☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Bigg Boss Kannada: ಬಿಗ್​​ಬಾಸ್ ಮನೆಯಿಂದ ಅಚ್ಚರಿಯ ಎಲಿಮಿನೇಷನ್: ಹೊರ ಹೋಗಿದ್ದು ಯಾರು?

Bigg Boss Kannada

ಬಿಗ್​​ಬಾಸ್ ಕನ್ನಡ ಸೀಸನ್ 13ರ (Bigg Boss Kannada) ಮೂರನೇ ವಾರಕ್ಕೆ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಕಳೆದ ವಾರ ಇಬ್ಬರು ಸ್ಪರ್ಧಿಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಆದರೆ ಈ ವಾರ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಈ ವಾರದ ಎವಿಕ್ಷನ್ ಹಲವು ಪ್ರೇಕ್ಷಕರಿಗೆ ಅಚ್ಚರಿಯನ್ನೂ ಸಹ ತಂದಿದೆ. ಈ ವಾರ ‘ಅಗ್ನಿ ಬಾಯ್ಸ್’ನಲ್ಲಿ ಒಬ್ಬರು ಬಿಗ್​​ಬಾಸ್ ಮನೆಯ ಪಯಣ ಅಂತ್ಯಗೊಳಿಸಿದ್ದಾರೆ.

ಅಗ್ನಿಪರೀಕ್ಷೆ ಮೂಲಕ ಆಯ್ಕೆಯಾಗಿ ಬಿಗ್​​ಬಾಸ್ ಮನೆಗೆ ಬಂದಿದ್ದ ಯುವ ಸ್ಪರ್ಧಿ ಲಿಖಿತ್ ಗೋಂಧಿ ಈ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಲಿಖಿತ್ ಗೋಂಧಿ ಒಳ್ಳೆಯ ಆಟವನ್ನೇ ಆಡುತ್ತಿದ್ದರು, ಆದರೆ ಅವರಿಗೆ ತಮ್ಮ ಅತಿರೇಕದ ವರ್ತನೆಯೇ ಮುಳುವಾಯ್ತು. ಸುದೀಪ್ ಅವರು ಕಳೆದ ವಾರವೇ ಲಿಖಿತ್​​ಗೆ ಎಚ್ಚರಿಕೆ ನೀಡಿದ್ದರು. ‘ಬಿಗ್​​ಬಾಸ್ ನಿಯಮಗಳನ್ನು ಗೌರವಿಸದೇ ಇದ್ದರೆ, ಬಿಗ್​​ಬಾಸ್ ಆಟಗಳನ್ನು ಗೌರವಿಸದೇ ಇದ್ದರೆ, ಸಹ ಸ್ಪರ್ಧಿಗಳನ್ನು ಗೌರವಿಸದೇ ಇದ್ದರೆ ಮನೆಯಿಂದ ಹೊರಗೆ ಹೋಗುವ ಸಮಯ ಬರುತ್ತದೆ’ ಎಂದಿದ್ದರು. ಅದರಂತೆ ಲಿಖಿತ್ ಗೋಂಧಿ ಈಗ ಮನೆಯಿಂದ ಹೊರಗೆ ಹೋಗಿದ್ದಾರೆ.

ಎವಿಕ್ಷನ್‌ಗೆ ಕಾರಣವೇನು?

ಆರಂಭದಿಂದಲೂ ಲಿಖಿತ್ ಗೋಂಧಿ ಒಳ್ಳೆಯ ಆಟಗಾರನಾಗಿ ಗುರುತಿಸಿಕೊಳ್ಳುವ ಬದಲು ಕಿರಿ-ಕಿರಿ ಮಾಡುವ ವ್ಯಕ್ತಿ, ತರ್ಲೆ ಮನುಷ್ಯ, ಹಠಮಾರಿ, ಸೋಮಾರಿ ಹೀಗೆ ನೆಗೆಟಿವ್ ಆಗಿಯೇ ಗುರುತಿಸಿಕೊಂಡಿದ್ದರು. ಮನೆಯಲ್ಲಿ ಆಸಿಯಾ ಅವರನ್ನು ರೇಗಿಸುವುದು, ಮನೆಯ ಕೆಲಸಗಳನ್ನು ಸೂಕ್ತವಾಗಿ ಮಾಡದೇ ಇರುವುದು, ಸುಖಾ-ಸುಮ್ಮನೆ ಕೆಲವರ ಮೇಲೆ ಜಗಳ ಮಾಡುವುದು ಇಂಥಹಾ ಅನವಶ್ಯಕ ಕಾರಣಗಳಿಗಾಗಿ ಮಾತ್ರವೇ ಅವರು ಸುದ್ದಿಯಲ್ಲಿದ್ದರೇ ವಿನಃ ಅವರು ಟಾಸ್ಕ್​​ಗಳಲ್ಲಿ ಸರಿಯಾಗಿ ಆಡಿದ್ದಿಲ್ಲ, ಕಳೆದ ವಾರ ಬಿಗ್​​ಬಾಸ್ ಕೊಟ್ಟಿದ್ದ ಉಸ್ತುವಾರಿ ಜವಾಬ್ದಾರಿಯನ್ನು ಸಹ ಅವರಿಗೆ ನಿಭಾಯಿಸಲು ಆಗಿರಲಿಲ್ಲ.

ಅಗ್ನಿ ಪರೀಕ್ಷೆಯ ಮೂಲಕ ಮಂಜ, ಶಾಸ್ತ್ರಿ, ಲಿಖಿತ್ ಮತ್ತು ಧನುಶ್ ಒಟ್ಟು ನಾಲ್ಕು ಜನ ಮನೆಯ ಒಳಗೆ ಬಂದಿದ್ದರು. ಮೊದಲಲ್ಲಿ ನಾಲ್ವರು ಒಂದು ಗುಂಪಾಗಿ ಆಟ ಆಡಿದರು. ಆದರೆ ಈಗ ಅವರಲ್ಲಿ ಲಿಖಿತ್ ಹೊರಗೆ ಹೋಗಿದ್ದಾರೆ. ಅದರಲ್ಲೂ ಲಿಖಿತ್​​ ಹಾಗೂ ಮಂಜ ಬಲು ಆತ್ಮೀಯವಾಗಿ ಇದ್ದವರು. ಈಗ ಲಿಖಿತ್ ಹೊರಗೆ ಹೋದ ಬಳಿಕ ಮಂಜನ ಆಟದ ಮೇಲೆ ಅದು ಪ್ರಭಾವ ಬೀರುವ ಸಾಧ್ಯತೆ ಇದೆ.