Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಎಸ್. ರಾವ್ ಸೆಷನ್ಸ್ ಕೋರ್ಟ್ ಮುಂದೆ ಸಾಕ್ಷಿ ಹೇಳಿಕೆ ನೀಡಿದ್ದಾರೆ. ಅರ್ಧ ಸಾಕ್ಷಿ ಹೇಳಿಕೆ ದಾಖಲಾಗಿದ್ದು, ಇಂದು ಕೂಡ ವಿಚಾರಣೆ ಪ್ರಕ್ರಿಯೆ ಮುಂದುವರೆಯಲಿದೆ.
ಪರಪ್ಪನ ಅಗ್ರಹಾರದಿಂದ ಕೋರ್ಟ್‌ಗೆ: 3 ಗಂಟೆ ಸಾಕ್ಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ಪ್ರದೋಷ್ ಅವರನ್ನು ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರ ಮುಂದೆ ಸತತ 3 ಗಂಟೆಗಳ ಕಾಲ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ದರ್ಶನ್ ಜೊತೆ ಸ್ನೇಹ ಬೆಳೆದದ್ದು ಹೇಗೆ ಹಾಗೂ ಅಪಹರಣದ ಹಂತಗಳನ್ನು ವಿವರಿಸಿದ್ದಾರೆ. ಸ್ಟೋನಿ ಬ್ರೂಕ್‌ನಲ್ಲಿ ನಡೆದ ಮೀಟಿಂಗ್ ಮತ್ತು ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹಲ್ಲೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Darshan Case: 3 ಗಂಟೆ ಪ್ರದೋಷ್ ಹೇಳಿಕೆ ದಾಖಲು; ನಾಳೆಗೆ ವಿಚಾರಣೆ ಮುಂದೂಡಿಕೆ
ಪಟ್ಟಣಗೆರೆ ಶೆಡ್‌ನಲ್ಲಿ ಏನೆಲ್ಲಾ ಆಯ್ತು?
ಘಟನೆ ನಡೆದ ದಿನ ಪಟ್ಟಣಗೆರೆ ಶೆಡ್‌ಗೆ ಯಾರೆಲ್ಲಾ ಹೋಗಿದ್ದರು ಎಂಬ ರಹಸ್ಯ ಬಯಲಾಗಿದೆ. ಶೆಡ್‌ನಲ್ಲಿ ನಡೆದ ಹಲ್ಲೆ, ನಂತರ ಶವ ಸಾಗಾಟ ಮಾಡಿದ ರೀತಿ ಹಾಗೂ ಸುಫಾರಿ ಆರೋಪಿಗಳ ವ್ಯವಸ್ಥೆಯನ್ನು ತಿಳಿಸಿದ್ದಾರೆ. 30 ಲಕ್ಷ ರೂಪಾಯಿ ಹಣದ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಕೋರ್ಟ್‌ಗೆ ನೀಡಿದ್ದಾರೆ.
Darshan Case: ಇನ್ ಕ್ಯಾಮೆರಾ ವಿಚಾರಣೆ: ದರ್ಶನ್ ವಿಡಿಯೋ ಕಾನ್ಫರೆನ್ಸ್
ಕೊಲೆ ಪ್ರಕರಣದ 29ನೇ ಸಾಕ್ಷಿಯಾಗಿರುವ ಪ್ರದೂಷ್, ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ. ಇಂದು ಪ್ರದೋಷ್ ಹೇಳಿಕೆ ಪೂರ್ಣಗೊಂಡ ಬಳಿಕ ಎಸ್ಪಿಪಿ ಪ್ರಸನ್ನ ಕುಮಾರ್ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು, ಪ್ರಾಸಿಕ್ಯೂಷನ್ ಹಾಗೂ ಪ್ರದೋಷ್ ಪರ ವಕೀಲರಿಗೆ ಮಾತ್ರ ಅವಕಾಶವಿತ್ತು. ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ಇದನ್ನು ವೀಕ್ಷಿಸಿದ್ದಾರೆ.




