☔ Weather
Bengaluru: 🌧️ 21°C | AQI 49
Mysore: 🌦️ 22°C | AQI 42
Mangalore: ⛈️ 25°C | AQI 75
Bengaluru: 🌧️ 21°C | AQI 49

Daily Horoscope: ಇಂದಿನ ದಿನ ಭವಿಷ್ಯ; ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಮೋಸ ಎಚ್ಚರ

Daily Horoscope: Financial Fraud Risk for Scorpio, Know Today's Zodiac Predictions

Daily Horoscope: ಶಾಲಿವಾಹನ ಶಕವರ್ಷ 1949ರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಸಪ್ತಮೀ/ಅಷ್ಟಮೀ ತಿಥಿಯ ಶನಿವಾರದ ದಿನ ಭವಿಷ್ಯ ಇಲ್ಲಿದೆ. ಇಂದಿನ ದಿನವು ಪ್ರತಿಯೊಬ್ಬರ ರಾಶಿಗಳ ಮೇಲೂ ಭಿನ್ನವಾದ ಗ್ರಹಗತಿಗಳ ಪ್ರಭಾವ ಹಾಗೂ ಫಲಗಳನ್ನು ಬೀರಲಿದೆ. ವಿಶೇಷವಾಗಿ ಹಣಕಾಸು, ವೃತ್ತಿ ಮತ್ತು ಕುಟುಂಬ ಜೀವನದಲ್ಲಿ ಜಾಗರೂಕರಾಗಿರುವುದು ಅತ್ಯಗತ್ಯವಾಗಿದೆ.

ಮೇಷ ರಾಶಿ

ಮಕ್ಕಳ ಮೇಲೆ ಅತಿಯಾದ ಪ್ರೀತಿ ಇರಲಿದೆ. ದಾಂಪತ್ಯದಲ್ಲಿ ಹೊಸ ಸಂತೋಷ ಕಂಡುಕೊಳ್ಳುವಿರಿ. ಉದ್ಯೋಗದಲ್ಲಿ ಇತರರ ತಪ್ಪಿಗೆ ಉತ್ತರಿಸಬೇಕಾಗಬಹುದು.

ವೃಷಭ ರಾಶಿ

ಮನಸ್ಸಿನ ಚಂಚಲತೆ ನಿಯಂತ್ರಿಸಲು ಕಸರತ್ತು ನಡೆಸುವಿರಿ. ಉದ್ಯೋಗದ ಸ್ಥಳದಲ್ಲಿ ಅಸಮಾಧಾನ ಇರಲಿದೆ. ಸ್ನೇಹಿತರ ಮಾತುಗಳಿಂದ ಜಾಗರೂಕರಾಗಿರಿ.

ಮಿಥುನ ರಾಶಿ

ಉದ್ಯೋಗದಲ್ಲಿ ಮಹಿಳೆಯರಿಂದ ಉತ್ತಮ ಸಹಕಾರ ಸಿಗಲಿದೆ. ಹೊಸ ಬಂಧುಗಳ ಪರಿಚಯವಾಗಲಿದೆ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಕರ್ಕಾಟಕ ರಾಶಿ

ರಹಸ್ಯಗಳನ್ನು ಬಿಟ್ಟುಕೊಡಬೇಡಿ. ಭೂವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ವಾಹನ ದುರಸ್ತಿಗೆ ಹಣ ಖರ್ಚಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

ಸಾಲಬಾಧೆಯಿಂದ ತೊಂದರೆ ಅನುಭವಿಸುವಿರಿ. ವ್ಯಾಪಾರದ ಸಲುವಾಗಿ ದೂರದ ಪ್ರಯಾಣ ಮಾಡಬೇಕಾಗಬಹುದು. ಸಣ್ಣ ವಿಚಾರಕ್ಕೂ ಕಲಹ ಉಂಟಾಗಬಹುದು.

ಕನ್ಯಾ ರಾಶಿ

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಸ್ನೇಹಿತರಿಂದ ಉಡುಗೊರೆಗಳು ಲಭಿಸಲಿವೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ತುಲಾ ರಾಶಿ

ಪ್ರೇಮಪ್ರಕರಣಗಳು ದುಃಖ ತರಬಹುದು. ನಿಂದಿಸುವವರ ವಿರುದ್ಧ ಆಕ್ರೋಶ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸುವುದು ಅಗತ್ಯ.

ವೃಶ್ಚಿಕ ರಾಶಿ

ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ವ್ಯಕ್ತಿಗಳಿಂದ ಮೋಸವಾಗುವ ಸಾಧ್ಯತೆ ಇದೆ. ನಿರೀಕ್ಷಿತ ಹುದ್ದೆಯ ಬಡ್ತಿ ಸಿಗಲಿದ್ದು, ಮಾತಿನ ಮೇಲೆ ನಿಯಂತ್ರಣವಿರಲಿ.

ಧನು ರಾಶಿ

ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಬಹುದು. ಬರುವ ವಿವಾಹ ಸಂಬಂಧಗಳನ್ನು ನಿರಾಕರಿಸುವಿರಿ. ನೇರ ನುಡಿಗಳು ಇತರರಿಗೆ ನೋವು ತರಬಹುದು.

ಮಕರ ರಾಶಿ

ವಿರಾಮದ ಸಮಯವನ್ನು ಆನಂದದಿಂದ ಕಳೆಯುವಿರಿ. ಹಣದ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ. ಸ್ನೇಹಿತರ ಮೇಲೆ ಶಂಕೆ ಮೂಡಬಹುದು.

ಕುಂಭ ರಾಶಿ

ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ. ಕುಟುಂಬ ನಿರ್ವಹಣೆಯಲ್ಲಿ ಒತ್ತಡ ತಲೆದೋರಬಹುದು. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಮೀನ ರಾಶಿ (Daily Horoscope)

ಮಾನಸಿಕ ತೊಳಲಾಟಕ್ಕೆ ಸರಿಯಾದ ಪರಿಹಾರ ಸಿಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಪ್ರಯಾಣ ಸಾಧ್ಯತೆ ಇದೆ. ಸಂಗಾತಿಯ ಜೊತೆ ಸಣ್ಣಪುಟ್ಟ ಅಸಮಾಧಾನ ಬರಬಹುದು.