ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2026-27ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಹಿಳೆಯರು ಸ್ವಯಂ ಉದ್ಯೋಗ (Self Employment) ಆರಂಭಿಸಲು ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ಅಕ್ಟೋಬರ್ 31, 2026ರ ಒಳಗೆ ಅರ್ಜಿ ಸಲ್ಲಿಸಬಹುದು.
ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಸಮಾಜದ ವಿವಿಧ ವರ್ಗಗಳ ಮಹಿಳೆಯರು ಇದರ ಲಾಭ ಪಡೆಯಬಹುದು.
ಸ್ವಂತ ಉದ್ಯೋಗ ಮಾಡಲು ಬಯಸುವ ಅರ್ಹ ಮಹಿಳೆಯರಿಗೆ ಇದು ಸೂಕ್ತ ವೇದಿಕೆಯಾಗಿದೆ. ಸಣ್ಣ ಪ್ರಮಾಣದ ಬಿಸಿನೆಸ್ ಆರಂಭಿಸಲು ಸರ್ಕಾರದಿಂದ ಸಾಲ ಮತ್ತು ಭಾರಿ ಸಹಾಯಧನ ಸಿಗಲಿದೆ.
Self Employment: ರೂ. 3 ಲಕ್ಷದವರೆಗೆ ಸಾಲ & ಭಾರಿ ಸಬ್ಸಿಡಿ
ಉದ್ಯೋಗಿನಿ ಯೋಜನೆಯಡಿ (Udyogini Scheme) ಬ್ಯಾಂಕ್‌ಗಳ ಮೂಲಕ ಸಾಲ ಹಾಗೂ ನಿಗಮದಿಂದ ಸಹಾಯಧನ ಸಿಗಲಿದೆ. 21ರಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯೋಜನೆಯಲ್ಲಿ 50 ಸಾವಿರದಿಂದ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ದೊರೆಯಲಿದೆ.
ಇದನ್ನು ಓದಿ: Job Alert: ಹಬ್ಬದ ಋತುವಿನಲ್ಲಿ ಬರಲಿದೆ 2.5 ಲಕ್ಷ ಉದ್ಯೋಗ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡಾ 75ರಷ್ಟು ಅಂದರೆ ಗರಿಷ್ಠ 2 ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ. ಇತರೆ ವರ್ಗದ ಮಹಿಳೆಯರಿಗೆ ಶೇಕಡಾ 30ರಷ್ಟು ಅಂದರೆ ಗರಿಷ್ಠ 90 ಸಾವಿರ ರೂಪಾಯಿವರೆಗೆ ಸಬ್ಸಿಡಿ ಲಭ್ಯವಿದೆ.
ಮಹಿಳೆಯರಿಗಾಗಿ ಇರುವ ಇತರ 4 ಪ್ರಮುಖ ಯೋಜನೆಗಳು
- ಚೇತನ ಯೋಜನೆ: ದಮನಿತ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು 45 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.
- ಧನಶ್ರೀ ಯೋಜನೆ: ಎಚ್‌ಐವಿ ಸೋಂಕಿತ ಅಥವಾ ಬಾಧಿತ ಮಹಿಳೆಯರಿಗೆ ಆರ್ಥಿಕ ನೆರವಾಗಿ 45 ಸಾವಿರ ರೂಪಾಯಿ ಪ್ರೋತ್ಸಾಹಧನ ಸಿಗಲಿದೆ.
- ಲಿಂಗತ್ವ ಅಲ್ಪಸಂಖ್ಯಾತರು & ದೇವದಾಸಿ ಪುನರ್ವಸತಿ: ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಾಜಿ ದೇವದಾಸಿ ಮಹಿಳೆಯರ ಸಬಲೀಕರಣಕ್ಕಾಗಿ ತಲಾ 45 ಸಾವಿರ ರೂಪಾಯಿ ನೆರವು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? ಕಡೆ ದಿನಾಂಕ ಯಾವಾಗ?
ಅರ್ಜಿದಾರರ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯ. ಹಾಗೆಯೇ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು. ಆಸಕ್ತರು ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಚೇತನ ಮತ್ತು ಧನಶ್ರೀ ಯೋಜನೆಗಳಿಗೆ ನೇರವಾಗಿ ಇಲಾಖೆಯ ಕಚೇರಿಯಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2026 ಸಂಜೆ 5.30ರವರೆಗೆ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ kswdc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.




