☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Singeetam Srinivasa Rao: ‘ಆನಂದ್’ ನಿರ್ದೇಶಕ ಸಿಂಗೀತಂ ನಿಧನಕ್ಕೆ ಶಿವಣ್ಣ ಭಾವುಕ

Singeetam Srinivasa Rao: Shiva Rajkumar Emotional Note On Director Singeetam Srinivasa Rao Demise

Singeetam Srinivasa Rao: ಬಹುಭಾಷಾ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (94) ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ತಮ್ಮ ಚೊಚ್ಚಲ ಚಿತ್ರದ ನಿರ್ದೇಶಕನ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ಹಿರಿಯ ಜೀವಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ಆನಂದ್’ ಚಿತ್ರದ ಮೂಲಕ ಆರಂಭವಾದ ಶಿವಣ್ಣನ ಅಭಿನಯ ಪಯಣ

ಶಿವರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ ‘ಆನಂದ್’ (1986) ಮೂಡಿಬಂದಿದ್ದು ಸಿಂಗೀತಂ ಅವರ ನಿರ್ದೇಶನದಲ್ಲೇ. “ನನಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ನೀಡಿದವರು ಹಾಗೂ ನನ್ನ 40 ವರ್ಷಗಳ ಪಯಣಕ್ಕೆ ಬುನಾದಿ ಹಾಕಿದವರು ನೀವು” ಎಂದು ಶಿವಣ್ಣ ಸ್ಮರಿಸಿದ್ದಾರೆ. 94ನೇ ವಯಸ್ಸಿನಲ್ಲೂ ಸಕ್ರಿಯವಾಗಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದ ಸಿಂಗೀತಂ ಇಡೀ ಜಗತ್ತಿಗೇ ಸ್ಫೂರ್ತಿಯಾಗಿದ್ದರು.

ವಯಸ್ಸು ಕೇವಲ ಒಂದು ಸಂಖ್ಯೆ ಎಂದ ಶಿವಣ್ಣ

“ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದಕ್ಕೆ ನೀವೇ ಅತ್ಯುತ್ತಮ ಉದಾಹರಣೆ” ಎಂದು ಶಿವಣ್ಣ ಕೊಂಡಾಡಿದ್ದಾರೆ. “ನೀವು ಬರಿ ಕಲೆಯ ಭಾಗವಲ್ಲ, ನೀವೇ ಒಂದು ಕಲೆ. ಕೊನೆಯ ಉಸಿರಿನವರೆಗೂ ಸಿನಿಮಾವನ್ನೇ ಉಸಿರಾಡಿದ್ದೀರಿ” ಎಂದು ಭಾವುಕರಾಗಿದ್ದಾರೆ. ಇತ್ತೀಚೆಗೆ ತಮ್ಮಿಬ್ಬರ ನಡುವೆ ನಡೆದ ‘ಸರ್ವೈವರ್’ ಕುರಿತಾದ ಮಾತುಕತೆಯನ್ನು ಕೂಡ ಶಿವಣ್ಣ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಕಮಲ್ ಹಾಸನ್, ರಾಜಮೌಳಿಯಿಂದಲೂ ಕಂಬನಿ

ಶಿವಣ್ಣ ಮಾತ್ರವಲ್ಲದೆ ತಮಿಳು ನಟ ಕಮಲ್ ಹಾಸನ್, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜ್ಯೂ. ಎನ್‌ಟಿಆರ್ ಸಂತಾಪ ಸೂಚಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಹಲವು ಪ್ರಮುಖ ಗಣ್ಯರು ಸಿಂಗೀತಂ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. “Come back sir! ನೀವು ಎಂದಿಗೂ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ” ಎಂದು ಶಿವಣ್ಣ ಪೋಸ್ಟ್ ಮುಗಿಸಿದ್ದಾರೆ.

Singeetam Srinivasa Rao: ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಸಾರ್ವಕಾಲಿಕ ಹಿಟ್ ಚಿತ್ರಗಳು

ಸಿಂಗೀತಂ ನಿರ್ದೇಶಿಸಿದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ‘ಎರಡು ನಕ್ಷತ್ರಗಳು’ ಹಾಗೂ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದವು. ತಮಿಳಿನಲ್ಲಿ ‘ಅಪೂರ್ವ ಸಗೋದರರ್ಗಳ್’, ‘ಮೈಕೇಲ್ ಮದನ ಕಾಮರಾಜನ್’, ‘ಪೇಸುಮ್ ಪಡಮ್’ ನಂತಹ ಶ್ರೇಷ್ಠ ಸಿನಿಮಾಗಳನ್ನು ನೀಡಿದ್ದರು.