☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 28°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 28°C | AQI 180
Bengaluru: ☀️ 24°C | AQI 112

Renuka Swamy Case: ಪ್ರದೋಶ್ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

Renuka Swamy Case: Court Rejects Bail Application Of Accused Pradosh
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ತಂದೆಯ ಕಾರ್ಯಕ್ಕಾಗಿ 3 ವಾರ ಜಾಮೀನು ಕೋರಿದ್ದ ಪ್ರದೋಶ್.
  • ದರ್ಶನ್ ಪರ ವಕೀಲರು ಹಾಗೂ ಪಿಪಿ ಆಕ್ಷೇಪದಿಂದ ಅರ್ಜಿ ವಜಾ.
  • ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿದ್ದ ಪ್ರದೋಶ್‌ಗೆ ಹಿನ್ನಡೆ.

ರೇಣುಕಾ ಸ್ವಾಮಿ ಕೊಲೆ (Renuka Swamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಮುಖ್ಯ ಪ್ರಕರಣದ ವಿಚಾರಣೆ ಜೊತೆಗೆ ಆರೋಪಿಗಳ ಜಾಮೀನು ಅರ್ಜಿಗಳು ಹಾಗೂ ಇತರ ಕೋರಿಕೆಗಳ ವಿಚಾರಣೆ ನ್ಯಾಯಾಲಯದಲ್ಲಿ ಸಾಗಿದೆ. ಇದೀಗ ಪ್ರಕರಣದಲ್ಲಿ ಮಹತ್ವದ ತಿರುವು ನೀಡಿದ್ದ ಆರೋಪಿ ಪ್ರದೋಶ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ತಮ್ಮ ತಂದೆಯ ಕಾರ್ಯ ಮಾಡಬೇಕಿರುವ ಕಾರಣ ನೀಡಿ ಮೂರು ವಾರಗಳ ಕಾಲ ತಾತ್ಕಾಲಿಕ ಜಾಮೀನು ನೀಡಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಪ್ರದೋಶ್ ಪರ ವಕೀಲರು ಸುದೀರ್ಘ ವಾದ ಮಂಡಿಸಿ, ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಕೋರಿದ್ದರು. ಅಲ್ಲದೆ ಜೀವ ಬೆದರಿಕೆ ಇರುವ ಕಾರಣದಿಂದ ಬೇರೆ ಠಾಣೆಯಲ್ಲಿ ಹಾಜರಿಗೆ ಅವಕಾಶ ಕೋರಿದ್ದರು.

ಆದರೆ ದರ್ಶನ್ ಪರ ವಕೀಲರು ಪ್ರದೋಶ್ ಜಾಮೀನು ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸಹ ಕಾನೂನು ತೊಡಕುಗಳನ್ನು ಎತ್ತಿ ಹೇಳಿದ್ದರು. ಎಲ್ಲಾ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ಪ್ರದೋಶ್ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.

ಮಾಫಿ ಸಾಕ್ಷಿಯಾಗಿ ಬದಲಾಗಿದ್ದ ಪ್ರದೋಶ್

ಪ್ರದೋಶ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಇತ್ತೀಚೆಗೆ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಚಿಂಚೂ ಮಾಹಿತಿಯನ್ನು ನ್ಯಾಯಾಧೀಶರ ಮುಂದೆ ಅವರು ನೀಡಿದ್ದರು. ತಮ್ಮ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ದರ್ಶನ್ ಪರ ವಕೀಲರು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಪೊಲೀಸರ ಒತ್ತಡಕ್ಕೆ ಮಣಿದು ಪ್ರದೋಶ್ ಈ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಆದರೆ ಮಾಫಿ ಸಾಕ್ಷಿ ದಾಖಲಾದ ಬೆನ್ನಲ್ಲೇ ಪ್ರದೋಶ್ ಸಲ್ಲಿಸಿದ್ದ ಜಾಮೀನು ಅರ್ಜಿ ಈಗ ವಜಾ ಆಗಿದೆ.

ಇದನ್ನು ಓದಿ: Darshan Case: ಸಾಕ್ಷಿ ಉಲ್ಟಾ; ಇಂದು SPP ಕ್ರಾಸ್ ಎಕ್ಸಾಮಿನೇಷನ್

Renuka Swamy Case: ದರ್ಶನ್ ಜಾಮೀನಿಗೂ ಸುಪ್ರೀಂಕೋರ್ಟ್ ಬ್ರೇಕ್

ಈ ಹಿಂದೆ ಇದೇ ನ್ಯಾಯಾಲಯದಲ್ಲಿದ್ದ ಇತರ ಕೆಲ ಆರೋಪಿಗಳ ಜಾಮೀನು ಅರ್ಜಿಗಳನ್ನು ಸಹ ಕೋರ್ಟ್ ವಜಾ ಮಾಡಿತ್ತು. ಇದೀಗ ಪ್ರದೋಶ್ ಅರ್ಜಿಗೂ ಹಿನ್ನಡೆಯಾಗಿದ್ದು, ಜೈಲುವಾಸ ಮುಂದುವರಿಯಲಿದೆ.

ಇನ್ನೊಂದೆಡೆ ನಟ ದರ್ಶನ್‌ಗೆ ಕನಿಷ್ಠ ಒಂದು ವರ್ಷಗಳ ಕಾಲ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಕಟ್ಟುನಿಟ್ಟಿನ ಆದೇಶ ನೀಡಿದೆ. ಹೀಗಾಗಿ ಪ್ರಕರಣದ ಆರೋಪಿಗಳಿಗೆ ಕಾನೂನಿನ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.