಯೋದಶೀ | ವಾರ: ಬುಧವಾರ

ನಕ್ಷತ್ರ: ಪುನರ್ವಸು | ಯೋಗ: ಪರಿಘ | ಕರಣ: ಗರಜ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:24

ರಾಹು ಕಾಲ: 12:17 PM – 01:59 PM

ಯಮಗಂಡ ಕಾಲ: 07:42 AM – 09:13 AM

ಗುಳಿಕ ಕಾಲ: 10:45 AM – 12:17 PM