BBK 13: ಬಿಗ್ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಕಳೆದ ವಾರ ಇಬ್ಬರು ಸ್ಪರ್ಧಿಗಳು ಹೊರಹೋಗಿದ್ದರೆ, ಈ ವಾರ ಮತ್ತೊಬ್ಬರ ಎವಿಕ್ಷನ್ ನಡೆದಿದೆ. ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಮುಖವಾಡ ಧರಿಸಿದ ಕಮಾಂಡೋಗಳು ಬಂದು ವಿಭಿನ್ನವಾಗಿ ಎವಿಕ್ಷನ್ ನಡೆಸಿದ್ದಾರೆ.
ಅಂತಿಮವಾಗಿ ಉಳಿದುಕೊಂಡಿದ್ದ ಮೂವರು ಸ್ಪರ್ಧಿಗಳು
ಈ ವಾರ ನಾಮಿನೇಟ್ ಆಗಿದ್ದವರ ಪೈಕಿ ಯಶಸ್, ಮಂಜು ಮತ್ತು ಧನುಶ್ ಅವರನ್ನು ಕಿಚ್ಚ ಸುದೀಪ್ ಮೊದಲೇ ಸೇವ್ ಮಾಡಿದ್ದರು. ಅಂತಿಮವಾಗಿ Danger ಝೋನ್ನಲ್ಲಿ ಸಂಗೀತಾ, ಲಿಖಿತ್ ಮತ್ತು ಶಾಸ್ತ್ರಿ ಉಳಿದುಕೊಂಡಿದ್ದರು. ಸುದೀಪ್ ಹೇಳಿದಂತೆ ಕಪ್ಪು ಬಟ್ಟೆ ಮತ್ತು ಕಪ್ಪು ಮುಖವಾಡ ಹಾಕಿಕೊಂಡ ಕಮಾಂಡೋಗಳು ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟರು. ಮೂವರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಮನೆಯಿಂದ ಹೊರಗೆ ಕರೆದುಕೊಂಡು ಹೋದರು.
ಇದನ್ನು ಓದಿ: BBK 13: ತಾಂಡವ್ ನೇರ ಮಾತಿಗೆ ಗರಂ ಆದ ಆಸಿಯಾ; ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರಂಪಾಟ
ಬಿಗ್ಬಾಸ್ ಮನೆಯಿಂದ ಕೊನೆಗೂ ಎವಿಕ್ಟ್ ಆದ ಲಿಖಿತ್
ಹೊರಗೆ ಕರೆದೊಯ್ದ ಸ್ವಲ್ಪ ಹೊತ್ತಿನ ಬಳಿಕ ಮೊದಲು ಸಂಗೀತಾ ಅವರು ಮನೆಗೆ ವಾಪಸ್ ಬಂದರು. ಅದಾದ ನಂತರ ಶಾಸ್ತ್ರಿ ಕೂಡ ಸುರಕ್ಷಿತವಾಗಿ ಮನೆಯೊಳಗೆ ಪ್ರವೇಶಿಸಿದರು. ಅಲ್ಲಿಗೆ ಲಿಖಿತ್ ಅವರು ಈ ವಾರದ ಎವಿಕ್ಷನ್ನಲ್ಲಿ ಬಿಗ್ಬಾಸ್ ಮನೆಯಿಂದ ಹೊರಬೀಳುವುದು ಖಚಿತವಾಯಿತು.

ನಿಯಮ ಉಲ್ಲಂಘನೆಗೆ ಬೆಲೆ ತೆತ್ತ ಸ್ಪರ್ಧಿ
ನಿಯಮಗಳನ್ನು ಪದೇ ಪದೇ ಮುರಿಯುತ್ತಿದ್ದ ಲಿಖಿತ್ ಅವರಿಗೆ ಕಳೆದ ವಾರವೇ ಸುದೀಪ್ ಎಚ್ಚರಿಕೆ ನೀಡಿದ್ದರು. ಬಿಗ್ಬಾಸ್ ನಿಯಮಗಳನ್ನು ಮೀರಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಶನಿವಾರದ ಎಪಿಸೋಡ್ನಲ್ಲೂ ಬುದ್ಧಿವಾದ ಹೇಳಿದ್ದರು. ಸುದೀಪ್ ಅವರ ಎಚ್ಚರಿಕೆಯ ಬೆನ್ನಲ್ಲೇ ಲಿಖಿತ್ ಈ ವಾರ ಮನೆಯಿಂದ ನೇರವಾಗಿ ಎಲಿಮಿನೇಟ್ ಆಗಿದ್ದಾರೆ.
BBK 13: ಹೊರಗೆ ಬಂದ ಬಳಿಕ ಲಿಖಿತ್ ಹೇಳಿದ್ದೇನು?
ಮನೆಯಿಂದ ಹೊರಗೆ ಬಂದ ಬಳಿಕ ಮಾತನಾಡಿದ ಲಿಖಿತ್, ತಮಗೆ ಈ ವಾರ ಎವಿಕ್ಟ್ ಆಗುವ ನಿರೀಕ್ಷೆ ಇತ್ತು ಎಂದಿದ್ದಾರೆ. “ನನ್ನ ಕೋಪ ಹಾಗೂ ತಪ್ಪು ನಿರ್ಧಾರಗಳಿಂದಾಗಿಯೇ ನಾನು ಇಂದು ಹೊರಗೆ ಬರಬೇಕಾಯಿತು” ಎಂದು ಒಪ್ಪಿಕೊಂಡಿದ್ದಾರೆ. ಅಗ್ನಿಪರೀಕ್ಷೆಯ ಮೂಲಕ ಆಯ್ಕೆಯಾಗಿದ್ದ ಲಿಖಿತ್, ಕಳೆದ ಕೆಲವು ವಾರಗಳಿಂದ ನಾಮಿನೇಟ್ ಆಗುತ್ತಿದ್ದು ಕೊನೆಗೂ ಆಟ ಮುಗಿಸಿದ್ದಾರೆ.




