☔ Weather
Bengaluru: 🌧️ 21°C | AQI 49
Mysore: 🌦️ 22°C | AQI 42
Mangalore: ⛈️ 25°C | AQI 75
Bengaluru: 🌧️ 21°C | AQI 49

Daily Horoscope 24: ಈ ರಾಶಿಯವರಿಗೆ ಇಂದು ಹಣಕಾಸಿನ ಹಿನ್ನಡೆ; ನಿಮಗಿಂದು ಶುಭವೋ? ಅಶುಭವೋ?

Daily Horoscope 24: Financial Hurdles Ahead for These Zodiac Signs

Daily Horoscope 24: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ತ್ರಯೋದಶೀ ತಿಥಿಯ ಗುರುವಾರದ ಭವಿಷ್ಯದಲ್ಲಿದೆ (Dina Bhavishya) ಪರೋಕ್ಷ ನಿಂದನೆ, ವಿದ್ಯಾಭ್ಯಾಸದಲ್ಲಿ ಗೊಂದಲ, ದುಷ್ಕೃತ್ಯಕ್ಕೆ ಪ್ರೇರಣೆ, ಮನಸ್ಸಿಗೆ ಬೇಸರ, ವಿದೇಶ ಪ್ರಯಾಣದ ಒತ್ತಡ ಮತ್ತು ಅಪಾಯದಿಂದ ರಕ್ಷಣೆ. ಇಂದು ದ್ವಾದಶ ರಾಶಿಗಳ ದಿನಫಲ ಹೇಗಿರಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಮೇಷ ರಾಶಿ

ಕಾನೂನು ಬಾಹಿರ ವ್ಯವಹಾರಗಳಿಂದ ತೊಂದರೆ ಎದುರಾಗಬಹುದು. ನಿದ್ರಾಹೀನತೆ ಮತ್ತು ಮನಸ್ಸಿನಲ್ಲಿ ಅಸಮಾಧಾನವಿರುತ್ತದೆ. ಆಪ್ತರು ದೂರವಾಗುವ ಸಾಧ್ಯತೆಯಿದ್ದು, ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಉಪಾಯದಿಂದ ನಿಮ್ಮ ಸ್ಥಾನವನ್ನು ಕಾಯ್ದುಕೊಳ್ಳಿ ಮತ್ತು ತಪ್ಪಿದ್ದಲ್ಲಿ ಒಪ್ಪಿಕೊಳ್ಳುವುದು ಒಳ್ಳೆಯದು.

ವೃಷಭ ರಾಶಿ

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯ ಸಮಯ ಸಾಲದೆಂಬ ಆತಂಕ ಕಾಡಬಹುದು. ತಾಳ್ಮೆಯಿಂದ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಿ. ಮಕ್ಕಳ ಕಾರಣದಿಂದ ವಿದೇಶ ಪ್ರವಾಸದ ಯೋಗವಿದೆ. ಅತಿಯಾದ ಮರೆವು ಮತ್ತು ತಿಳಿವಳಿಕೆಯ ಕೊರತೆಯಿಂದ ಮುಜುಗರ ಅನುಭವಿಸಬೇಕಾಗಬಹುದು.

ಮಿಥುನ ರಾಶಿ

ಹೆಚ್ಚು ಆದಾಯ ತರುವ ಯೋಜನೆಗಳು ಸಿಗಲಿವೆ, ಆದರೆ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಅಗತ್ಯ. ಕೃಷಿಯಲ್ಲಿ ಲಾಭದಾಯಕ ಯೋಜನೆಗಳು ರೂಪಿಸುವಿರಿ. ನಿವೃತ್ತಿಯಾದರೂ ನಿಮ್ಮ ಸೇವೆಗೆ ಬೇಡಿಕೆ ಇರಲಿದೆ. ಮಾನಸಿಕ ಗೊಂದಲಗಳು ಏಕಾಗ್ರತೆಗೆ ಭಂಗ ತರಬಹುದು.

ಕರ್ಕಾಟಕ ರಾಶಿ

ಹಳೆಯ ಸಂಬಂಧಗಳು ಮತ್ತೆ ಹತ್ತಿರವಾಗಲಿವೆ. ಅನಾರೋಗ್ಯದ ಕಾರಣ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಧನಾತ್ಮಕ ಚಿಂತನೆಗಳಿಂದ ಗೊಂದಲಗಳನ್ನು ಪರಿಹರಿಸಿಕೊಳ್ಳಿ. ಯಾರ ಸಲಹೆಯನ್ನೂ ಪಡೆಯದೆ ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ.

ಸಿಂಹ ರಾಶಿ

ನಿಮ್ಮ ಮಾತುಗಳಿಂದ ಇತರರು ಪ್ರಭಾವಿತರಾಗಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವ ನಿರೀಕ್ಷೆಯಿದೆ. ನೆಚ್ಚಿನವರ ಜೊತೆ ಸಮಯ ಕಳೆಯುವಿರಿ. ಸಂಗಾತಿಯೊಂದಿಗೆ ಮಾತನಾಡುವಾಗ ನಿಗಾವಿರಲಿ, ನಿಮ್ಮ ಮಾತುಗಳು ಅವರನ್ನು ಮೌನಕ್ಕೆ ತಳ್ಳಬಹುದು.

ಕನ್ಯಾ ರಾಶಿ

ಪ್ರಶಂಸೆಗಾಗಿ ಕೆಲಸ ಮಾಡದೆ ಕರ್ತವ್ಯದೃಷ್ಟಿಯಿಂದ ಕಾರ್ಯನಿರ್ವಹಿಸಿ, ಗೌರವ ತಾನಾಗಿಯೇ ಹುಡುಕಿಕೊಂಡು ಬರಲಿದೆ. ದ್ವೇಷ ಸಾಧಿಸುವ ಗುಣವನ್ನು ಬಿಡುವುದು ಕ್ಷೇಮ. ದೃಶ್ಯಮಾಧ್ಯಮದವರಿಗೆ ಹೆಚ್ಚಿನ ಆದಾಯದ ಅವಕಾಶಗಳು ಒದಗಿಬರಲಿವೆ.

ತುಲಾ ರಾಶಿ

ಸಾಮಾಜಿಕ ಕಾರ್ಯಗಳಿಗಾಗಿ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ವ್ಯಕ್ತವಾಗಬಹುದು. ದೈಹಿಕ ನೋವನ್ನು ಸಹಿಸುವ ಶಕ್ತಿ ಬರಲಿದೆ. ಸಮಯ ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳಿ.

ವೃಶ್ಚಿಕ ರಾಶಿ

ಅನಾನುಕೂಲ ವಾತಾವರಣದಿಂದ ಹೊರಬರುವಿರಿ. ಇಂದು ಏಕಾಂತವು ನಿಮಗೆ ಹೆಚ್ಚು ಪ್ರಿಯವೆನಿಸಲಿದೆ. ಆರ್ಥಿಕ ಅಭಿವೃದ್ಧಿಯಿಂದ ಮನಸ್ಸಿಗೆ ಸಂತೋಷವಾಗಲಿದ್ದು, ಆದಾಯವನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸುವಿರಿ. ಚಂಚಲ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಧನು ರಾಶಿ

ಇಂದಿನ ಲೆಕ್ಕಾಚಾರಗಳು ಸರಿಯಾಗಿ ಫಲ ನೀಡಲಿವೆ. ಸಹನೆಯ ಗುಣವು ನಿಮಗೆ ಹಲವು ಅನುಕೂಲಗಳನ್ನು ಮಾಡಿಕೊಡಲಿದೆ. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಸುಮ್ಮನೆ ಮಾತನಾಡಿ ಸಮಯ ಹಾಳು ಮಾಡಬೇಡಿ.

ಮಕರ ರಾಶಿ

ಹಣಕಾಸಿನ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ವ್ಯಾಪಾರ-ವಹಿವಾಟಿನಲ್ಲಿ ಉತ್ತಮ ಲಾಭ ಸಿಗಲಿದ್ದು, ಉತ್ಸಾಹ ಹೆಚ್ಚಾಗಲಿದೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಉತ್ತಮ ಪ್ರಚಾರ ಮತ್ತು ಮನ್ನಣೆ ಸಿಗಲಿದೆ.

ಕುಂಭ ರಾಶಿ

ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಮೂಡಬಹುದು. ಅನಗತ್ಯ ವಿಚಾರಗಳಿಗಾಗಿ ಅತಿಯಾದ ಓಡಾಟ ನಡೆಸಬೇಕಾದೀತು. ಮರೆವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಿಮ್ಮ ವಸ್ತುಗಳನ್ನು ಜೋಪಾನವಾಗಿಡಿ. ಕಳ್ಳತನದ ಭೀತಿ ಕಾಡಬಹುದು.

ಮೀನ ರಾಶಿ

ಪ್ರಭಾವಿ ವ್ಯಕ್ತಿಗಳ ಜೊತೆ ಹೊಸ ಬಾಂಧವ್ಯ ಬೆಳೆಯಲಿದೆ. ಉಪಾಯದಿಂದ ನಿಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವಿರಿ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿನ ಏರಿಳಿತಗಳ ಬಗ್ಗೆ ನಿಗಾವಿರಲಿ ಹಾಗೂ ಸ್ನೇಹಿತರೊಂದಿಗೆ ಅನಗತ್ಯ ಮನಸ್ತಾಪಗಳನ್ನು ತಡೆದುಕೊಳ್ಳಿ.

Daily Horoscope 24

ಸಂವತ್ಸರ: ಶಾಲಿವಾಹನ ಶಕೆ 1949 (ಪರಾಭವ ಸಂವತ್ಸರ)

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಭಾದ್ರಪದ | ಸೌರ ಮಾಸ: ಕನ್ಯಾ

ಪಕ್ಷ: ಶುಕ್ಲ ಪಕ್ಷ | ತಿಥಿ: ತ್ರಯೋದಶೀ

ನಕ್ಷತ್ರ: ಶತಭಿಷಾ | ಯೋಗ: ಧೃತಿ | ಕರಣ: ತೈತಿಲ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:13

ಶುಭಾಶುಭ ಕಾಲಗಳು

ರಾಹು ಕಾಲ: ಮಧ್ಯಾಹ್ನ 01:42 ರಿಂದ 03:12

ಯಮಗಂಡ ಕಾಲ: ಬೆಳಿಗ್ಗೆ 06:10 ರಿಂದ 07:40

ಗುಳಿಕ ಕಾಲ: ಬೆಳಿಗ್ಗೆ 09:11 ರಿಂದ 10:41